ನವದೆಹಲಿ[ಡಿ.08]: ಕ್ರಿಕೆಟ್ ವೃತ್ತಿಜೀವನದ ವಿದಾಯದ ಪಂದ್ಯವನ್ನಾಡುತ್ತಿರುವ ಗೌತಮ್ ಗಂಭೀರ್ ಶತಕ ಸಿಡಿಸುವ ಮೂಲಕ ಅಂತಿಮ ಪಂದ್ಯವನ್ನು ಸ್ಮರಣೀಯವಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಗಂಭೀರ್ ರಾಜಕೀಯಕ್ಕೆ ಸೇರ್ತಾರಾ..? ಗೌತಿ ಹೇಳಿದ್ದೇನು..?

ತವರಿನ ಮೈದಾನ ಫಿರೋಜ್ ಶಾ ಕೋಟ್ಲಾದಲ್ಲಿ ನಡೆಯುತ್ತಿರುವ ಆಂಧ್ರ ವಿರುದ್ಧದ ’ಬಿ’ ಗುಂಪಿನ ಪಂದ್ಯದಲ್ಲಿ ಗಂಭೀರ್ ಭರ್ಜರಿ ಶತಕ ಸಿಡಿಸಿದ್ದಾರೆ. ಕೆಲದಿನಗಳ ಹಿಂದಷ್ಟೇ ಎಲ್ಲಾ ಮಾದರಿಯ ಕ್ರಿಕೆಟ್’ಗೆ ಗುಡ್’ಬೈ ಹೇಳಿರುವ ಗೌತಿ, ಕೊನೆಯ ಬಾರಿಗೆ ವೃತ್ತಿಪರ ಕ್ರಿಕೆಟಿಗನಾಗಿ ಮೈದಾನದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಧೋನಿ ಜತೆ ಮನಸ್ತಾಪ: ಗಂಭೀರ್ ಹೇಳಿದ್ದೇನು..?

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ್ದ ಆಂಧ್ರ ತಂಡ ರಿಕಿ ಬೊಯಿ ಆಕರ್ಷಕ ಶತಕ[187]ದ ನೆರವಿನಿಂದ ಮೊದಲ ಇನ್ನಿಂಗ್ಸ್’ನಲ್ಲಿ 390 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ಡೆಲ್ಲಿ ಉತ್ತಮ ಆರಂಭ ಪಡೆದಿದ್ದು, 2 ವಿಕೆಟ್ ಕಳೆದುಕೊಂಡು 295 ರನ್ ಬಾರಿಸಿದೆ. ಗಂಭೀರ್ 112 ರನ್ ಬಾರಿಸಿ ಶೋಯೆಬ್ ಖಾನ್ ಬೌಲಿಂಗ್’ನಲ್ಲಿ ವಿಕೆಟ್ ಒಪ್ಪಿಸಿದರು. ಮತ್ತೋರ್ವ ಆರಂಭಿಕ ಬ್ಯಾಟ್ಸ್’ಮನ್ ಹಿತೆನ್ ದಲಾಲ್ 58 ರನ್ ಬಾರಿಸಿ ಪೆವಿಲಿಯನ್ ಸೇರಿದರು. ಇನ್ನು ಮೂರನೇ ವಿಕೆಟ್’ಗೆ ಜತೆಯಾದ ಧೃವ್ ಶೋರೆ[90*] ಹಾಗೂ ವೈಭವ್ ರಾವಲ್[29*] ಬ್ಯಾಟಿಂಗ್ ಮುಂದುವರೆಸಿದ್ದಾರೆ.