Asianet Suvarna News Asianet Suvarna News

ಡೇವಿಸ್ ಕಪ್ : ಭಾರತದೆದುರು ದೈತ್ಯ ಸವಾಲು

Rafael Nadal to face Ramkumar Ramanathan in India Spain Davis Cup opener
  • Facebook
  • Twitter
  • Whatsapp

ನವ​ದೆ​ಹ​ಲಿ

ಬಹು ​ನಿ​ರೀ​ಕ್ಷಿತ ಡೇವಿಸ್‌ ಕಪ್‌ ಪಂದ್ಯಾ​ವ​ಳಿಯ ವಿಶ್ವ ಗುಂಪಿನ ಪ್ಲೇ ಆಫ್‌ ಸುತ್ತು ಶುಕ್ರ​ವಾ​ರ​ದಿಂದ ಆರಂಭ​ಗೊ​ಳ್ಳ​ಲಿದ್ದು, ತನ್ನ ತವ​ರಿನ ಅಂಗ​ಳದಲ್ಲಿ ಬಲಿಷ್ಠ ಸ್ಪೇನ್‌ ತಂಡ​ವನ್ನು ಎದು​ರಿ​ಸಲು ಭಾರತ ತಂಡ ಸಜ್ಜಾ​ಗಿದೆ.

ಈಗಾ​ಗಲೇ ಐದು ಬಾರಿ ಚಾಂಪಿ​ಯನ್‌ ಪಟ್ಟವನ್ನ​ಲಂಕ​ರಿಸಿರುವ ಹೆಗ್ಗ​ಳಿಕೆ ಹೊಂದಿ​ರುವ ಸ್ಪೇನ್‌ ತಂಡವು ತನ್ನ ಬತ್ತ​ಳಿ​ಕೆ​ಯಲ್ಲಿ ರಾಫೆಲ್‌ ನಡಾಲ್‌, ಡೇವಿಡ್‌ ಫೆರರ್‌ ಅವ​ರಂಥ ವಿಶ್ವ​ದ​ರ್ಜೆಯ ಆಟ​ಗಾ​ರರ ಪಡೆ​ಯನ್ನೇ ಹೊಂದಿದೆ. ಇತ್ತ, ಭಾರ​ತದ ಪಾಳ​ಯ​ದಲ್ಲಿ ಲಿಯಾಂಡರ್‌ ಪೇಸ್‌, ರಾಮ್‌ ರಾಮ​ನಾ​ಥನ್‌, ಸಾಕೇತ್‌ ಮೈನೇನಿ ಇದ್ದು ಅನು​ಭವಿ ರೋಹನ್‌ ಬೋಪಣ್ಣ ಗಾಯದ ಸಮ​ಸ್ಯೆ​ಯಿಂದಾಗಿ ಟೂರ್ನಿಯಿಂದ ದೂರ ಉಳಿ​ದಿ​ದ್ದಾರೆ. ಹಾಗಾಗಿ, ಅವರ ಜಾಗಕ್ಕೆ ಕಿರಿ​ಯ ಸುಮಿತ್‌ ನರ್ವಾಲ್‌ ಅವ​ರಿಗೆ ಅವ​ಕಾಶ ನೀಡ​ಲಾ​ಗಿದೆ. ತಂಡ​ಗಳ ಬಲಾ​ಬ​ಲದ ಲೆಕ್ಕಾ​ಚಾ​ರ​ದಲ್ಲಿ ನೋಡು​ವು​ದಾ​ದರೆ ಸ್ಪೇನ್‌ ತಂಡ, ಭಾರ​ತ​ಕ್ಕಿಂತ ಬಲಿ​ಷ್ಠ​ವೆ​ನಿ​ಸಿ​ದರೂ, ಸವಾ​ಲನ್ನು ಸಮ​ರ್ಪ​ಕ​ವಾಗಿ ಎದು​ರಿ​ಸಿದ್ದೇ ಆದಲ್ಲಿ ಭಾರ​ತಕ್ಕೆ ಈ ಟೂರ್ನಿಯ ಕಬ್ಬಿ​ಣದ ಕಡ​ಲೆ​ಯಾ​ಗದು.

ಬಲಿಷ್ಠ ಆಟ​ಗಾ​ರ​ರನ್ನು ಎದು​ರು​ಗೊ​ಳ್ಳಲಿರುವ ರಾಮ್‌​ಕು​ಮಾರ್‌ ರಾಮ​ನಾ​ಥನ್‌ಗೆ ಇದು ಮೊದಲ ಡೇವಿಸ್‌ ಕಪ್‌ ಹಣಾ​ಹಣಿ. ಅವ​ರೊಂದಿಗೆ ಕಣ​ಕ್ಕಿ​ಳಿ​ಯ​ಲಿ​ರು​ವ ಸಾಕೇತ್‌ ಮೈನೇ​ನಿ ಈ ಅವ​ಕಾ​ಶ​ವನ್ನು ಸದು​ಪ​ಯೋಗಪಡಿ​ಸಿ​ಕೊಂಡಲ್ಲಿ ತಮ್ಮ ಆತ್ಮ​ವಿ​ಶ್ವಾ​ಸ​ವನ್ನು ಅಪಾ​ರ​ವಾಗಿ ವೃದ್ಧಿ​ಸಿ​ಕೊ​ಳ್ಳಬ​ಹುದು. ಈವ​ರೆ​ಗಿನ ತಮ್ಮ ವೃತ್ತಿ​ಜೀ​ವ​ನ​ಗ​ಳ​ಲ್ಲಿ ತಲಾ ಐದು ಡೇವಿಸ್‌ ಕಪ್‌ ಪಂದ್ಯ​ಗ​ಳ​ನ್ನಷ್ಟೇ ಆಡಿ​ರುವ ಈ ಇಬ್ಬ​ರೂ ಆ ಯಾವುದೇ ಹಣಾ​ಹ​ಣಿ​ಯಲ್ಲಿ ಬಲಿಷ್ಠ ಆಟ​ಗಾ​ರ​ರನ್ನು ಎದು​ರಿ​ಸಿಲ್ಲ. ಹಾಗಾಗಿ, ಈ ಬಾರಿಯ ಡೇವಿಸ್‌ ಕಪ್‌ ಈ ಇಬ್ಬರಿಗೂ ದೊಡ್ಡ ಅನು​ಭವ ನೀಡ​ಲಿ​ರು​ವು​ದಂತೂ ಸತ್ಯ​. ಇನ್ನು, ಭಾರ​ತದ ಪರ ಲಿಯಾಂಡರ್‌ ಅವರು, ಡೇವಿಸ್‌ ಕಪ್‌​ನಲ್ಲಿ 53 ಪಂದ್ಯ​ಗ​ಳ​ನ್ನಾ​ಡಿ​ದ್ದು ಅವರ ಮೇಲೆ ಭಾರ​ತೀಯ ಟೆನಿಸ್‌ ಅಭಿ​ಮಾ​ನಿ​ಗಳ ಹೆಚ್ಚಿನ ನಿರೀ​ಕ್ಷೆ​ಯಿದೆ.

ಭಾರ​ ತೀಯ ಟೆನಿಸ್‌ ಅಭಿ​ಮಾ​ನಿ​ಗ​ಳು ಮುಂದಿನ ಮೂರು ದಿನ ಹಬ್ಬದ ವಾತಾ​ವ​ರ​ಣ​ದಲ್ಲಿ ಮಿಂದೇ​ಳ​ಬ​ಹುದು. ತಮ್ಮದೇ ನೆಲ​ದಲ್ಲಿ ಆಡು​ತ್ತಿ​ರುವ ವಿಶ್ವದ 4ನೇ ಶ್ರೇಯಾಂಕಿತ ರಾಫೆಲ್‌ ನಡಾಲ್‌ ಅವರ ಆಟ​ವನ್ನು ಕಣ್ತುಂಬಿ​ಕೊ​ಳ್ಳುವ ಅವ​ಕಾಶ ಅವರಿಗೆ ಒದ​ಗಿ​ಬಂದಿದೆ. ಈ ಹಿಂದೆ , ಸ್ಪೇನ್‌ ತಂಡ ಡೇವಿಸ್‌ ಕಪ್‌ ಗೆದ್ದಾ​ಗ​ಲೆಲ್ಲಾ (2004, 2008, 2009, 2011 ಆವೃ​ತ್ತಿ​ಗ​ಳ​ಲ್ಲಿ), ತಂಡದ ಯಶ​ಸ್ಸಿ​ನಲ್ಲಿ ನಡಾಲ್‌ ಪಾತ್ರ ದೊಡ್ಡ​ದಿತ್ತು. ಇನ್ನು, 2008, 2009, 2011ರ ಆವೃ​ತ್ತಿ​ಗ​ಳಲ್ಲಿ ಗೆದ್ದಾಗ ಫೆರರ್‌ ಪಾತ್ರ ಮಹ​ತ್ವ​ದ್ದಾ​ಗಿತ್ತು. ಇದೀಗ, ಈ ಇಬ್ಬರೂ ಸ್ಪೇನ್‌ ತಂಡ​ದ​ಲ್ಲಿ​ರು​ವುದು ಆ ತಂಡದ ಆತ್ಮ​ವಿ​ಶ್ವಾ​ಸ​ವನ್ನು ಸಹ​ಜ​ವಾ​ಗಿಯೇ ಹೆಚ್ಚಿ​ಸಿದೆ. ಈವ​ರೆ​ಗಿನ ತಮ್ಮ ವೃತ್ತಿ​ಜೀ​ವ​ನ​ದಲ್ಲಿ ನಡಾಲ್‌ 16 ಪಂದ್ಯಗಳ​ನ್ನಾ​ಡಿ​ದ್ದರೆ, ಫೆರರ್‌ 18, ಫೆಲಿ​ಸಿ​ಯಾನೊ ಲೋಪೇಜ್‌ 22 ಹಾಗೂ ಮಾರ್ಕ್ ಲೋಪೇಜ್‌ 9 ಪಂದ್ಯ​ಗ​ಳ​ನ್ನಾ​ಡಿ​ದ್ದಾರೆ.

ಈ ಹಿಂದೆ, ಮೂರು ಬಾರಿ ಡೇ​ವಿಸ್‌ ಕಪ್‌ ಫೈನ​ಲ್‌ಗೆ ಹೋಗಿ​ದ್ದರೂ (1966, 1974 ಹಾಗೂ 1987) ಭಾರ​ತ ಕೇವಲ ರನ್ನರ್‌ ಅಪ್‌ ಸ್ಥಾನಕ್ಕೆ ತೃಪ್ತಿ​ಪ​ಡ​ಬೇ​ಕಾಗಿ ಬಂದಿದೆ. ಈ ಬಾರಿ ಪ್ರಶಸ್ತಿ ಗೆಲ್ಲುವ ಹಂತಕ್ಕೆ ಸಾಗ​ಬೇ​ಕಾ​ದರೆ, ಭಾರ​ತಕ್ಕೆ ಈಗ ಸದ್ಯ​ಕ್ಕಿರುವ ಸ್ಪೇನ್‌ ಸವಾ​ಲನ್ನು ಮೆಟ್ಟಿನಿಲ್ಲ​ಬೇ​ಕಾದ ಅನಿ​ವಾ​ರ್ಯತೆ ಇದೆ.

ವಿಶ್ವ ಗುಂಪು ಪ್ಲೇ ಆಫ್‌ ವೇಳಾ​ಪ​ಟ್ಟಿ(ಭಾ​ರತ V/s ಸ್ಪೇನ್‌)

ದಿನಾಂಕ ಪಂದ್ಯ ​ಸಮ​ಯ

ಸೆ. 16 ರಾಮ್‌​ಕು​ಮಾರ್‌ ರಾಮ​ನಾ​ಥನ್‌ V/s ರಾಫಲ್‌ ನಡಾಲ್‌ (ಸಂಜೆ 5ಕ್ಕೆ)

ಸಾಕೇತ್‌ ಮೈನೇನಿ V/s ಡೇವಿಡ್‌ ಫೆರರ್‌ (ಮೊ​ದ​ಲ ಪಂದ್ಯದ ನಂತ​ರ)

ಸೆ. 17 ಲಿಯಾಂಡರ್‌ ಪೇಸ್‌ ಮತ್ತು ಸಾಕೇತ್‌ ಮೈನೇನಿ V/s ಮಾರ್ಕ್ ಲೋಪೇಜ್‌ ಮತ್ತು ಫೆಲಿಸಿಯಾನೊ ಲೋಪೇಜ್‌ (ಸಂಜೆ 7ಕ್ಕೆ)

ಸೆ. 18 ಸಾಕೇತ್‌ ಮೈನೇನಿ V/s ರಾಫೆಲ್‌ ನಡಾ​ಲ್‌ (ಸಂಜೆ 5ಕ್ಕೆ)

ರಾಮ್‌​ಕು​ಮಾರ್‌ ರಾಮ​ನಾ​ಥನ್‌ V/s ಡೇವಿಡ್‌ ಫೆರರ್‌ (ಮೊ​ದಲ ಪಂದ್ಯದ ನಂತ​ರ)

ಸ್ಥಳ: ಆರ್‌.​ಕೆ. ಖನ್ನಾ ಟೆನಿಸ್‌ ಕ್ರೀಡಾಂಗಣ, ನವ​ದೆ​ಹ​ಲಿ

---------------------------------------------------------

ಭಾರ​ತ- ಸ್ಪೇನ್‌ ನಡು​ವಿನ ಹಿಂದಿನ ಹಣಾ​ಹ​ಣಿ: ಒಂದು ಮೆಲು​ಕು

1922 ವಿಶ್ವ ಗುಂಪು ಕ್ವಾರ್ಟರ್‌ ಫೈನ​ಲ್‌ ಭಾರ​ತಕ್ಕೆ 4-1 ಅಂತ​ರದ ಗೆಲ​ವು

1927 ಯೂರೋಪ್‌ ಟೂರ್‌ 1ನೇ ಸುತ್ತು ​ಭಾ​ರ​ತಕ್ಕೆ 3-2 ಅಂತ​ರದ ಗೆಲ​ವು

1965 ಐಎ​ನ್‌​ಝಡ್‌ ಫೈನ​ಲ್‌ ​ಭಾ​ರ​ತಕ್ಕೆ 2-3 ಅಂತ​ರದ ಸೋಲು

Follow Us:
Download App:
  • android
  • ios