ಕ್ವೀನ್ಸ್ ಕ್ಲಬ್‌ನಲ್ಲಿ ಟೂರ್ನಿಯಲ್ಲಿ ಆಡಲು ಸಂತಸವಾಗಿದೆ. ವಿಂಬಲ್ಡನ್‌ಗಾಗಿ ಇಲ್ಲಿ ಉತ್ತಮ ಅಭ್ಯಾಸ ನಡೆಸಬಹುದಾಗಿದೆ ಎಂದು ನಡಾಲ್ ಹೇಳಿದ್ದಾರೆ.
ಲಂಡನ್(ಫೆ.07): ವರ್ಷದ ಮೊದಲ ಪ್ರತಿಷ್ಠಿತ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯಾದ ಆಸ್ಟ್ರೇಲಿಯಾ ಓಪನ್'ನ ಫೈನಲ್ನಲ್ಲಿ ಮುಗ್ಗರಿಸಿದ್ದ ಸ್ಪೇನ್'ನ ಸ್ಟಾರ್ ಆಟಗಾರ ರಾಫೆಲ್ ನಡಾಲ್, ವಿಂಬಲ್ಡನ್ ಟ್ರೋಫಿ ಮೇಲೆ ಕಣ್ಣಿಟ್ಟಿದ್ದಾರೆ.
ಹೀಗಾಗಿ ಜೂನ್'ನಲ್ಲಿ ನಡೆಯಲಿರುವ ಕ್ವೀನ್ಸ್ ಕ್ಲಬ್'ನಲ್ಲಿನ ಏಗಾನ್ ಚಾಂಪಿಯನ್ಶಿಪ್ ಟೂರ್ನಿಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಕಳೆದ ವರ್ಷ ಮಣಿಕಟ್ಟಿನ ಗಾಯದ ಸಮಸ್ಯೆಯಿಂದ ನಡಾಲ್ ಬಳಲಿದ್ದರು.
14 ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಜಯಿಸಿರುವ ನಡಾಲ್, ಆಸೀಸ್ ಓಪನ್'ನಲ್ಲಿ ಸ್ವಿಟ್ಜರ್'ಲೆಂಡ್'ನ ರೋಜರ್ ಫೆಡರರ್ ಎದುರು ಸೋಲುಂಡು ರನ್ನರ್'ಅಪ್'ಗೆ ತೃಪ್ತಿಪಟ್ಟಿದ್ದರು.
ಕ್ವೀನ್ಸ್ ಕ್ಲಬ್ನಲ್ಲಿ ಟೂರ್ನಿಯಲ್ಲಿ ಆಡಲು ಸಂತಸವಾಗಿದೆ. ವಿಂಬಲ್ಡನ್ಗಾಗಿ ಇಲ್ಲಿ ಉತ್ತಮ ಅಭ್ಯಾಸ ನಡೆಸಬಹುದಾಗಿದೆ ಎಂದು ನಡಾಲ್ ಹೇಳಿದ್ದಾರೆ.
