ಯುಎಸ್ ಓಪನ್: ಮುಂದುವರೆದ ಸೆರೆನಾ, ನಡಾಲ್ ಜಯದ ನಾಗಾಲೋಟ
ಪುರುಷರ ಸಿಂಗಲ್ಸ್‌ನ ಕ್ವಾರ್ಟರ್‌ಫೈನಲ್'ನಲ್ಲಿ ನಡಾಲ್, ಆಸ್ಟ್ರಿಯಾದ ಡೊಮಿನಕ್ ಥೀಮ್ ವಿರುದ್ಧ 0-6, 6-4, 7-5, 6-7, 7-6 ಸೆಟ್‌ಗಳಲ್ಲಿ ಗೆಲುವು ಪಡೆದರು. ಇದು ಈ ವರ್ಷದಲ್ಲಿ ನಡಾಲ್ ಅವರ ದೀರ್ಘವಾಧಿ ಪಂದ್ಯವಾಗಿದೆ. 4 ಗಂಟೆ 49 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ನಡಾಲ್ ಅದ್ಭುತ ಆಟದ ಮೂಲಕ ಗಮನಸೆಳೆದರು.
ನ್ಯೂಯಾರ್ಕ್[ಸೆ.06]: ಯುಎಸ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಹಾಲಿ ಚಾಂಪಿಯನ್ ಸ್ಪೇನ್‌ನ ರಾಫೆಲ್ ನಡಾಲ್, ಮಾಜಿ ಅಗ್ರ ಶ್ರೇಯಾಂಕಿತೆ ಸೆರೆನಾ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಮಹಿಳಾ ಸಿಂಗಲ್ಸ್‌ನ ಹಾಲಿ ಚಾಂಪಿಯನ್ ಅಮೆರಿಕದ ಸ್ಲೋನ್ ಸ್ಟೀಫನ್ಸ್ ಕ್ವಾರ್ಟರ್‌ನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದರು.
4 ಗಂಟೆ 49 ನಿಮಿಷ: ಪುರುಷರ ಸಿಂಗಲ್ಸ್‌ನ ಕ್ವಾರ್ಟರ್‌ಫೈನಲ್'ನಲ್ಲಿ ನಡಾಲ್, ಆಸ್ಟ್ರಿಯಾದ ಡೊಮಿನಕ್ ಥೀಮ್ ವಿರುದ್ಧ 0-6, 6-4, 7-5, 6-7, 7-6 ಸೆಟ್‌ಗಳಲ್ಲಿ ಗೆಲುವು ಪಡೆದರು. ಇದು ಈ ವರ್ಷದಲ್ಲಿ ನಡಾಲ್ ಅವರ ದೀರ್ಘವಾಧಿ ಪಂದ್ಯವಾಗಿದೆ. 4 ಗಂಟೆ 49 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ನಡಾಲ್ ಅದ್ಭುತ ಆಟದ ಮೂಲಕ ಗಮನಸೆಳೆದರು. ಇದರೊಂದಿಗೆ ನಡಾಲ್ 7ನೇ ಬಾರಿ ಯುಎಸ್ ಓಪನ್‌ನಲ್ಲಿ ನಾಲ್ಕರ ಘಟ್ಟಕ್ಕೇರಿದರು. ಮೊದಲ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿದ ನಡಾಲ್, 2ನೇ ಸೆಟ್‌ನಲ್ಲಿ ಥೀಮ್’ಗೆ ತಿರುಗೇಟು ನೀಡಿದರು. 3ನೇ ಸೆಟ್‌ನಲ್ಲಿ ಎದುರಾದ ತೀವ್ರ ಪೈಪೋಟಿಯನ್ನು ಸಮರ್ಥವಾಗಿ ಎದುರಿಸಿದ ನಡಾಲ್ ಮುನ್ನಡೆ ಸಾಧಿಸಿದರು. 4ನೇ ಸೆಟ್‌ನಲ್ಲಿ ಟೈ ಬ್ರೇಕರ್ ಅವಕಾಶದಿಂದ ಅಂಕ ಹೆಚ್ಚಿಸಿಕೊಂಡ ಆಸ್ಟ್ರಿಯಾ ಟೆನಿಸಿಗ ಮುನ್ನಡೆ ಪಡೆದರು. ನಿರ್ಣಾಯಕ ಎನಿಸಿದ್ದ 5ನೇ ಸೆಟ್‌ನಲ್ಲಿ ಟೈ ಬ್ರೇಕರ್ ಅವಕಾಶದಿಂದ ಮುನ್ನಡೆದ ನಡಾಲ್ ಪಂದ್ಯ ಗೆದ್ದರು. ವಿಶ್ವದ 3ನೇ ರ‍್ಯಾಂಕಿಂಗ್ ಅರ್ಜೆಂಟೀನಾದ ಆಟಗಾರ ಜಾನ್ ಮಾರ್ಟಿನ್ ಡೆಲ್ ಪೊಟ್ರೊ, ಅಮೆರಿಕದ ಜಾನ್ ಇಸ್ನೇರ್ ವಿರುದ್ಧ 6-7, 6-3, 7-6, 6-2 ಸೆಟ್‌ಗಳಲ್ಲಿ ಗೆದ್ದು ಸೆಮೀಸ್ ಪ್ರವೇಶಿಸಿದರು.
ಸೆರೆನಾಗೆ ಜಯ, ಸ್ಟೀಫನ್ಸ್ ಔಟ್: 6 ಬಾರಿ ಯುಎಸ್ ಚಾಂಪಿಯನ್ ಅಮೆರಿಕದ ಸೆರೆನಾ ವಿಲಿಯಮ್ಸ್, 8ನೇ ಶ್ರೇಯಾಂಕಿತೆ ಚೆಕ್ ಗಣರಾಜ್ಯದ ಕ್ಯಾರೊಲಿನಾ ಪ್ಲಿಸ್ಕೋವಾ ಎದುರು ಗೆದ್ದು
ಸೆಮಿಫೈನಲ್‌ಗೇರಿದ್ದಾರೆ. ಕ್ವಾರ್ಟರ್‌ಫೈನಲ್‌ನಲ್ಲಿ ಸೆರೆನಾ 6-4, 6-3 ಸೆಟ್‌ಗಳಲ್ಲಿ ಪ್ಲಿಸ್ಕೋವಾ ಎದುರು ಗೆದ್ದರು. ಈ ಮೂಲಕ 2016ರ ಯುಎಸ್ ಓಪನ್ ಸೆಮೀಸ್‌ನಲ್ಲಿನ ಸೋಲಿನ ಸೇಡನ್ನು
ಸೆರೆನಾ ತೀರಿಸಿಕೊಂಡರು.
ಹಾಲಿ ಚಾಂಪಿಯನ್‌ಗೆ ಆಘಾತ: ಅಮೆರಿಕದ ಮತ್ತೊಬ್ಬ ಆಟಗಾರ್ತಿ ಹಾಲಿ ಚಾಂಪಿಯನ್ ಸ್ಲೋನ್ ಸ್ಟೀಫನ್ಸ್, ಲಾತ್ವಿಯಾದ ಅನಾಸ್ಟಸಿಜ ಸೆವಾಸ್ಟೊವಾ ವಿರುದ್ಧ 2-6, 3-6 ಸೆಟ್‌ಗಳಲ್ಲಿ ಪರಾಭವ
ಗೊಂಡರು. ಇದರೊಂದಿಗೆ ಸತತ 2ನೇ ಬಾರಿ ಯುಎಸ್ ಚಾಂಪಿಯನ್ ಆಗುವ ಅವರ ಕನಸು ನುಚ್ಚು ನೂರಾಯಿತು.