ಮೋಜೋರ್ಕಾ(ಅ.11): ಟೆನಿಸಿ ದಿಗ್ಗಜ ರಾಫೆಲ್ ನಡಾಲ್ ಮೈದಾನದಲ್ಲಿ ಅಗ್ರೆಸ್ಸಿವ್ ಕ್ರೀಡಾಪಟು. ಆದರೆ ಮೈದಾನದ ಹೊರಗೆ ಮಾನವೀಯತೆಯ ಪ್ರತಿರೂಪ. ಇತ್ತೀಚೆಗೆ ಸುರಿದ ಭೀಕರ ಮಳೆಗೆ 10ಕ್ಕೂ ಹೆಚ್ಚು ಜನ ಸಾವೀಗೀಡಾಗಿದ್ದರೆ, ಹಲವರು ಆಶ್ರಯ ತಾಣಗಳ ಮೊರೆ ಹೋಗಿದ್ದಾರೆ. ಇದೀಗ ಪ್ರವಾಹದಿಂದ ತತ್ತರಿಸಿರುವ ಜನರ ರಕ್ಷಣೆಗೆ ಸ್ವತಃ ಟೆನಿಸ್ ದಿಗ್ಗಜ ರಾಫೆಲ್ ನಡಾಲ್ ಧಾವಿಸಿದ್ದಾರೆ.

ಪ್ರವಾಹದಲ್ಲಿ ಮನೆ ಕಳೆದುಕೊಂಡ ಜನರನ್ನ ಕೆರದುಕೊಂಡು ಬಂದು ತಮ್ಮ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಆಶ್ರಯ ನೀಡಿದ್ದಾರೆ. ಅವರಿಗೆ ಊಟ ವಸತಿ ಸೇರಿದಂತೆ ಇತರ ಸೌಲಭ್ಯಗಳನ್ನ ನೀಡಿದ್ದಾರೆ.

ಮೋಜಾರ್ಕೋದಲ್ಲಿ  ಕೆಸರು ನೀರು ನುಗ್ಗಿದ ಮನೆಗಳಿಗೆ ರಕ್ಷಣಾ ಪಡೆಯೊಂದಿಗೆ ತೆರಳಿದ ನಡಾಲ್ ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸ್ಪೇನ್ ಪ್ರವಾಹ ಸಂತ್ರಸ್ಥರ ಹೊಸ ಬದುಕು ಕಟ್ಟಿಕೊಡಲು ನಡಾಲ್ ಅವಿರತ ಪ್ರಯತ್ನ ಮಾಡುತ್ತಿದ್ದಾರೆ. ಈ ಟೆನಿಸ್ ದಿಗ್ಗಜ ಇದೀಗ ಜನರ ಸೇವಕನಾಗಿ ದುಡಿಯುತ್ತಿದ್ದಾರೆ.