ನೂತನ ಇತಿಹಾಸ ಸೃಷ್ಟಿಸಿದ 'ಎಡಗೈ' ಸ್ಪಿನ್ನರ್ ಹೆರಾತ್...!

First Published 11, Feb 2018, 3:36 PM IST
Rangana Herath rewrite record books
Highlights

ಎರಡನೇ ಇನಿಂಗ್ಸ್'ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್'ಗಳ ಪಟ್ಟಿಯಲ್ಲಿ ಸ್ಪಿನ್ ಮಾಂತ್ರಿಕ ಮತ್ತಯ್ಯ ಮುರುಳಿಧರನ್ ಅವರೊಂದಿಗೆ ಜಂಟಿ ಎರಡನೇ ಸ್ಥಾನಕ್ಕೇರಿದ್ದಾರೆ. ಹೆರಾತ್ ಎರಡನೇ ಇನಿಂಗ್ಸ್'ನಲ್ಲಿ ಒಟ್ಟಾರೆ 106 ವಿಕೆಟ್ ಕಬಳಿಸುವ ಮೂಲಕ ಮುರುಳಿ ದಾಖಲೆ ಸರಿಗಟ್ಟಿದ್ದಾರೆ. ಇನ್ನು ಮತ್ತೋರ್ವ ಸ್ಪಿನ್ ದಂತಕತೆ ಶೇನ್ ವಾರ್ನ್ ಎರಡನೇ ಇನಿಂಗ್ಸ್'ನಲ್ಲಿ 138 ವಿಕೆಟ್ ಕಬಳಿಸುವುದರೊಂದಿಗೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಢಾಕಾ(ಫೆ.11): ಬಾಂಗ್ಲಾದೇಶ ವಿರುದ್ಧದ 2ನೇ ಟೆಸ್ಟ್‌ನ 2ನೇ ಇನ್ನಿಂಗ್ಸ್‌'ನಲ್ಲಿ 4 ವಿಕೆಟ್ ಕಬಳಿಸುವ ಮೂಲಕ, ಲಂಕಾದ ರಂಗನಾ ಹೆರಾತ್ ಟೆಸ್ಟ್‌'ನಲ್ಲಿ ಅತ್ಯಂತ ಯಶಸ್ವಿ ಎಡಗೈ ಬೌಲರ್ ಎನಿಸಿಕೊಂಡರು.

ತಮ್ಮ ಟೆಸ್ಟ್ ವೃತ್ತಿಬದುಕಿನಲ್ಲಿ 415 ವಿಕೆಟ್ ಪೂರೈಸಿದ ಹೆರಾತ್, ಪಾಕಿಸ್ತಾನದ ಮಾಜಿ ವೇಗಿ ವಾಸೀಂ ಅಕ್ರಂರ 414 ವಿಕೆಟ್‌'ಗಳ ದಾಖಲೆ ಮುರಿದರು. ನ್ಯೂಜಿಲೆಂಡ್‌'ನ ಡೇನಿಯಲ್ ವೆಟ್ಟೋರಿ (362), ಲಂಕಾದ ಚಮಿಂಡಾ ವಾಸ್ (355) ಮತ್ತು ಆಸ್ಟ್ರೇಲಿಯಾದ ಮಿಚೆಲ್ ಜಾನ್ಸನ್ (313) ನಂತರದ ಸ್ಥಾನಗಳಲ್ಲಿದ್ದಾರೆ.

ಇದಲ್ಲದೇ ಎರಡನೇ ಇನಿಂಗ್ಸ್'ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್'ಗಳ ಪಟ್ಟಿಯಲ್ಲಿ ಸ್ಪಿನ್ ಮಾಂತ್ರಿಕ ಮತ್ತಯ್ಯ ಮುರುಳಿಧರನ್ ಅವರೊಂದಿಗೆ ಜಂಟಿ ಎರಡನೇ ಸ್ಥಾನಕ್ಕೇರಿದ್ದಾರೆ. ಹೆರಾತ್ ಎರಡನೇ ಇನಿಂಗ್ಸ್'ನಲ್ಲಿ ಒಟ್ಟಾರೆ 106 ವಿಕೆಟ್ ಕಬಳಿಸುವ ಮೂಲಕ ಮುರುಳಿ ದಾಖಲೆ ಸರಿಗಟ್ಟಿದ್ದಾರೆ. ಇನ್ನು ಮತ್ತೋರ್ವ ಸ್ಪಿನ್ ದಂತಕತೆ ಶೇನ್ ವಾರ್ನ್ ಎರಡನೇ ಇನಿಂಗ್ಸ್'ನಲ್ಲಿ 138 ವಿಕೆಟ್ ಕಬಳಿಸುವುದರೊಂದಿಗೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

loader