ಕರಾರುವಕ್ಕಾದ ದಾಳಿ ನಡೆಸಿದ ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ ವಿನ್'ಫೀಲ್ಡ್ ವಿಕೆಟ್ ಎಗರಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಭಾರತಕ್ಕೆ ಮೊದಲ ಮೇಲುಗೈ ತಂದುಕೊಟ್ಟರು.
ಲಂಡನ್(ಜು.23): ಭಾರೀ ಕುತೂಹಲ ಕೆರಳಿಸಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮಹಿಳೆಯರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಂಗ್ಲ ಪಡೆಗೆ ಆರಂಭದಲ್ಲೇ ಆಘಾತ ಎದುರಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಇಂಗ್ಲೆಂಡ್ ತಂಡ ದಿಟ್ಟ ಹೆಜ್ಜೆಯಿಟ್ಟಿತ್ತು. ಮೊದಲ 11 ಓವರ್'ನಲ್ಲಿ ವಿಕೆಟ್ ನಷ್ಟವಿಲ್ಲದೇ 46 ರನ್ ಬಾರಿಸಿ ಬೃಹತ್ ಮೊತ್ತ ಕಲೆ ಹಾಕುವ ಮುನ್ಸೂಚನೆ ನೀಡಿತು. ಆದರೆ ಮರು ಓವರ್'ನಲ್ಲಿ ಕರಾರುವಕ್ಕಾದ ದಾಳಿ ನಡೆಸಿದ ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ ವಿನ್'ಫೀಲ್ಡ್ ವಿಕೆಟ್ ಎಗರಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಭಾರತಕ್ಕೆ ಮೊದಲ ಮೇಲುಗೈ ತಂದುಕೊಟ್ಟರು.
ಆ ಬಳಿಕ ಪೂನಮ್ ರಾವತ್ ತಾವೆಸೆದ ಮೊದಲ ಓವರ್'ನಲ್ಲೇ ಬೋಮೌಟ್ ವಿಕೆಟ್ ಕಬಳಿಸಿ ಆಂಗ್ಲ ಪಡೆಗೆ ಮತ್ತೆ ಶಾಕ್ ನೀಡುವಲ್ಲಿ ಯಶಸ್ವಿಯಾದರು. ಮರು ಓವರ್'ನಲ್ಲೇ ರಾವತ್ ಚಾಣಾಕ್ಷ ಬೌಲಿಂಗ್ ಅರಿಯದ ಹೀತರ್ ನೈಟ್ ಎಲ್'ಬಿ ಬಲೆಗೆ ಬಿದ್ದರು.
17 ಓವರ್ ಮುಕ್ತಾಯದ ವೇಳೆಗೆ ಇಂಗ್ಲೆಂಡ್ ತಂಡ 3 ವಿಕೆಟ್ ನಷ್ಟಕ್ಕೆ 64 ರನ್ ಗಳಿಸಿತ್ತು.
