ರಣಜಿ ಟ್ರೋಫಿಯಲ್ಲಿ ಪದೇಪದೇ ವಿಫಲವಾಗುತ್ತಿದ್ದ ಕೆ.ಎಲ್ ರಾಹುಲ್ 92 ರನ್ ಬಾರಿಸಿದರೆ, ಸಮರ್ಥ್ 47 ರನ್ ಬಾರಿಸಿ ಔಟ್ ಆದರು.

ಆಲೂರು(ನ.12): ಬಹುತೇಕ ಏಕಪಕ್ಷೀಯವಾಗಿ ನಡೆದ ಕರ್ನಾಟಕ ಹಾಗೂ ದೆಹಲಿ ನಡುವಿನ ರಣಜಿ ಪಂದ್ಯವು ನೀರಸ ಡ್ರಾನಲ್ಲಿ ಅಂತ್ಯ ಕಂಡಿದೆ. 92 ರನ್ ಬಾರಿಸಿದ ರಾಹುಲ್ ಕೇವಲ 8 ರನ್'ಗಳಿಂದ ಶತಕ ವಂಚಿತರಾಗಿ ನಿರಾಸೆ ಅನುಭವಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸತತ ಮೂರು ಗೆಲುವು ಕಂಡಿದ್ದ ವಿನಯ್ ಕುಮಾರ್ ಪಡೆಗೆ ಪ್ರಸಕ್ತ ಸಾಲಿನ ಮೊದಲ ಡ್ರಾ ಇದು. 'ಎ' ಗುಂಪಿನಲ್ಲಿ 3 ಗೆಲುವು 1 ಡ್ರಾನೊಂದಿಗೆ 23 ಅಂಕ ಕಲೆಹಾಕಿರುವ ಕರ್ನಾಟಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದರೆ, 2 ಗೆಲುವು 2 ಡ್ರಾನೊಂದಿಗೆ 17 ಅಂಕ ಸಂಪಾದಿಸಿರುವ ದೆಹಲಿ 2ನೇ ಸ್ಥಾನದಲ್ಲಿ ಭದ್ರವಾಗಿದೆ.

ಮೊದಲ ಇನಿಂಗ್ಸ್'ನಲ್ಲಿ ಮಯಾಂಕ್ ಅಗರ್'ವಾಲ್(176) ಹಾಗೂ ಸ್ಟುವರ್ಟ್ ಬಿನ್ನಿ(118) ಆಕರ್ಷಕ ಶತಕಗಳ ನೆರವಿನಿಂದ 649ರನ್'ಗಳ ಬೃಹತ್ ಮೊತ್ತ ಕಲೆ ಹಾಕಿತ್ತು. ಇದಕ್ಕುತ್ತರವಾಗಿ ಡೆಲ್ಲಿ, ಅನುಭವಿ ಆಟಗಾರ ಗೌತಮ್ ಗಂಭೀರ್(144) ಸಮಯೋಚಿತ ಶತಕದ ನೆರವಿನಿಂದ 301 ರನ್ ಬಾರಿಸಿ ಸರ್ವಪತನ ಕಂಡಿತು.

ಇನ್ನು ದ್ವಿತಿಯ ಇನಿಂಗ್ಸ್ ಆರಂಭಿಸಿದ ಕರ್ನಾಟಕ 3 ವಿಕೆಟ್ ಕಳೆದುಕೊಂಡು 235 ರನ್ ಬಾರಿಸಿತು. ರಣಜಿ ಟ್ರೋಫಿಯಲ್ಲಿ ಪದೇಪದೇ ವಿಫಲವಾಗುತ್ತಿದ್ದ ಕೆ.ಎಲ್ ರಾಹುಲ್ 92 ರನ್ ಬಾರಿಸಿದರೆ, ಸಮರ್ಥ್ 47 ರನ್ ಬಾರಿಸಿ ಔಟ್ ಆದರು.

ಸಂಕ್ಷಿಪ್ತ ಸ್ಕೋರ್:

ಕರ್ನಾಟಕ : 649/10& 235/3

ದೆಹಲಿ : 301/10