. 5 ವಿಕೇಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ಬೆಳಕಾದವರು ಆಲ್'ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ವಿಕೇಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ. ಪಾಂಡ್ಯ(83:66 ಎಸೆತ, 5 ಸಿಕ್ಸ್'ರ್ 5 ಬಂಡರಿ) ಬಿರುಸಾಗಿ ಆಸ್ಟ್ರೇಲಿಯಾ ಬೌಲರ್'ಗಳನ್ನು ದಂಡಿಸಿದರೆ ಧೋನಿ(88 ಎಸೆತ, 2 ಸಿಕ್ಸ್'ರ್, 4 ಬೌಂಡರಿ) ನಿಧಾನವಾಗಿ ಬ್ಯಾಟ್ ಬೀಸಿ ಪಾಂಡ್ಯರಿಗೆ ಜೊತೆಯಾದರು

ಚೆನ್ನೈ(ಸೆ.17): ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಆಲ್'ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ವಿಕೇಟ್ ಕೀಪರ್ ಎಂ.ಎಸ್. ಧೋನಿ ಅವರ ಭರ್ಜರಿ ಆಟದ ನೆರವಿನಿಂದ ಆಸೀಸ್'ಗೆ ಭಾರತ ತಂಡ 282 ರನ್'ಗಳ ಗುರಿ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚೆನ್ನೈ'ನ ಚಿದಂಬರಮ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಕೊಹ್ಲಿ ಪಡೆ 5 ಒವರ್ ಗಳಾಗುವಷ್ಟರಲ್ಲೇ 3 ವಿಕೇಟ್ ಕಳೆದುಕೊಂಡು ಆತಂಕಕ್ಕೆ ಒಳಗಗಾಗಿತ್ತು. ನಾಯಕ ಕೊಹ್ಲಿ, ಕನ್ನಡಿಗ ಮನೀಶ್ ಪಾಂಡೆ ಶೂನ್ಯಕ್ಕೆ ಔಟಾದರೆ ಆರಂಭಿಕ ಆಟಗಾರ ರಹಾನೆ 5 ರನ್'ಗೆ ಪೆವಿಲಿಯನ್'ಗೆ ತೆರಳಿದರು. ಮತ್ತೊರ್ವ ಆರಂಭಿಕ ಆಟಗಾರ ರೋಹಿತ್ ಶರ್ಮಾ ಕೆಲ ಹೊತ್ತು ಕ್ರೀಸ್'ನಲ್ಲಿ ನಿಂತರೂ 15ನೇ ಓವರ್'ನ ಕೊನೆಯ ಎಸೆತದಲ್ಲಿ 28 ರನ್ ಗಳಿಸಿ ಓಟಾದರು.

ತಂಡಕ್ಕೆ ಬೆಳಕಾದ ಧೋನಿ, ಪಂಡ್ಯಾ

ಧೋನಿಯೊಂದಿಗೆ ಜೊತೆಯಾದ ಕೇದಾರ್ ಜಾಧವ್ 21ನೇ ಓವರ್'ನಲ್ಲಿ 40 ರನ್'ಗಳಿಸಿ ಔಟಾದರು. 5 ವಿಕೇಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ಬೆಳಕಾದವರು ಆಲ್'ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ವಿಕೇಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ. ಪಾಂಡ್ಯ(83:66 ಎಸೆತ, 5 ಸಿಕ್ಸ್'ರ್ 5 ಬಂಡರಿ) ಬಿರುಸಾಗಿ ಆಸ್ಟ್ರೇಲಿಯಾ ಬೌಲರ್'ಗಳನ್ನು ದಂಡಿಸಿದರೆ ಧೋನಿ(88 ಎಸೆತ, 2 ಸಿಕ್ಸ್'ರ್, 4 ಬೌಂಡರಿ) ನಿಧಾನವಾಗಿ ಬ್ಯಾಟ್ ಬೀಸಿ ಪಾಂಡ್ಯರಿಗೆ ಜೊತೆಯಾದರು. 6ನೇ ವಿಕೇಟ್'ಗೆ ಇವರಿಬ್ಬರ ಜೋಡಿ 118 ರನ್ ಪೇರಿಸಿತು.

ಕೊನೆಯ ಓವರ್'ಗಳಲ್ಲಿ ಆಗಮಿಸಿದ ಬ್ಯಾಟಿಂಗ್ ಆಪತ್ಬಾಂಧವ ಭುವನೇಶ್ವರ ಕುಮಾರ್ 5 ಬೌಂಡರಿಗಳೊಂದಿಗೆ 32 ರನ್ ಸಿಡಿಸಿದರು. ಅಂತಿಮವಾಗಿ ಭಾರತ 50 ಓವರ್'ಗಳಲ್ಲಿ 7 ವಿಕೇಟ್ ನಷ್ಟಕ್ಕೆ 281 ರನ್ ಗಳಿಸಿತು. ಆಸ್ಟ್ರೇಲಿಯಾ ಪರ ಕೋಲ್ಟರ್-ನೈಲ್ 44/3, ಸ್ಟೊಯಿನಿಸ್ 54/2 ವಿಕೇಟ್ ಗಳಿಸಿ ಉತ್ತಮ ಬೌಲರ್ ಎನಿಸಿದರು.

ಸ್ಕೋರ್

ಭಾರತ 50 ಓವರ್'ಗಳಲ್ಲಿ 281/7

(ಪಾಂಡ್ಯ 83, ಧೋನಿ 79, ಜಾಧವ್ 40: ನೈಲ್ 44/3, ಸ್ಟೊಯಿನಿಸ್ 54/2)