ಹೈದರಾಬಾದ್ ತಂಡದ ನಾಯಕ ಅಂಬಟಿ ರಾಯುಡು ಭರ್ಜರಿ ಶತಕ ಸಿಡಿಸಿದ್ದಾರೆ.
ನವದೆಹಲಿ(ನ.02): ಟೀಂ ಇಂಡಿಯಾದಿಂದ ಪದೇ ಪದೇ ನಿರ್ಲಕ್ಷ್ಯಕ್ಕೊಳಗಾಗುತ್ತಿರುವ ಡೆಲ್ಲಿ ಅನುಭವಿ ಬ್ಯಾಟ್ಸ್'ಮನ್ ಗೌತಮ್ ಗಂಭೀರ್ ಮತ್ತೆ ಭರ್ಜರಿ ಅರ್ಧಶತಕ ಸಿಡಿಸಿ ನನ್ನಲ್ಲಿ ಇನ್ನೂ ಕ್ರಿಕೆಟ್ ಬಾಕಿಯಿದೆ ಎಂಬ ಸಂದೇಶವನ್ನು ಟೀಂ ಇಂಡಿಯಾ ಆಯ್ಕೆ ಸಮಿತಿಗೆ ರವಾನಿಸಿದ್ದಾರೆ.
ಇನ್ನು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತಿಹೆಚ್ಚು ದ್ವಿಶತಕ ಬಾರಿಸಿದ ಭಾರತೀಯ ಎನ್ನುವ ದಾಖಲೆಯನ್ನು ಚೇತೇಶ್ವರ್ ಪೂಜಾರ ಬರೆದಿದ್ದಾರೆ. ಜಾರ್ಖಂಡ್ ವಿರುದ್ಧ ರಾಜ್'ಕೋಟ್'ನಲ್ಲಿ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ 204 ರನ್ ಗಳಿಸಿದ ಪೂಜಾರ, ಪ್ರ.ದರ್ಜೆಯಲ್ಲಿ 12ನೇ ದ್ವಿಶತಕ ಪೂರೈಸಿದರು.
ಈ ಮೊದಲು 11 ದ್ವಿಶತಕಗಳೊಂದಿಗೆ ಅತಿಹೆಚ್ಚು ದ್ವಿಶತಕ ಬಾರಿಸಿದ ಭಾರತೀಯರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ವಿಜಯ್ ಮರ್ಚೆಂಟ್'ರನ್ನು ಪೂಜಾರ ಹಿಂದಿಕ್ಕಿದ್ದಾರೆ. ಇನ್ನು ಹೈದರಾಬಾದ್ ತಂಡದ ನಾಯಕ ಅಂಬಟಿ ರಾಯುಡು ಭರ್ಜರಿ ಶತಕ ಸಿಡಿಸಿದ್ದಾರೆ.
