ರಿಕೆಟ್ ಜಗತ್ತು ಕಂಡ ಅತ್ಯಂತ ಸಭ್ಯ ಆಟಗಾರರಲ್ಲಿ ಒಬ್ಬರು ಎಂದೇ ಕರೆಸಿಕೊಳ್ಳುವ ಕನ್ನಡಿಗ ರಾಹುಲ್ ದ್ರಾವಿಡ್ ಅವರಿಗಿಂದು 43ನೇ ಹುಟ್ಟುಹಬ್ಬದ ಸಂಭ್ರಮ. ಪ್ರಸ್ತುತ ಕಿರಿಯರ ಟೀಂ ಇಂಡಿಯಾದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ವಾಲ್ ಖ್ಯಾತಿಯ ದ್ರಾವಿಡ್'ಗೆ ಅಭಿಮಾನಿಗಳು ಸಾಮಾಜಿಕ ಜಾಲಾತಾಣಗಳಲ್ಲಿ ಶುಭಾಷಯ ಕೋರುತ್ತಿದ್ದಾರೆ.
ಬೆಂಗಳೂರು(ಜ.11): ಕ್ರಿಕೆಟ್ಜಗತ್ತುಕಂಡಅತ್ಯಂತ ಸಭ್ಯಆಟಗಾರರಲ್ಲಿಒಬ್ಬರುಎಂದೇಕರೆಸಿಕೊಳ್ಳುವಕನ್ನಡಿಗರಾಹುಲ್ದ್ರಾವಿಡ್ಅವರಿಗಿಂದು 43ನೇಹುಟ್ಟುಹಬ್ಬದಸಂಭ್ರಮ. ಪ್ರಸ್ತುತಕಿರಿಯರಟೀಂಇಂಡಿಯಾದಕೋಚ್ಆಗಿಕಾರ್ಯನಿರ್ವಹಿಸುತ್ತಿರುವವಾಲ್ಖ್ಯಾತಿಯದ್ರಾವಿಡ್'ಗೆಅಭಿಮಾನಿಗಳು ಸಾಮಾಜಿಕ ಜಾಲಾತಾಣಗಳಲ್ಲಿ ಶುಭಾಷಯ ಕೋರುತ್ತಿದ್ದಾರೆ.
ಆದರೆ ಈ ಬಾರಿ ರಾಹುಲ್ ತನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ತನ್ನ ಫೇಸ್ ಬುಕ್ ಪೇಜ್'ನಲ್ಲಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಿದ್ದಾರೆ. ಇದರೊಂದಿಗೆ 'ನನಗೆ ನನ್ನ ಹುಟ್ಟು ಹಬ್ಬ ಕ್ರಿಕೆಟ್ ನನ್ನ ಜೀವನಕ್ಕೆ ಕೊಟ್ಟ ಕೊಡುಗೆಯನ್ನು ನೆನಪಿಸಿಕೊಳ್ಳುವ ದಿನ. ಪ್ರತಿ ವರ್ಷ ಹುಟ್ಟುಹಬ್ಬದಂದು ಇದು ನನಗೆ ತಪ್ಪದೇ ಸಿಗುವ ಗಿಫ್ಟ್- ಗೆಳೆತನ, ಅನುಭವ, ಪ್ರೀತಿ ಹಾಗೂ ಇದಕ್ಕಿಂತಲೂ ಹೆಚ್ಚು ಸಿಗುತ್ತದೆ. ಇದೆಲ್ಲವೂ ನನಗೆ ಅತ್ಯಧಿಕ ಖುಷಿ ನೀಡುತ್ತದೆ. ಅದೃಷ್ಟವಶಾತ್ ಈ ಕೆಳಗೆ ನೀಡಿರುವ ವಿಡಿಯೋ ಕೂಡಾ ಇತರರೊಂದಿಗೆ ಹಂಚಿಕೊಳ್ಳಬಹುದಾದ ಅತ್ಯಂತ ಸುಂದರ ಗಿಫ್ಟ್ ಆಗಿದೆ' ಎಂಬ ಸಂದೇಶವನ್ನು ಬರೆದಿದ್ದಾರೆ.
ಈ ಮೂಲಕ ಕನ್ನಡಿಗ ರಾಹುಲ್ ದ್ರಾವಿಡ್ ತನ್ನ ಮನದ ಮಾತುಗಳನ್ನು ಬಿಚ್ಚಿಟ್ಟಿದಲ್ಲದೆ, ಕ್ರಿಕೆಟ್ ತನ್ನ ಜೀವನದಲ್ಲಿ ಎಷ್ಟು ಮಹತ್ವ ಪಡೆದುಕೊಂಡಿದೆ ಎಂಬುವುದನ್ನೂ ಸಾಬೀತುಪಡಿಸಿದ್ದಾರೆ. ಇಷ್ಟೇ ಅಲ್ಲದೆ ಕನ್ನಡ ನೆಲ ಹಾಗೂ ಇಲ್ಲಿನ ಕ್ರಿಕೆಟಿಗರ ಮೇಲೆ ತನಗಿರುವ ಪ್ರೀತಿಯನ್ನೂ ವ್ಯಕ್ತಪಡಿಸಿದ್ದಾರೆ.
