Asianet Suvarna News Asianet Suvarna News

ಕರ್ನಾಟಕ-ಮುಂಬೈ ಪಂದ್ಯ ಡ್ರಾನಲ್ಲಿ ಅಂತ್ಯ

2018-19ರ ರಣಜಿ ಋತುವಿನಲ್ಲಿ ಮೊದಲ ಗೆಲುವು ಸಾಧಿಸುವ ಕರ್ನಾಟಕ ಹಾಗೂ ಮುಂಬೈ ತಂಡಗಳ ಕನಸು ಈಡೇರಲಿಲ್ಲ. ಉಭಯ ತಂಡಗಳ ನಡುವೆ ಇಲ್ಲಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ‘ಎ’ ಗುಂಪಿನ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು. ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರದ ಮೇಲೆ ರಾಜ್ಯ ತಂಡ 3 ಅಂಕ ಪಡೆದರೆ, ಮುಂಬೈಗೆ 1 ಅಂಕ ದೊರೆತಿದೆ.

Ranji Trophy 2018 Karnataka settles for draw got and 3 Points
Author
Belgaum, First Published Nov 24, 2018, 11:06 AM IST

ಬೆಳಗಾವಿ: 2018-19ರ ರಣಜಿ ಋತುವಿನಲ್ಲಿ ಮೊದಲ ಗೆಲುವು ಸಾಧಿಸುವ ಕರ್ನಾಟಕ ಹಾಗೂ ಮುಂಬೈ ತಂಡಗಳ ಕನಸು ಈಡೇರಲಿಲ್ಲ. ಉಭಯ ತಂಡಗಳ ನಡುವೆ ಇಲ್ಲಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ‘ಎ’ ಗುಂಪಿನ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು.

ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರದ ಮೇಲೆ ರಾಜ್ಯ ತಂಡ 3 ಅಂಕ ಪಡೆದರೆ, ಮುಂಬೈಗೆ 1 ಅಂಕ ದೊರೆತಿದೆ. 2 ಪಂದ್ಯಗಳಿಂದ 6 ಅಂಕ ಹೊಂದಿರುವ ಕರ್ನಾಟಕ 3ನೇ ಸ್ಥಾನ ಪಡೆದಿದ್ದು, ತಂಡಕ್ಕೆ ಗುಂಪು ಹಂತದಲ್ಲಿ ಇನ್ನು 6 ಪಂದ್ಯಗಳು ಬಾಕಿ ಉಳಿದಿವೆ. 4ನೇ ಹಾಗೂ ಅಂತಿಮ ದಿನವಾದ ಶುಕ್ರವಾರ, 3 ವಿಕೆಟ್‌ಗೆ 81 ರನ್‌ಗಳಿಂದ 2ನೇ ಇನ್ನಿಂಗ್ಸ್ ಬ್ಯಾಟಿಂಗ್ ಮುಂದುವರಿಸಿದ ಕರ್ನಾಟಕ, 5 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ಕೆ.ವಿ.ಸಿದ್ಧಾರ್ಥ್, ಅಜೇಯ 71 ರನ್ ಗಳಿಸಿದರು. ಸ್ಟುವರ್ಟ್ ಬಿನ್ನಿ 30 ರನ್ ಕಲೆಹಾಕಿದರು.

ಕರ್ನಾಟಕ ಒಟ್ಟಾರೆ 365 ರನ್‌ಗಳ ಮುನ್ನಡೆ ಪಡೆದು, ಮುಂಬೈಗೆ 2ನೇ ಇನ್ನಿಂಗ್ಸ್ ಬ್ಯಾಟಿಂಗ್ ಅವಕಾಶ ನೀಡಿತು. ಆರಂಭಿಕ ಜೇ ಬಿಸ್ತಾ (2) ವಿಕೆಟನ್ನು ಬೇಗನೆ ಕಳೆದುಕೊಂಡರೂ, ಅಖಿಲ್ ಹೆರ್ವಾಡ್ಕರ್ (53), ಸೂರ್ಯಕುಮಾರ್ ಯಾದವ್ (53) ಹಾಗೂ ಆದಿತ್ಯ ತಾರೆ (29) ಹೋರಾಟದಿಂದ ಮುಂಬೈ 4 ವಿಕೆಟ್‌ಗೆ 173 ರನ್ ಗಳಿಸಿದ್ದಾಗ ಪಂದ್ಯ ಡ್ರಾ ಎಂದು ಘೋಷಿಸಲಾಯಿತು. ಕರ್ನಾಟಕ ತನ್ನ ಮುಂದಿನ ಪಂದ್ಯವನ್ನು ನ.28ರಿಂದ ಮಹಾರಾಷ್ಟ್ರ ವಿರುದ್ಧ ಮೈಸೂರಿನಲ್ಲಿ ಆಡಲಿದೆ.

ಸ್ಕೋರ್:

ಕರ್ನಾಟಕ: 400 ಹಾಗೂ 170/5 ಡಿಕ್ಲೇರ್
ಮುಂಬೈ: 205 ಹಾಗೂ 173/4

Follow Us:
Download App:
  • android
  • ios