Asianet Suvarna News Asianet Suvarna News

ದ್ರೋಣಾಚಾರ್ಯಕ್ಕೆ ದ್ರಾವಿಡ್ ಹೆಸರು: ಆರಂಭದಲ್ಲೇ ವಿರೋಧ

ಐಪಿಎಲ್’ನಲ್ಲಿ 2014ರಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಮೆಂಟರ್ ಆಗಿ ಕಾರ್ಯ ನಿರ್ವಹಿಸಿದ್ದ ದ್ರಾವಿಡ್, 2015ರಲ್ಲಿ ಭಾರತ ಎ ಹಾಗೂ ಅಂಡರ್-19 ತಂಡದ ಕೋಚ್ ಆಗಿ ನೇಮಕಗೊಂಡಿದ್ದರು. 

Rahul Dravid Nomination for Dronacharya Award Has BCCI Split in Half

ಮುಂಬೈ[ಏ.30]: ಭಾರತ ಕಿರಿಯರ ಕ್ರಿಕೆಟ್ ತಂಡದ ಕೋಚ್ ರಾಹುಲ್ ದ್ರಾವಿಡ್ ಹೆಸರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸು ಮಾಡಿರುವ ಸುಪ್ರೀಂಕೋರ್ಟ್ ನೇಮಿತ ಬಿಸಿಸಿಐನ ಆಡಳಿತ ಮಂಡಳಿ ಕ್ರಮಕ್ಕೆ ಬಿಸಿಸಿಐನ ಕೆಲ ಅಧಿಕಾರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. 
‘ಓರ್ವ ಕ್ರಿಕೆಟಿಗನಾಗಿ ಹಾಗೂ ಅಂಡರ್-19 ಮತ್ತು ಭಾರತ ‘ಎ’ ತಂಡದ ಕೋಚ್ ಆಗಿ ದ್ರಾವಿಡ್ ಸೇವೆ ಅಮೂಲ್ಯ. ಆದರೆ, ಸಾಮಾನ್ಯವಾಗಿ ಕಿರಿಯ ಆಟಗಾರರು ವೈಯಕ್ತಿಕ ಕೋಚ್‌ಗಳನ್ನು ಹೊಂದಿರುತ್ತಾರೆ. ಆಟಗಾರರು ಅಂಡರ್-14, 16, 19 ತಂಡವನ್ನು ಪ್ರತಿನಿಧಿಸುವಲ್ಲಿ ವೈಯಕ್ತಿಕ ಕೋಚ್‌'ಗಳ ಪಾತ್ರ ಮಹತ್ವವಾದುದು. ಈ ದೃಷ್ಟಿಯಿಂದ ದ್ರಾವಿಡ್ ಹೆಸರನ್ನು ದ್ರೋಣಾಚಾರ್ಯಕ್ಕೆ ಶಿಫಾರಸು ಮಾಡಿರುವುದು ಸೂಕ್ತವಲ್ಲ’ ಎಂದಿದ್ದಾರೆ.ಐಪಿಎಲ್’ನಲ್ಲಿ 2014ರಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಮೆಂಟರ್ ಆಗಿ ಕಾರ್ಯ ನಿರ್ವಹಿಸಿದ್ದ ದ್ರಾವಿಡ್, 2015ರಲ್ಲಿ ಭಾರತ ಎ ಹಾಗೂ ಅಂಡರ್-19 ತಂಡದ ಕೋಚ್ ಆಗಿ ನೇಮಕಗೊಂಡಿದ್ದರು. 

Follow Us:
Download App:
  • android
  • ios