ಭಾರತದ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ಭಾರತ 19 ವರ್ಷದೊಳಗಿನವರ ತಂಡದ ಆಯ್ಕೆಯಲ್ಲಿ ಪಾಲ್ಗೊಳ್ಳಲು ನಿರಾ ಕರಿಸಿದ್ದು, ಹೊಸ ವಿವಾದಗಳಿಗೆ ದಾರಿ ಮಾಡಿಕೊಡಲು ತಮಗೆ ಇಷ್ಟವಿಲ್ಲ ಎಂದಿದ್ದಾರೆ. ದ್ರಾವಿಡ್‌ರ 10 ತಿಂಗಳ ಗುತ್ತಿಗೆ ಅವಧಿ ಐಪಿಎಲ್‌ಗೂ ಮೊದಲೇ ಮುಕ್ತಾ ಯಗೊಂಡಿದ್ದು, ತಾಂತ್ರಿಕವಾಗಿ ಸದ್ಯ ಅವರು ಭಾರತ ಕಿರಿಯರ ತಂಡದ ಕೋಚ್‌ ಹುದ್ದೆಯಲ್ಲಿಲ್ಲ.

ಮುಂಬೈ(ಜೂ.16): ಭಾರತದ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ಭಾರತ 19 ವರ್ಷದೊಳಗಿನವರ ತಂಡದ ಆಯ್ಕೆಯಲ್ಲಿ ಪಾಲ್ಗೊಳ್ಳಲು ನಿರಾ ಕರಿಸಿದ್ದು, ಹೊಸ ವಿವಾದಗಳಿಗೆ ದಾರಿ ಮಾಡಿಕೊಡಲು ತಮಗೆ ಇಷ್ಟವಿಲ್ಲ ಎಂದಿದ್ದಾರೆ. ದ್ರಾವಿಡ್‌ರ 10 ತಿಂಗಳ ಗುತ್ತಿಗೆ ಅವಧಿ ಐಪಿಎಲ್‌ಗೂ ಮೊದಲೇ ಮುಕ್ತಾ ಯಗೊಂಡಿದ್ದು, ತಾಂತ್ರಿಕವಾಗಿ ಸದ್ಯ ಅವರು ಭಾರತ ಕಿರಿಯರ ತಂಡದ ಕೋಚ್‌ ಹುದ್ದೆಯಲ್ಲಿಲ್ಲ.

‘ದ್ರಾವಿಡ್‌ ತಾವು ಆಯ್ಕೆ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳುವು­ದಿಲ್ಲ ಎಂದು ಬಿಸಿಸಿಐಗೆ ತಿಳಿಸಿದ್ದಾರೆ. ಅವರ ಗುತ್ತಿಗೆ ಅವಧಿ ಇನ್ನೂ ವಿಸ್ತರಣೆಯಾಗದ ಕಾರಣ, ಯಾವುದೇ ವಿವಾದಕ್ಕೆ ಗುರಿಯಾಗುವುದು ಅವರಿಗೆ ಇಷ್ಟವಿಲ್ಲ. ಹುದ್ದೆಯಲ್ಲಿ ಇಲ್ಲದೆ ತಂಡದ ಆಯ್ಕೆ ನಡೆಸುವುದು ಸರಿಯಲ್ಲ ಎಂದು ದ್ರಾವಿಡ್‌ ತಿಳಿಸಿದ್ದಾರೆ' ಎಂದು ಬಿಸಿಸಿಐ ಮೂಲವೊಂದು ಹೇಳಿದೆ.

ಜುಲೈ 2ನೇ ವಾರದಲ್ಲಿ ಭಾರತ 19 ವರ್ಷದೊಳಗಿನವರ ತಂಡ ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳಲಿದ್ದು, ಅದಕ್ಕಾಗಿ ತಂಡದ ಆಯ್ಕೆಗೆ ಸಹಕರಿಸುವಂತೆ ಬಿಸಿಸಿಐ ದ್ರಾವಿಡ್‌ರನ್ನು ಕೇಳಿಕೊಂಡಿತ್ತು ಎನ್ನಲಾಗಿದೆ.
ಬಿಸಿಸಿಐ ಆಡಳಿತ ಸಮಿತಿ ಪ್ರಸ್ತಾಪಿಸಿರುವ ನೂತನ ನಿಯಮದ ಪ್ರಕಾರ, ಎಲ್ಲಾ ಕೋಚ್‌ಗಳ ಗುತ್ತಿಗೆ ಅವಧಿ 2 ವರ್ಷಗಳಿಗಿರಲಿದ್ದು, ಅವರಿಗೆ ಯಾವುದೇ ಐಪಿಎಲ್‌ ತಂಡದ ಕೋಚ್‌ ಆಗಲು ಅನುಮತಿ ಇರುವುದಿಲ್ಲ ಎನ್ನಲಾಗಿದೆ. ದ್ರಾವಿಡ್‌ ಕೇವಲ 10 ತಿಂಗಳ ಗುತ್ತಿಗೆ ಅವಧಿಗೆ ಮಾತ್ರ ಸಹಿ ಹಾಕಿದ್ದರಿಂದ ಅವರ ಕಾರ್ಯಾವಧಿ ಮಾಚ್‌ರ್‍ 31ಕ್ಕೇ ಅಂತ್ಯಗೊಂಡಿತ್ತು. ಆನಂತರ ಡೆಲ್ಲಿ ತಂಡದ ಮೆಂಟರ್‌ ಆಗಿ ದ್ರಾವಿಡ್‌ ಕಾಣಿಸಿಕೊಂಡಿ­ದ್ದರು. ಆದರೆ ಆಡಳಿತ ಸಮಿತಿ ಮಾಜಿ ಸದಸ್ಯ ರಾಮಚಂದ್ರ ಗುಹಾ ತಮ್ಮ ರಾಜೀನಾಮೆ ಪತ್ರದಲ್ಲಿ ದ್ರಾವಿಡ್‌ ವಿರುದ್ಧ ಸ್ವಹಿತಾಸಕ್ತಿ ಆರೋಪ ಮಾಡಿದ್ದರು. ಈ ಬಗ್ಗೆ ಸ್ಪಷ್ಟನೆ ಕೇಳಿ ದ್ರಾವಿಡ್‌ ಸಹ ಬಿಸಿಸಿಐಗೆ ಪತ್ರ ಬರೆದಿದ್ದರು.