ಗಂಭೀರ್ ರಾಜಕೀಯಕ್ಕೆ ಸೇರ್ತಾರಾ..? ಗೌತಿ ಹೇಳಿದ್ದೇನು..?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 7, Dec 2018, 6:00 PM IST
Cricketer Gautam Gambhir dismisses reports of joining politics
Highlights

ಭಾರತ-ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿ ಗೆಲ್ಲೋರು ಯಾರು ಎನ್ನುವ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಡಗೈ ಬ್ಯಾಟ್ಸ್’ಮನ್ ಗಂಭೀರ್, ವಿರಾಟ್ ಪಡೆ ಆಸಿಸ್ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲೋದು ಕಷ್ಟ ಎಂದಿದ್ದಾರೆ. ಒಟ್ಟಾರೆ ನನ್ನ ಹೃದಯ ಭಾರತ ಗೆಲ್ಲುತ್ತದೆ ಎನ್ನುತ್ತಿದ್ದರೆ, ಮನಸು ಆಸ್ಟ್ರೇಲಿಯಾ ಎನ್ನುತ್ತಿದೆ ಎಂದಿದ್ದಾರೆ.

ನವದೆಹಲಿ[ಡಿ.07]: ಟೀಂ ಇಂಡಿಯಾ ಕಂಡ ಅತ್ಯಂತ ಯಶಸ್ವಿ ಕ್ರಿಕೆಟಿಗರಲ್ಲಿ ಒಬ್ಬರಾದ ಡೆಲ್ಲಿ ಬ್ಯಾಟ್ಸ್’ಮನ್ ಗೌತಮ್ ಗಂಭೀರ್ ಎಲ್ಲಾ ಮಾದರಿಯ ಕ್ರಿಕೆಟ್’ಗೆ ವಿದಾಯ ಹೇಳಿದ್ದಾರೆ. ವಿದಾಯದ ಬೆನ್ನಲ್ಲೇ ಗಂಭೀರ್ ರಾಜಕೀಯಕ್ಕೆ ಬರಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಈ ಬಗ್ಗೆ ಸ್ವತಃ ಗಂಭೀರ್ ಸ್ಪಷ್ಟನೆ ನೀಡಿದ್ದಾರೆ.

ಧೋನಿ ಜತೆ ಮನಸ್ತಾಪ: ಗಂಭೀರ್ ಹೇಳಿದ್ದೇನು..?

ಗಂಭೀರ್ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನುವ ಗಾಳಿಮಾತಿಗೆ ಸ್ಪಷ್ಟನೆ ನೀಡಿರುವ ಗಂಭೀರ್, ಇವೆಲ್ಲ ಕೇವಲ ಗಾಳಿಮಾತುಗಳಷ್ಟೇ. ಈ ಸುದ್ದಿ ಹೇಗೆ ಹರಡಿತೋ ಎಂದು ಗೊತ್ತಿಲ್ಲ ಎಂದು ಗಂಭೀರ್ ಸ್ಪಷ್ಟನೆ ನೀಡಿದ್ದಾರೆ.

ಕ್ರಿಕೆಟ್‌ಗೆ ಗೌತಮ್ ಗಂಭೀರ್ ಗುಡ್‌ ಬೈ : ಬಿಜೆಪಿ ಸೇರ್ಪಡೆ..?

ಇನ್ನು ತಾವೆದುರಿಸಿದ ಅತಿ ಕಠಿಣ ಬೌಲರ್ ಯಾರು ಎನ್ನುವ ಪ್ರಶ್ನೆಗೆ ಉತ್ತರಿಸಿದ ಗೌತಿ, ಸಾರ್ವಕಾಲಿಕ ಶ್ರೇಷ್ಠ ಸ್ಪಿನ್ನರ್ ಮುತ್ತಯ್ಯ ಮುರುಳೀಧರನ್ ಎಂದು ಉತ್ತರಿಸಿದ್ದಾರೆ. ಮುರುಳಿಯ ಅತಿ ದೊಡ್ಡ ಶಕ್ತಿ ಎಂದರೆ ಚೆಂಡಿನ ಮೇಲಿನ ಹಿಡಿತ ಹಾಗೂ ಸ್ಥಿರತೆ ಎಂದು ಗುಣಗಾನ ಮಾಡಿದ್ದಾರೆ. ಏಕದಿನ ಹಾಗೂ ಟೆಸ್ಟ್ ತಂಡದಲ್ಲಿ ಒಟ್ಟು 26 ಬಾರಿ ಮುರುಳಿ-ಗೌತಿ ಮುಖಾಮುಖಿಯಾಗಿದ್ದು, ಕೇವಲ 7 ಬಾರಿಯಷ್ಟೇ ಲಂಕಾ ಸ್ಪಿನ್ನರ್’ಗೆ ವಿಕೆಟ್ ಒಪ್ಪಿಸಿದ್ದಾರೆ.

loader