ಸ್ವಿಜರ್‌ಲೆಂಡ್‌ನ ರೋಜರ್ ಫೆಡರರ್ 2ನೇ, ಅರ್ಜೆಂಟೀನಾದ ಜಾನ್ ಮಾರ್ಟಿನ್ ಡೆಲ್ ಪೊಟ್ರೊ, ಅಲೆಕ್ಸಾಂಡರ್ ಜ್ವೆರೆವ್ ಮತ್ತು ದ. ಆಫ್ರಿಕಾದ ಕೆವಿನ್ ಆ್ಯಂಡರ್‌ಸನ್ ನಂತರದ ಸ್ಥಾನದಲ್ಲಿದ್ದಾರೆ.

ಮ್ಯಾಡ್ರಿಡ್(ಆ.28): ವಿಶ್ವ ಎಟಿಪಿ ಸಿಂಗಲ್ಸ್ ಟೆನಿಸ್ ರ‍್ಯಾಂಕಿಂಗ್‌ನಲ್ಲಿ ಸ್ಪೇನ್‌ನ ರಾಫೆಲ್ ನಡಾಲ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಸೋಮವಾರ ನೂತನವಾಗಿ ಬಿಡುಗಡೆಯಾದ ರ‍್ಯಾಂಕಿಂಗ್‌ನಲ್ಲಿ ನಡಾಲ್ (10,040) ಅಂಕಗಳನ್ನು ಗಳಿಸಿ ನಂ.1 ಸ್ಥಾನದಲ್ಲಿ ಉಳಿದಿದ್ದಾರೆ. 

ಸ್ವಿಜರ್‌ಲೆಂಡ್‌ನ ರೋಜರ್ ಫೆಡರರ್ 2ನೇ, ಅರ್ಜೆಂಟೀನಾದ ಜಾನ್ ಮಾರ್ಟಿನ್ ಡೆಲ್ ಪೊಟ್ರೊ, ಅಲೆಕ್ಸಾಂಡರ್ ಜ್ವೆರೆವ್ ಮತ್ತು ದ. ಆಫ್ರಿಕಾದ ಕೆವಿನ್ ಆ್ಯಂಡರ್‌ಸನ್ ನಂತರದ ಸ್ಥಾನದಲ್ಲಿದ್ದಾರೆ.
ಸರ್ಬಿಯಾದ ನೊವಾಕ್ ಜೋಕೋವಿಚ್ 6ನೇ ಸ್ಥಾನಿಯಾಗಿದ್ದಾರೆ.

ಇನ್ನು ಡಬ್ಲ್ಯೂಟಿಎ ಮಹಿಳಾ ಸಿಂಗಲ್ಸ್ ರ‍್ಯಾಂಕಿಂಗ್‌ನಲ್ಲಿ ರೋಮೇನಿಯಾದ ಸಿಮೊನಾ ಹಾಲೆಪ್ (8061) ಅಂಕಗಳಿಂದ ಮೊದಲ ಸ್ಥಾನದಲ್ಲಿದ್ದರೆ, ಡೆನ್ಮಾರ್ಕ್‌ನ ಕರೋಲಿನಾ ವೋಜ್ನಿಯಾಕಿ 2ನೇ ಸ್ಥಾನ ಪಡೆದಿದ್ದಾರೆ.