ಸಾಕಷ್ಟು ಯುವ ಹಾಗೂ ಅನುಭವಿ ಆಟಗಾರ್ತಿಯರನ್ನೊಳಗೊಂಡ ಭಾರತದ ವನಿತೆಯರ ತಂಡವು ಸೆಪ್ಟೆಂಬರ್ 5ರಂದು ನೆದರ್'ಲ್ಯಾಂಡ್ ತಂಡವನ್ನು ಎದುರಿಸಲಿದೆ.
ನವದೆಹಲಿ(ಆ.23): ಮುಂಬರುವ ಯೂರೋಪ್ ಪ್ರವಾಸಕ್ಕೆ 18 ಆಟಗಾರ್ತಿಯರನ್ನೊಳಗೊಂಡ ವನಿತೆಯರ ಹಾಕಿ ತಂಡವನ್ನು ಪ್ರಕಟಿಸಲಾಗಿದ್ದು, ಪಾರ್ವರ್ಡ್ ಆಟಗಾರ್ತಿ ರಾಣಿ ರಾಮ್'ಪಾಲ್ ತಂಡವನ್ನು ಮುನ್ನಡೆಸಲಿದ್ದಾರೆ.
ಸಾಕಷ್ಟು ಯುವ ಹಾಗೂ ಅನುಭವಿ ಆಟಗಾರ್ತಿಯರನ್ನೊಳಗೊಂಡ ಭಾರತದ ವನಿತೆಯರ ತಂಡವು ಸೆಪ್ಟೆಂಬರ್ 5ರಂದು ನೆದರ್'ಲ್ಯಾಂಡ್ ತಂಡವನ್ನು ಎದುರಿಸಲಿದೆ.
ಇತ್ತೀಚೆಗಷ್ಟೇ ಮುಕ್ತಾಯವಾದ ಮಹಿಳೆಯರ ವಿಶ್ವಲೀಗ್ ಹಾಕಿ ಲೀಗ್ ಸೆಮಿಫೈನಲ್'ನಲ್ಲಿ ಭಾರತ ತಂಡ ನೀರಸ ಪ್ರದರ್ಶನ ತೋರುವ ಮೂಲಕ 8ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
ಭಾರತ ತಂಡ ಹೀಗಿದೆ:
ಗೋಲ್ ಕೀಪರ್: ಸವಿತಾ(ಉಪ ನಾಯಕಿ), ರಜಿನಿ ಎಟಿಮರ್ಫು
ಡಿಫೆಂಡರ್: ದೀಪಾ ಗ್ರೇಸ್ ಎಕ್ಕಾ,ಗುರ್ಜಿತ್ ಕೌರ್, ಸುನಿತಾ ಲಕ್ರಾ, ರಷ್ಮಿತಾ ಮಿನ್ಜಾ,
ಮಿಡ್'ಫೀಲ್ಡರ್: ನಮಿತಾ ಟೊಪ್ಪೊ, ನಿಕ್ಕಿ ಪ್ರದಾನ್,ಮೋನಿಕಾ, ಕರೀಷ್ಮಾ ಯಾದವ್,ಲಿಲಿಮಾ ಮಿನ್ಜ್, ನೇಹಾ ಗೋಯೆಲ್,
ಫಾರ್ವರ್ಡ್: ರಾಣಿ ರಾಮ್'ಪಾಲ್(ನಾಯಕಿ), ಪೂನಮ್ ರಾಣಿ, ವಂದನಾ ಕಟಾರಿಯಾ, ರೀನಾ ಖೋಖರ್, ಲಾಲ್ ರೆಮ್ಸ್ಮಿ.
