ಪಿಂಕ್ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ ರಾಜಸ್ಥಾನ ರಾಯಲ್ಸ್

First Published 11, May 2018, 4:05 PM IST
Rajasthan Royals to don pink jersey against CSK
Highlights

ರಾಜಸ್ಥಾನ ಸರ್ಕಾರ, ನ್ಯಾಷನಲ್ ಕ್ಯಾನ್ಸರ್ ಗ್ರಿಡ್, ಇಂಡಿಯನ್ ಕ್ಯಾನ್ಸರ್ ಸೊಸೈಟಿ ’ಕ್ಯಾನ್ಸರ್ ಮುಕ್ತ’ ಅಭಿಯಾನಕ್ಕೆ ಕೈಜೋಡಿಸಿರುವ ರಾಜಸ್ಥಾನ ರಾಯಲ್ಸ್ ತಂಡ, ಇಂದು ಪಿಂಕ್ ಜೆರ್ಸಿ ತೊಟ್ಟು ಕಣಕ್ಕಿಳಿಯುತ್ತಿದೆ.

ಜೈಪುರ[ಮೇ.11]: ಪ್ಲೇ ಆಫ್ ಹಂತ ಪ್ರವೇಶಿಸಲು ಕಸರತ್ತು ನಡೆಸುತ್ತಿರುವ ರಾಜಸ್ಥಾನ ರಾಯಲ್ಸ್ ಇಂದು ಬಲಿಷ್ಠ ಚೆನ್ನೈ ಸೂಪರ್’ಕಿಂಗ್ಸ್ ತಂಡವನ್ನು ಎದುರಿಸಲಿದ್ದು, ಗುಲಾಬಿ[ಪಿಂಕ್] ಬಣ್ಣದ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ.
ರಾಜಸ್ಥಾನ ಸರ್ಕಾರ, ನ್ಯಾಷನಲ್ ಕ್ಯಾನ್ಸರ್ ಗ್ರಿಡ್, ಇಂಡಿಯನ್ ಕ್ಯಾನ್ಸರ್ ಸೊಸೈಟಿ ’ಕ್ಯಾನ್ಸರ್ ಮುಕ್ತ’ ಅಭಿಯಾನಕ್ಕೆ ಕೈಜೋಡಿಸಿರುವ ರಾಜಸ್ಥಾನ ರಾಯಲ್ಸ್ ತಂಡ, ಇಂದು ಪಿಂಕ್ ಜೆರ್ಸಿ ತೊಟ್ಟು ಕಣಕ್ಕಿಳಿಯುತ್ತಿದೆ. ಇದರ ಅಂಗವಾಗಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಅಜಿಂಕ್ಯ ರಹಾನೆ, ಹೆನ್ರಿಚ್ ಕ್ಲಸೇನ್, ಕೃಷ್ಣಪ್ಪ ಗೌತಮ್ ಹಾಗೂ ಮಹಿಪಾಲ್ ಲೋಮ್ರರ್ ಪಿಂಕ್ ಜರ್ಸಿ ಅನಾವರಣಗೊಳಿಸಿದರು.

ಜೆರ್ಸಿ ಅನಾವರಣಗೊಳಿಸಿ ಮಾತನಾಡಿದ ರಹಾನೆ, ’ಇದು ಕ್ಯಾನ್ಸರ್ ತಡೆಯುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿದ್ದು, ಕ್ಯಾನ್ಸರ್ ಮುಕ್ತ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ. ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ನಮ್ಮ ಸಾಮರ್ಥ್ಯ ಮೀರಿ ಜಾಗೃತಿ ಮೂಡಿಸುತ್ತೇವೆಂದು’ ಹೇಳಿದ್ದಾರೆ.
ರಾಜಸ್ಥಾನ ರಾಯಲ್ಸ್ ಪಿಂಕ್ ಜರ್ಸಿಯು ಆಕಾಶ ನೀಲಿ ಹಾಗೂ ಕಂದು ಬಣ್ಣವನ್ನು ಒಳಗೊಂಡಿದ್ದು, ಪಿಂಕ್ - ಬ್ರೆಸ್ಟ್ ಕ್ಯಾನ್ಸರ್, ನೀಲಿ- ಗರ್ಭನಾಳದ ಕ್ಯಾನ್ಸರ್ ಹಾಗೂ ಕಂದು- ಬಾಯಿ ಕ್ಯಾನ್ಸರ್ ಸೂಚಿಸುತ್ತದೆ. 

 

loader