ಇಂಡೋ-ಅಫ್ಘಾನ್ ಟೆಸ್ಟ್: ಕೇಂದ್ರ ಕ್ರೀಡಾ ಸಚಿವ ಐತಿಹಾಸಿಕ ಟೆಸ್ಟ್‌ಗೆ ಚಾಲನೆ

Rajyavardhan Rathore meets players before start of India-Afghanistan Test
Highlights

ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಐತಿಹಾಸಿಕ ಟೆಸ್ಟ್ ಪಂದ್ಯದ ವಿಶೇಷತೆ ಏನು?. ಯಾರೆಲ್ಲಾ ಗಣ್ಯರು ಈ ಮಹತ್ವದ ಟೆಸ್ಟ್ ಪಂದ್ಯಕ್ಕೆ ಹಾಜರಾಗಿದ್ದಾರೆ. ಪಂದ್ಯ ಆರಂಭಕ್ಕೂ ಮುನ್ನ ನಡೆದ ಸರಳ ಕಾರ್ಯಕ್ರಮ ಹೇಗಿತ್ತು. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. 

ಬೆಂಗಳೂರು(ಜೂನ್.14): ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಏಕೈಕ ಟೆಸ್ಟ್ ಪಂದ್ಯಕ್ಕೆ ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಚಾಲನೆ ನೀಡಿದ್ದಾರೆ. ಈ ಮೂಲಕ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ಸಾಕ್ಷಿಯಾಗಿದೆ.  

ಟೆಸ್ಟ್ ಪಂದ್ಯದ ಆರಂಭದಲ್ಲಿ ಭಾರತ ಹಾಗೂ ಅಫ್ಘಾನಿಸ್ತಾನ ತಂಡದ ಆಟಗಾರರನ್ನ ರಾಥೋಡ್ ಅಭಿನಂದಿಸಿದರು. ರಾಥೋಡ್ ಜೊತೆ ಅಫ್ಘಾನಿಸ್ತಾನದ ಮುಖ್ಯ ಕಾರ್ದರ್ಶಿ ಅಬ್ದುಲ್ಲಾ ಅಬ್ದುಲ್ಲಾ ಕೂಡ ಹಾಜರಿದ್ದರು. 

 

ವಿಶೇಷ ಅಂದರೆ ಟೀಮ್ಇಂಡಿಯಾ ಮಾಜಿ ಕ್ರಿಕೆಟಿಗ. ಅಫ್ಘಾನಿಸ್ತಾನದಲ್ಲಿ ಹುಟ್ಟಿ ಭಾರತ ಪರ ಆಡಿದ ಸಲೀಮ್ ದುರಾನಿ ಉಪಸ್ಥಿತರಿದ್ದರು. ಈ ಮೂಲಕ ಭಾರತ ಹಾಗೂ ಅಪ್ಘಾನಿಸ್ತಾನ ನಡುವಿನ ಐತಿಹಾಸಿಕ ಟೆಸ್ಟ್ ಪಂದ್ಯ ಆರಂಭಗೊಂಡಿತು.

 


 

 

loader