ಇತ್ತೀಚೆಗಷ್ಟೇ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಕ್ರಿಕೆಟ್ ನಿಯಮದಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿದೆ. ಅದರಲ್ಲಿ ಬ್ಯಾಟ್'ನ ದಪ್ಪ ಹಾಗೂ ಬ್ಯಾಟ್'ನ ಅಂಚಿಗೆ ಸಂಬಂಧಿಸಿದಂತೆ ಹೊಸ ನಿಯಮ ರೂಪಿಸಿದೆ. ಹೀಗಾಗಿ ಹೊಸ ನಿಯಮದಂತೆ ಡೇವಿಡ್ ವಾರ್ನರ್ ಅವರಂತಹ ಆಟಗಾರರು ತಮ್ಮ ಬ್ಯಾಟ್'ನ ಗಾತ್ರ ಬದಲಾಯಿಸಿಕೊಳ್ಳಬೇಕಾಗಿದೆ.

ನವದೆಹಲಿ(ಅ.24): ಐಸಿಸಿ ನೂತನ ನಿಯಮಗಳಲ್ಲಿ ಒಂದಾದ ಬ್ಯಾಟ್‌'ನ ಗಾತ್ರದಲ್ಲಿನ ಬದಲಾವಣೆ ಕ್ರಿಕೆಟ್ ಆಟದ ಮೇಲೆ ಪರಿಣಾಮ ಬೀರಲಿದೆ ಎಂದು ಭಾರತ ಕಿರಿಯರ ತಂಡದ ಕೋಚ್ ರಾಹುಲ್ ದ್ರಾವಿಡ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಬ್ಯಾಟ್ ಗಾತ್ರದಲ್ಲಿನ ಬದಲಾವಣೆ ಆಟದ ಮೇಲೆ ಪ್ರಭಾವ ಬೀರಲಿದೆ. ನೂತನ ನಿಯಮ ಬಹುತೇಕ ಆಟಗಾರರ ಮೇಲೆ ಪರಿಣಾಮ ಬೀರುವುದಿಲ್ಲ. ಕೆಲವು ಆಟಗಾರರು ಮಾತ್ರ ನಿಯಮ ಮೀರಿದ ಬ್ಯಾಟ್‌ಗಳನ್ನು ಬಳಸುತ್ತಿದ್ದು, ಬಹುತೇಕರು ನಿಯಮದಡಿಯಲ್ಲಿ ಬರುವ ಬ್ಯಾಟ್‌'ಗಳನ್ನೇ ಬಳಸುತ್ತಿದ್ದಾರೆ. ನಿಜವಾಗಲೂ ಇದು ಉತ್ತಮ ನಿರ್ಧಾರ’ ಎಂದು ದ್ರಾವಿಡ್ ಹೇಳಿದ್ದಾರೆ.