ಕಳೆದ ವಾರವಷ್ಟೇ ನಡಾಲ್, ಮಾಂಟೆ ಕಾರ್ಲೊ ಪ್ರಶಸ್ತಿಯನ್ನು 10ನೇ ಬಾರಿಗೆ ಗೆದ್ದ ದಾಖಲೆ ಬರೆದಿದ್ದರು. ಈ ಋತುವಿನಲ್ಲಿ ಇದು ಅವರ 2ನೇ ಹಾಗೂ ವೃತ್ತಿ ಬದುಕಿನಲ್ಲಿ 71ನೇ ಪ್ರಶಸ್ತಿಯಾಗಿದೆ.

ಬಾರ್ಸಿಲೋನಾ(ಏ.30): ಸ್ಪೇನ್‌'ನ ಸಾರ್ವಕಾಲಿಕ ಶ್ರೇಷ್ಠ ಟೆನಿಸಿಗ ರಾಫೆಲ್ ನಡಾಲ್ ಬಾರ್ಸಿಲೋನಾ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್‌'ನಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ಈ ಟೂರ್ನಿ ಗೆಲ್ಲುವುದರೊಂದಿಗೆ ಬಾರ್ಸಿಲೋನಾ ಓಪನ್'ನಲ್ಲಿ 10ನೇ ಬಾರಿಗೆ ಪ್ರಶಸ್ತಿ ಎತ್ತಿಹಿಡಿದ ದಾಖಲೆ ನಿರ್ಮಿಸಿದರು. ಫೈನಲ್ ಪಂದ್ಯದಲ್ಲಿ ಆಸ್ಟ್ರಿಯಾದ ಡೊಮಿನಿಕ್ ಥಿಯೆಮ್ ವಿರುದ್ಧ 6-4, 6-1ರ ಸುಲಭ ಗೆಲುವು ದಾಖಲಿಸಿದರು.

ಕಳೆದ ವಾರವಷ್ಟೇ ನಡಾಲ್, ಮಾಂಟೆ ಕಾರ್ಲೊ ಪ್ರಶಸ್ತಿಯನ್ನು 10ನೇ ಬಾರಿಗೆ ಗೆದ್ದ ದಾಖಲೆ ಬರೆದಿದ್ದರು. ಈ ಋತುವಿನಲ್ಲಿ ಇದು ಅವರ 2ನೇ ಹಾಗೂ ವೃತ್ತಿ ಬದುಕಿನಲ್ಲಿ 71ನೇ ಪ್ರಶಸ್ತಿಯಾಗಿದೆ.