ಕೋಚ್ ಜತೆಗೆ ದ್ರಾವಿಡ್‌ಗೆ ಹೊಸ ಜವಾಬ್ದಾರಿ
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಕಿರಿಯರ ಕೋಚ್ ರಾಹುಲ್ ದ್ರಾವಿಡ್‌ಗೆ ಹೊಸ ಜವಾಬ್ದಾರಿಯೊಂದು ಅರಸಿಬಂದಿದ್ದು, ಸೋಮವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಆವರಣದಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್‌ಸಿಎ) ಮುಖ್ಯಸ್ಥ ಹುದ್ದೆಯನ್ನು ಅಲಂಕರಿಸಲಿದ್ದಾರೆ.
ನವದೆಹಲಿ(ಜೂ.30): ಭಾರತ ತಂಡದ ಮಾಜಿ ನಾಯಕ ಹಾಗೂ ಕಿರಿಯರ ತಂಡದ ಕೋಚ್ ರಾಹುಲ್ ದ್ರಾವಿಡ್ ಸೋಮವಾರ (ಜು.1) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಆವರಣದಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್‌ಸಿಎ) ಮುಖ್ಯಸ್ಥ ಹುದ್ದೆಯನ್ನು ಅಲಂಕರಿಸಲಿದ್ದಾರೆ.
ರಾಹುಲ್ ದ್ರಾವಿಡ್‌ಗೆ ಎನ್‌ಸಿಎ ಜವಾಬ್ದಾರಿ?
ಎರಡು ವರ್ಷದ ಅವಧಿಗೆ ಅವರು ಕಾರ್ಯನಿರ್ವಹಿಸಲಿದ್ದು, ಮುಂದಿನ ಪೀಳಿಗೆಯ ಕ್ರಿಕೆಟಿಗರನ್ನು ಬೆಳೆಸಲಿದ್ದಾರೆ. ಕಿರಿಯರ ಕ್ರಿಕೆಟ್‌ಗೆ ಮಾರ್ಗಸೂಚಿ ಸಿದ್ಧಪಡಿಸಲಿರುವ ದ್ರಾವಿಡ್, ಉದಯೋನ್ಮುಖ ಮಹಿಳಾ ಕ್ರಿಕೆಟಿಗರ ಆಟದ ಮೇಲೂ ಕಣ್ಣಿಡಲಿದ್ದಾರೆ. ಎನ್‌ಸಿಎ ಹಾಗೂ ಪ್ರಾಂತೀಯ ಕ್ರಿಕೆಟ್ ಅಕಾಡೆಮಿಗಳಿಗೆ ಕೋಚಿಂಗ್ ಸಿಬ್ಬಂದಿ ನೇಮಿಸಲಿರುವ ದ್ರಾವಿಡ್, ಗಾಯಾಳು ಕ್ರಿಕೆಟಿಗರ ಪುನಶ್ಚೇತನ ಶಿಬಿರಗಳ ಕಡೆಗೂ ಗಮನ ನೀಡಲಿದ್ದಾರೆ.
ವಿಶ್ವಕಪ್ 2019: ಕೊಹ್ಲಿ ನಾಯಕತ್ವದ ಕುರಿತು ದ್ರಾವಿಡ್ ಅಭಿಪ್ರಾಯವೇನು?
ಭಾರತ ‘ಎ’ ಹಾಗೂ ಅಂಡರ್-19 ತಂಡದ ಪ್ರಧಾನ ಕೋಚ್ ಆಗಿ ಮುಂದುವರಿಯಲಿರುವ ದ್ರಾವಿಡ್, ಸಮಯ ಸಿಕ್ಕಾಗ ತಂಡಗಳೊಂದಿಗೆ ಪ್ರವಾಸಕ್ಕೆ ತೆರಳಲಿದ್ದಾರೆ ಎಂದು ಸುಪ್ರೀಂ ಕೋರ್ಟ್ ನೇಮಿತ ಬಿಸಿಸಿಐ ಆಡಳಿತ ಸಮಿತಿ (ಸಿಒಎ) ಶನಿವಾರ ತಿಳಿಸಿದೆ.