ಫ್ರೆಂಚ್ ಓಪನ್ ಫೈನಲ್‌ನಲ್ಲಿ ರಾಫೆಲ್ ನಡಾಲ್ ಕಟ್ಟಿದ್ದ ವಾಚ್ ಬೆಲೆ ಏಷ್ಟು

Rafael Nadal sported a £540,000 watch as he breezed to his 11th French Open title
Highlights

ಫ್ರೆಂಚ್ ಓಪನ್ ಟೂರ್ನಿ ಚಾಂಪಿಯನ್ ಪಟ್ಟ ಅಲಂಕರಿಸಿದ ಸ್ಪೇನ್‌ನ ರಾಫೆಲ್ ನಡಾಲ್ ಇತಿಹಾಸ ರಚಿಸಿದ್ದಾರೆ. ಆದರೆ ಫೈನಲ್ ಪಂದ್ಯದ ವೇಳೆ ನಡಾಲ್ ಕಟ್ಟಿದ್ದ ವಾಚ್ ಭಾರಿ ಸದ್ದು ಮಾಡುತ್ತಿದೆ. ಈ ವಾಚ್ ಬೆಲೆ ಕೇಳಿದರೆ ನೀವು ಅಚ್ಚರಿಯಾಗೋದು ಖಚಿತ
 

ರಷ್ಯಾ(ಜೂನ್.11): ವಾಚ್ ಎಷ್ಟರ ಮಟ್ಟಿಗೆ ಸದ್ದು ಮಾಡುತ್ತೆ ಅನ್ನೋದನ್ನ ಕನ್ನಡಿಗರಿಗೆ ಬಿಡಿಸಿ ಹೇಳಬೇಕಾಗಿಲ್ಲ. 2018ರ ಫ್ರೆಂಚ್ ಓಪನ್ ಟೂರ್ನಿ ಪ್ರಶಸ್ತಿ ಗೆದ್ದ ಸ್ಪೇನ್‌ನ ರಾಫೆಲ್ ನಡಾಲ್, ವಿಶ್ವದಾಖಲೆ ಬರೆದಿದ್ದಾರೆ. ಇದರ ಜೊತೆ ನಡಾಲ್ ವಾಚ್ ಕೂಡ  ವಿಶ್ವದಲ್ಲೇ ಸುದ್ದಿಯಾಗಿದೆ.

ಆಸ್ಟ್ರಿಯಾದ ಡೋಮಿನಿಕ್ ಥೀಮ್ ವಿರುದ್ಧದ ಫ್ರೆಂಚ್ ಓಪನ್ ಫೈನಲ್ ಪಂದ್ಯದಲ್ಲಿ ರಾಫೆಲ್ ನಡಾಲ್ ನೇರ್ ಸೆಟ್‌ಗಳ ಗೆಲುವು ದಾಖಲಿಸಿದ್ದರು. ಜೊತೆಗೆ 11ನೇ ಫ್ರೆಂಚ್ ಓಪನ್ ಟೂರ್ನಿ ಗೆದ್ದ ಸಾಧನೆ ಮಾಡಿದ್ದರು. ಈ ಫೈನಲ್ ಪಂದ್ಯದ ವೇಳೆ ರಾಫೆಲ್ ನಡಾಲ್, ರಿಚರ್ಡ್ ಮಿಲೆ ವಾಚ್ ಕಟ್ಟಿದ್ದರು. ಇದರ ಬೆಲೆ ಬರೋಬ್ಬರಿ 4.86 ಕೋಟಿ ರೂಪಾಯಿ. 

ಸ್ವಿಸ್ ಬ್ರ್ಯಾಂಡ್  ರಿಚರ್ಡ್ ಮಿಲೆ ವಾಚ್ ಕಂಪೆನಿ ತಯಾಸಿರುವ ಈ RM27-03s ವಾಚನ್ನ ನಡಾಲ್ ಕಟ್ಟಿದ್ದರು. ವಿಶೇಷ ಅಂದರೆ, ಕಂಪೆನಿ ಕೇವಲ 50 ವಾಚ್‌ಗಳನ್ನ ಮಾತ್ರ ತಯಾರಿಸಿದೆ. ಇದರಲ್ಲಿ ಒಂದು ವಾಚ್ ನಡಾಲ್ ಕೈಯಲ್ಲಿದೆ. 


 

loader