ರಾಜಸ್ಥಾನಕ್ಕೆ ರೋಚಕ ಗೆಲುವು ತಂದುಕೊಟ್ಟ ಕನ್ನಡಿಗನ ಆಟ..!
ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಕೊನೆಗೂ ರಾಜಸ್ಥಾನ ರಾಯಲ್ಸ್ 3 ವಿಕೆಟ್'ಗಳ ರೋಚಕ ಜಯ ಸಾಧಿಸಿದೆ. ಕೇವಲ 11 ಎಸೆತಗಳಲ್ಲಿ 33 ರನ್ ಸಿಡಿಸಿದ ಕನ್ನಡಿಗ ಕೆ. ಗೌತಮ್ ಗೆಲುವಿನ ರೂವಾರಿ ಎನಿಸಿದರು.
ಜೈಪುರ: ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಕೊನೆಗೂ ರಾಜಸ್ಥಾನ ರಾಯಲ್ಸ್ 3 ವಿಕೆಟ್'ಗಳ ರೋಚಕ ಜಯ ಸಾಧಿಸಿದೆ. ಕೇವಲ 11 ಎಸೆತಗಳಲ್ಲಿ 33 ರನ್ ಸಿಡಿಸಿದ ಕನ್ನಡಿಗ ಕೆ. ಗೌತಮ್ ಗೆಲುವಿನ ರೂವಾರಿ ಎನಿಸಿದರು.
ಮುಂಬೈ ಇಂಡಿಯನ್ಸ್ ನೀಡಿದ್ದ 168 ರನ್ ಗುರಿ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ಆರಂಭ ಕೂಡಾ ಉತ್ತಮವಾಗಿರಲಿಲ್ಲ. ತಂಡದ ಮೊತ್ತ 38 ರನ್'ಗಳಾಗುವಷ್ಟರಲ್ಲಿ ಆರಂಭಿಕರಿಬ್ಬರು ಪೆವಿಲಿಯನ್ ಸೇರಿದ್ದರು. ಆ ಬಳಿಕ ಸಂಜು ಸ್ಯಾಮ್ಸನ್(52) ಹಾಗೂ ಬೆನ್ ಸ್ಟೋಕ್ಸ್(40) ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು. ಒಂದು ಹಂತದಲ್ಲಿ ಸುಲಭವಾಗಿ ರಾಜಸ್ಥಾನ ಗೆಲುವಿನ ದಡ ಸೇರಲಿದೆ ಎಂದು ಅಭಿಮಾನಿಗಳು ಊಹಿಸಿದ್ದರು. ಆದರೆ ಡೆತ್ ಓವರ್'ನಲ್ಲಿ ಚುರುಕಿನ ದಾಳಿ ಸಂಘಟಿಸಿದ ಮುಂಬೈ ಇಂಡಿಯನ್ಸ್ ಕೇವಲ ಮೂರು ಓವರ್'ಗಳ ಅಂತರದಲ್ಲಿ ರಾಜಸ್ಥಾನದ 4 ವಿಕೆಟ್ ಕಬಳಿಸಿದರು. ಆದರೆ ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಕನ್ನಡಿಗ ಕೃಷ್ಣಪ್ಪ ಗೌತಮ್ ಕೇವಲ 11 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್'ಗಳ ನೆರವಿನಿಂದ 33 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಇದಕ್ಕೂ ಮೊದಲು ಸೂರ್ಯಕುಮಾರ್ ಯಾದವ್(72) ಹಾಗೂ ಇಶಾನ್ ಕಿಶನ್(58) ಅರ್ಧಶತಕದ ನೆರವಿನಿಂದ 167 ರನ್ ಕಲೆ ಹಾಕಿತ್ತು.
ಸಂಕ್ಷಿಪ್ತ ಸ್ಕೋರ್:
MI: 167/7
ಸೂರ್ಯಕುಮಾರ್ ಯಾದವ್: 72
ಆರ್ಚರ್: 22/3
RR: 168/7
ಸಂಜು ಸ್ಯಾಮ್ಸನ್: 52
ಹಾರ್ದಿಕ್ ಪಾಂಡ್ಯ: 25/2