ಜೈಪುರ[ಫೆ.11]: ರಾಜಸ್ಥಾನ ‘ಪಿಂಕ್’ ಬಣ್ಣಕ್ಕೆ ಹೆಸರಾಗಿದೆ. ಇದೀಗ ಐಪಿಎಲ್ ಫ್ರಾಂಚೈಸಿಯಾದ ರಾಜಸ್ಥಾನ ರಾಯಲ್ಸ್ ಕೂಡ ತನ್ನ ತಂಡದ ಜೆರ್ಸಿಯನ್ನು ಬದಲಿಸಿದ್ದು 12ನೇ ಆವೃತ್ತಿಯಲ್ಲಿ ನೀಲಿ ಬಣ್ಣದ ಬದಲಿಗೆ ‘ಪಿಂಕ್’ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿದೆ.

ಐಪಿಎಲ್‌: ಸ್ಮಿತ್‌ಗಿಲ್ಲ ರಾಜಸ್ಥಾನ ನಾಯಕತ್ವ?

ರಾಯಲ್ಸ್, ‘ಕ್ಯಾನ್ಸರ್’ ಜಾಗೃತಿಗಾಗಿ ಕಳೆದ ಆವೃತ್ತಿಯ ಕೊನೆ ಪಂದ್ಯದಲ್ಲಿ ‘ಪಿಂಕ್ ಜೆರ್ಸಿ’ ಧರಿಸಿತ್ತು. ಇದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ಬಹುನಿರೀಕ್ಷಿತ 12ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಮಾರ್ಚ್ 23ರಿಂದ ಆರಂಭವಾಗುವ ಸಾಧ್ಯತೆಯಿದೆ. 

ರಾಜಸ್ಥಾನ ರಾಯಲ್ಸ್ ಫುಲ್ ಟೀಂ -ಉನಾದ್ಕಟ್‌ಗೆ 8.4 ಕೋಟಿ ಜಾಕ್‌ಪಾಟ್!

ಶೇನ್ ವಾರ್ನ್ ರಾಯಭಾರಿ: ಆಸ್ಟ್ರೇಲಿಯಾದ ಮಾಜಿ ಆಟಗಾರ ಶೇನ್ ವಾರ್ನ್ 12ನೇ ಆವೃತ್ತಿಯಲ್ಲಿ ರಾಜಸ್ಥಾನ ತಂಡದ ಪ್ರಚಾರ ರಾಯಭಾರಿಯಾಗಿ ನೇಮಕವಾಗಿದ್ದಾರೆ. 2008ರಲ್ಲಿ ವಾರ್ನ್ ರಾಜಸ್ಥಾನ ತಂಡದ ನಾಯಕರಾಗಿದ್ದ ಅವರು ತಂಡವನ್ನು ಚೊಚ್ಚಲ ಆವೃತ್ತಿಯಲ್ಲಿಯೇ ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಬಳಿಕ ಸಲಹೆಗಾರರಾಗಿದ್ದರು.