Asianet Suvarna News Asianet Suvarna News

ಸ್ಪೇನ್ ವಿರುದ್ಧ ಭಾರತೀಯ ಮಹಿಳಾ ಹಾಕಿ ತಂಡಕ್ಕೆ ಗೆಲುವು

ಸ್ಪೇನ್ ವಿರುದ್ಧದ ತೃತೀಯ ಹಾಕಿ ಪಂದ್ಯದಲ್ಲಿ ಭಾರತದ ವನಿತೆಯರು ರೋಚಕ ಗೆಲುವು ದಾಖಲಿಸಿದ್ದಾರೆ. ನಾಯಕಿ ರಾಣಿ ರಾಂಪಾಲ್ ಗೋಲಿನಿಂದ ಭಾರತ ಗೆಲುವಿನ ನಗೆ ಬೀರಿದೆ. ಹೇಗಿತ್ತು ಭಾರತದ ಪ್ರದರ್ಶನ? ಇಲ್ಲಿದೆ

Rani Rampal’s late strike helps India women’s hockey team beat Spain to level series
  • Facebook
  • Twitter
  • Whatsapp

ಸ್ಪೇನ್(ಜೂ.16): ಸ್ಪೇನ್ ವಿರುದ್ಧದ 5 ಪಂದ್ಯಗಳ ಹಾಕಿ ಸರಣಿಯಲ್ಲಿ ಭಾರತ ಭರ್ಜರಿ ಕಮ್‌ಬ್ಯಾಕ್ ಮಾಡಿದೆ. ಆರಂಭಿಕ ಪಂದ್ಯದಲ್ಲಿ ಮುಗ್ಗರಿಸಿದ್ದ ಭಾರತೀಯ ವನಿತೆಯರು, ದ್ವಿತೀಯ ಪಂದ್ಯ ಡ್ರಾ ಸಾಧಿಸಿದ್ದರು. ಇದೀಗ 3ನೇ ಪಂದ್ಯದಲ್ಲಿ ಭಾರತ ತಿರುಗೇಟು ನೀಡೋ ಮೂಲಕ ಸರಣಿಯಲ್ಲಿ 1-1 ಸಮಭಲ ಸಾಧಿಸಿದ್ದಾರೆ.

ಸ್ಪೇನ್‌ನ ಕಾನ್ಸೆಜೋ ಸುಪಿರಿಯರ್ ಡೇ ಡಿಪೋರ್ಟ್ ಹಾಕಿ ಕ್ರೀಡಾಂಗಣದಲ್ಲಿ ನಡೆದ ತೃತೀಯ ಪಂದ್ಯದಲ್ಲಿ ಭಾರತ 3-2 ಗೋಲಿನ ಅಂತರದಲ್ಲಿ ಗೆಲುವು ಸಾಧಿಸಿದೆ. ಆರಂಭದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಬಾರಿಸಿದ ಸ್ಪೇನ್ ಪಂದ್ಯದಲ್ಲಿ ಮುನ್ನಡೆ ಸಾಧಿಸಿತ್ತು. ಆದರೆ 28ನೇ ನಿಮಿಷದಲ್ಲಿ ಗುರ್ಜಿತ್ ಕೌರ್ ಸಿಡಿಸಿದ ಗೋಲಿನಿಂದ ಭಾರತ ಸಮಭಲ ಸಾಧಿಸಿತು.

32ನೇ ನಿಮಿಷದಲ್ಲಿ ಲಾಲ್ ರೆಮ್ಸಿಯಾಮಿ ಗೋಲು ಬಾರಿಸಿದರೆ, ಅಂತಿಮ ಕ್ಷಣದಲ್ಲಿ ನಾಯಕಿ ರಾಣಿ ರಾಂಪಾಲ್ ಸಿಡಿಸಿದ ಗೋಲಿನ ನೆರವಿನಿಂದ ಭಾರತ 3-2 ಅಂತರದಲ್ಲಿ ಗೆಲುವು ಸಾಧಿಸಿತು. ಸರಣಿ ಸಮಭಲಗೊಂಡಿರೋದರಿಂದ ಮುಂದಿನ 2 ಪಂದ್ಯ ಬಾರಿ ಕುತೂಹಲ ಕೆರಳಿಸಿದೆ.
 

Follow Us:
Download App:
  • android
  • ios