ಮೊದಲ ಬಾರಿಗೆ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿರುವ ಹಾರ್ದಿಕ್ ಪಾಂಡ್ಯ, ತನ್ನ ಮಾನಸಿಕ ದೃಢತೆಗೆ ಇಂಡಿಯಾ ಎ ಕೋಚ್ ರಾಹುಲ್ ದ್ರಾವಿಡ್ ಅವರು ನೀಡಿದ ಗೈಡೆನ್ಸ್ ಕಾರಣ ಎಂದು ಹೇಳಿದ್ದಾರೆ. ಿಂಡಿಯಾ ಎ ತಂಡ ಆಸ್ಟ್ರೇಲಿಯಾ ಸರಣಿ ವೇಳೆ ರಾಹುಲ್ ದ್ರಾವಿಡ್ ಅವರು ನನಗೆ ನೀಡಿದ ಸಲಹೆಗಳು ಮೈದಾನದಲ್ಲಿ ನನ್ನ ಮಾನಸಿಕ ಸ್ಥೈರ್ಯ ಬಲಗೊಳಿಸಿದವು ಎಂದು ಪಾಂಡ್ಯ ಹೇಳಿದ್ದಾರೆ.

ನವದೆಹಲಿ(ನ.04): ರಾಹುಲ್ ದ್ರಾವಿಡ್.. ಭಾರತದ ಎ ತಂಡದ ಕೋಚ್. ಯುವ ಕ್ರಿಕೆಟಿಗರ ಪಾಲಿನ ನಿಜವಾದ ಗೈಡ್. ಇದಕ್ಕೆ ಮತ್ತೊಂದು ಸಾಕ್ಷಿ ಹಾರ್ದಿಕ್ ಪಾಂಡ್ಯ. ಯುವ ಕ್ರಿಕೆಟಿಗರನ್ನ ಉತ್ತಮ ಆಟಗಾರರಾಗಿ ರೂಇಸುವಲ್ಲಿ ದ್ರಾವಿಡ್ ಎಷ್ಟು ಪ್ರಮುಖ ಪಾತ್ರ ವಹಿಸುತ್ತಾರೆ ಎಂಬುದಕ್ಕೆ ಪಾಂಡ್ಯ ಕೊಟ್ಟಿರುವ ಹೇಳಿಕೆ ಮತ್ತೊಂದು ಉದಾಹರಣೆ.

ಮೊದಲ ಬಾರಿಗೆ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿರುವ ಹಾರ್ದಿಕ್ ಪಾಂಡ್ಯ, ತನ್ನ ಮಾನಸಿಕ ದೃಢತೆಗೆ ಇಂಡಿಯಾ ಎ ಕೋಚ್ ರಾಹುಲ್ ದ್ರಾವಿಡ್ ಅವರು ನೀಡಿದ ಗೈಡೆನ್ಸ್ ಕಾರಣ ಎಂದು ಹೇಳಿದ್ದಾರೆ. ಿಂಡಿಯಾ ಎ ತಂಡ ಆಸ್ಟ್ರೇಲಿಯಾ ಸರಣಿ ವೇಳೆ ರಾಹುಲ್ ದ್ರಾವಿಡ್ ಅವರು ನನಗೆ ನೀಡಿದ ಸಲಹೆಗಳು ಮೈದಾನದಲ್ಲಿ ನನ್ನ ಮಾನಸಿಕ ಸ್ಥೈರ್ಯ ಬಲಗೊಳಿಸಿದವು ಎಂದು ಪಾಂಡ್ಯ ಹೇಳಿದ್ದಾರೆ.

`ಇಂಡಿಯಾ ಎ ತಂಡದಲ್ಲಿದ್ದಾಗ ಕೈಗೊಂಡ ಆಸ್ಟ್ರೇಲಿಯಾ ಸರಣಿ ತನ್ನಲ್ಲಿ ಹಲವು ಬದಲಾವಣೆಯನ್ನ ತಂದಿತು. ಈ ಪ್ರವಾಸ ನನ್ನನ್ನ ಒಬ್ಬ ಕ್ರಿಕೆಟಿಗನಾಗಿ ಬದಲಾಯಿಸಿತು. ಇದರಲ್ಲಿ ರಾಹುಲ್ ದ್ರಾವಿಡ್ ಅವರ ಕೊಡುಗೆ ಬಹಳಷ್ಟಿದೆ. ಆಟದಲ್ಲಿ ಮಾನಸಿಕ ಬಲವೂ ಪ್ರಮುಖವಾದದ್ದು, ದ್ರಾವಿಡ್ ನನ್ನನ್ನ ಮಾನಸಿಕವಾಗಿ ಬಲಗೊಳಿಸಿದರು' ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.