IPL 2018: ವ್ಯರ್ಥವಾದ ರಾಹುಲ್ ಏಕಾಂಗಿ ಹೋರಾಟ

Rajasthan Royals beat Kings XI Punjab by 15 runs to stay alive
Highlights

ರಾಜಸ್ಥಾನ ನೀಡಿದ್ದ 159 ರನ್’ಗಳ ಸವಾಲಿನ ಗುರಿ ಬೆನ್ನತ್ತಿದ ಪಂಜಾಬ್ 143 ರನ್’ಗಳನ್ನಷ್ಟೇ ಶಕ್ತವಾಯಿತು. ರಾಹುಲ್ ಏಕಾಂಗಿಯಾಗಿ 95 ರನ್ ಸಿಡಿಸಿದರೆ, ಉಳಿದ 7 ಬ್ಯಾಟ್ಸ್’ಗಳು ಬಾರಿಸಿದ್ದು ಕೇವಲ 48 ರನ್’ಗಳು ಮಾತ್ರ. 

ಜೈಪುರ[ಮೇ.08]: ಕೆ.ಎಲ್ ರಾಹುಲ್ ಅಜೇಯ 95 ರನ್ ಬ್ಯಾಟಿಂಗ್ ಹೊರತಾಗಿಯೂ ರಾಜಸ್ಥಾನ ರಾಯಲ್ಸ್ ತಂಡದ ಸಂಘಟಿತ ಬೌಲಿಂಗ್ ನೆರವಿನಿಂದ ಪಂಜಾಬ್ ವಿರುದ್ಧ ರಹಾನೆ ಪಡೆ 15 ರನ್’ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ರಾಜಸ್ಥಾನ ರಾಯಲ್ಸ್ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದ್ದು ಪ್ಲೇ ಆಫ್ ಕನಸು ಜೀವಂತವಾಗಿರಿಸಿಕೊಂಡಿದೆ.
ರಾಜಸ್ಥಾನ ನೀಡಿದ್ದ 159 ರನ್’ಗಳ ಸವಾಲಿನ ಗುರಿ ಬೆನ್ನತ್ತಿದ ಪಂಜಾಬ್ 143 ರನ್’ಗಳನ್ನಷ್ಟೇ ಶಕ್ತವಾಯಿತು. ರಾಹುಲ್ ಏಕಾಂಗಿಯಾಗಿ 95 ರನ್ ಸಿಡಿಸಿದರೆ, ಉಳಿದ 7 ಬ್ಯಾಟ್ಸ್’ಗಳು ಬಾರಿಸಿದ್ದು ಕೇವಲ 48 ರನ್’ಗಳು ಮಾತ್ರ. ರಾಹುಲ್ ಹಾಗೂ ಸ್ಟೋನಿಸ್[11] ಹೊರತುಪಡಿಸಿ ಮತ್ತೆ ಯಾವ ಬ್ಯಾಟ್ಸ್’ಮನ್’ಗಳು ಎರಡಂಕಿ ಮೊತ್ತ ಮುಟ್ಟಲಿಲ್ಲ. ಗೇಲ್, ಕರುಣ್ ನಾಯರ್, ಮನೋಜ್ ತಿವಾರಿ ಸಂಪೂರ್ಣ ವಿಫಲರಾದರು.
ರಾಜಸ್ಥಾನ ರಾಯಲ್ಸ್ ಪರ ಕೆ. ಗೌತಮ್ 2 ವಿಕೆಟ್ ಪಡೆದರೆ, ಅರ್ಚರ್,ಉನಾದ್ಕತ್, ಸ್ಟೋಕ್ಸ್ ಹಾಗೂ ಇಶ್ ಸೋದಿ ತಲಾ ಒಂದೊಂದು ವಿಕೆಟ್ ಪಡೆದರು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ಜೋಸ್ ಬಟ್ಲರ್[82] ಅವರ ಆಕರ್ಷಕ ಅರ್ಧಶತಕದ ನೆರವಿನಿಂದ 158 ರನ್ ಬಾರಿಸಿತ್ತು.
ಸಂಕ್ಷಿಪ್ತ ಸ್ಕೋರ್
RR: 158/8
ಜೋಸ್ ಬಟ್ಲರ್: 82
ಟೈ: 34/4
KXIP: 143/7

loader