Australian Open : ಫೈನಲ್‌ಗೆ ರಾಫೆಲ್‌ ನಡಾಲ್‌, ಡ್ಯಾನಿಲ್‌ ಮೆಡ್ವೆಡೆವ್‌

ಸೆಮೀಸ್‌ನಲ್ಲಿ ಬೆರಟ್ಟಿನಿ ವಿರುದ್ಧ ನಡಾಲ್‌ಗೆ ಗೆಲುವು
6ನೇ ಬಾರಿಗೆ ಫೈನಲ್‌ಗೆ ಸ್ಪೇನ್ ನ ದಿಗ್ಗಜ ಆಟಗಾರ ನಡಾಲ್‌
ಸಿಟ್ಸಿಪಾಸ್‌ ವಿರುದ್ಧ ಮೆಡ್ವೆಡೆವ್‌ಗೆ ಜಯ
 

Rafael Nadal and Daniil Medvedev Reach Australian Open 2022 Mens Singles Final san

ಮೆಲ್ಬರ್ನ್‌ (ಜ. 29): ದಾಖಲೆಯ 21ನೇ ಗ್ರ್ಯಾನ್‌ ಸ್ಲಾಂ (Grand Slam) ಗೆಲ್ಲಲು ರಾಫೆಲ್‌ ನಡಾಲ್‌ಗೆ (Rafael Nadal ) ಇನ್ನೊಂದು ಗೆಲುವಿನ ಅಗತ್ಯವಿದೆ. ಆಸ್ಪ್ರೇಲಿಯನ್‌ ಓಪನ್‌ ಪುರುಷರ ಸಿಂಗಲ್ಸ್‌ ಫೈನಲ್‌ಗೆ(Australian Open Mens Singles Final) ನಡಾಲ್‌ ಲಗ್ಗೆಯಿಟ್ಟಿದ್ದು, ಪ್ರಶಸ್ತಿಗಾಗಿ ಹಾಲಿ ಯುಎಸ್‌ ಓಪನ್‌ ಚಾಂಪಿಯನ್‌ (US Open Champion), ವಿಶ್ವ ನಂ.2 ಡ್ಯಾನಿಲ್‌ ಮೆಡ್ವೆಡೆವ್‌ (Daniil Medvedev) ವಿರುದ್ಧ ಗೆಲ್ಲಬೇಕಿದೆ.

ಶುಕ್ರವಾರ ನಡೆದ ಸೆಮಿಫೈನಲ್‌ನಲ್ಲಿ ಸ್ಪೇನ್‌ನ ದಿಗ್ಗಜ, ಇಟಲಿಯ ಮ್ಯಾಟಿಯೊ ಬೆರಟ್ಟಿನಿ (Matteo Berrettini of Italy) ವಿರುದ್ಧ 6-3, 6-2, 3-6, 6-3 ಸೆಟ್‌ಗಳಲ್ಲಿ ಜಯಗಳಿಸಿದರು. ಈ ಮೂಲಕ 6ನೇ ಬಾರಿಗೆ ಆಸ್ಪ್ರೇಲಿಯನ್‌ ಓಪನ್‌ ಫೈನಲ್‌ಗೇರಿದರು. ಇದು ನಡಾಲ್‌ಗೆ ಒಟ್ಟಾರೆ 28ನೇ ಗ್ರ್ಯಾನ್‌ ಸ್ಲಾಂ ಫೈನಲ್‌. ರೋಜರ್‌ ಫೆಡರರ್‌ (Roger federer) ಹಾಗೂ ನೋವಾಕ್‌ ಜೋಕೋವಿಚ್‌ (Novak djokovic) ಜೊತೆ ಅತಿಹೆಚ್ಚು ಗ್ರ್ಯಾನ್‌ ಸ್ಲಾಂ ಗೆದ್ದ ಆಟಗಾರ ಎನ್ನುವ ದಾಖಲೆಯನ್ನು ಹಂಚಿಕೊಂಡಿರುವ ನಡಾಲ್‌, ಈ ಇಬ್ಬರನ್ನು ಹಿಂದಿಕ್ಕಲು ಉತ್ಸುಕಗೊಂಡಿದ್ದಾರೆ.

ಮತ್ತೊಂದು ಸೆಮಿಫೈನಲ್‌ನಲ್ಲಿ 4ನೇ ಶ್ರೇಯಾಂಕಿತ ಗ್ರೀಸ್‌ ಆಟಗಾರ ಸ್ಟೆಫಾನೋಸ್‌ ಸಿಟ್ಸಿಪಾಸ್‌ (stefanos tsitsipas) ವಿರುದ್ಧ ರಷ್ಯಾದ ಮೆಡ್ವೆಡೆವ್‌ 7-6, 4-6, 6-4, 6-1 ಸೆಟ್‌ಗಳಲ್ಲಿ ಜಯಗಳಿಸಿದರು. ಮೆಡ್ವೆಡೆವ್‌ ಸತತ 2ನೇ ಗ್ರ್ಯಾನ್‌ ಸ್ಲಾಂ ಗೆಲ್ಲಲು ಕಾತರಿಸುತ್ತಿದ್ದಾರೆ. ಭಾರೀ ರೋಚಕತೆಯಿಂದ ಕೂಡಿದ್ದ ಪಂದ್ಯದ 2ನೇ ಸೆಟ್‌ನಲ್ಲಿ ತಾಳ್ಮೆ ಕಳೆದುಕೊಂಡ ಮೆಡ್ವೆಡೆವ್‌ ಸೆಟ್‌ ಬಿಟ್ಟುಕೊಟ್ಟರು. ಆ ಬಳಿಕ 5 ನಿಮಿಷ ವಿರಾಮ ಪಡೆದ ಮೆಡ್ವೆಡವ್‌ 3ನೇ ಸೆಟ್‌ ಅನ್ನು ತಮ್ಮದಾಗಿಸಿಕೊಂಡರು. 4ನೇ ಸೆಟ್‌ನಲ್ಲಿ ಪ್ರಾಬಲ್ಯ ಮೆರೆದ ರಷ್ಯಾ ಆಟಗಾರ, ಸತತ 5 ಗೇಮ್‌ ಗೆದ್ದು ಫೈನಲ್‌ಗೆ ಕಾಲಿಟ್ಟರು.

ನಡಾಲ್‌ ದಾಖಲೆಗೂ ಅಡ್ಡಿಯಾಗ್ತಾರಾ ಡ್ಯಾನಿಲ್‌?: ಕಳೆದ ವರ್ಷ ಯುಎಸ್‌ ಓಪನ್‌ ಫೈನಲ್‌ನಲ್ಲಿ ಜೋಕೋವಿಚ್‌ಗೆ ಸೋಲುಣಿಸಿ, ದಾಖಲೆಯ 21ನೇ ಗ್ರ್ಯಾನ್‌ ಸ್ಲಾಂ ಗೆಲ್ಲುವ ಅವರ ಕನಸಿಗೆ ಅಡ್ಡಿಯಾಗಿದ್ದ ಮೆಡ್ವೆಡೆವ್‌, ನಡಾಲ್‌ಗೂ ನಿರಾಸೆ ಉಂಟು ಮಾಡಲು ಕಾಯುತ್ತಿದ್ದಾರೆ. ಈ ಬಗ್ಗೆ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ಸವಾಲಿಗೆ ತಾವು ಸಿದ್ಧರಿರುವುದಾಗಿ ಹೇಳಿದರು.

Brendan Taylor Ban : ಜಿಂಬಾಬ್ವೆ ತಂಡದ ಮಾಜಿ ನಾಯಕ ಬ್ರೆಂಡನ್ ಟೇಲರ್ ಗೆ ನಿಷೇಧ ಶಿಕ್ಷೆ ವಿಧಿಸಿದ ಐಸಿಸಿ!
ಸಿಟ್ಸಿಪಾಸ್‌ ತಂದೆಯಿಂದ ಕೋಚಿಂಗ್‌: ಅಂಪೈರ್‌ ವಿರುದ್ಧ ಡ್ಯಾನಿಲ್‌ ಸಿಟ್ಟು!: ಸೆಮೀಸ್‌ನ 2ನೇ ಸೆಟ್‌ ವೇಳೆ ಸಿಟ್ಸಿಪಾಸ್‌ರ ತಂದೆ ಪ್ರೇಕ್ಷಕರ ಗ್ಯಾಲರಿಯಿಂದ ತಮ್ಮ ಪುತ್ರನಿಗೆ ಪ್ರತಿ ಅಂಕದ ಬಳಿಕವೂ ಕೋಚಿಂಗ್‌ ಮಾಡುತ್ತಿದ್ದಾರೆ ಎಂದು ಸಿಟ್ಸಿಪಾಸ್‌ ಅಂಪೈರ್‌ಗೆ ದೂರಿತ್ತರು. ಆದರೆ ಅಂಪೈರ್‌ ಕ್ರಮ ಕೈಗೊಳ್ಳದೆ ಇದ್ದಾಗ ಸಿಟ್ಟಾದ ಮೆಡ್ವೆಡೆವ್‌, ಅಂಪೈರ್‌ ಮೇಲೆ ಕೂಗಾಡಿದರು. ಕೆಲ ಸಮಯದ ಬಳಿಕ ಸಿಟ್ಸಿಪಾಸ್‌ಗೆ ಅಂಪೈರ್‌ ಎಚ್ಚರಿಕೆ ನೀಡಿದರು. ಪಂದ್ಯ ಮುಗಿದ ಮೇಲೆ ಮೆಡ್ವೆಡೆವ್‌, ಅಂಪೈರ್‌ರನ್ನು ಟೀಕಿಸಿ ಹೊರನಡೆದರು.

Big Bash League: ಸಿಡ್ನಿ ಸಿಕ್ಸರ್ಸ್‌ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ ಪರ್ತ್‌ ಸ್ಕ್ರಾಚರ್ಸ್‌
ಇಂದು ಮಹಿಳಾ ಸಿಂಗಲ್ಸ್‌ ಫೈನಲ್‌, ತವರಲ್ಲಿ ಚೊಚ್ಚಲ ಪ್ರಶಸ್ತಿ ಗೆಲ್ಲಲು ಬಾರ್ಟಿ ಪಣ: ವಿಶ್ವ ನಂ.1 ಆ್ಯಶ್ಲೆ ಬಾರ್ಟಿ ತವರಿನಲ್ಲಿ ಚೊಚ್ಚಲ ಗ್ರ್ಯಾನ್‌ ಸ್ಲಾಂ ಗೆಲ್ಲುವ ಗುರಿ ಹೊಂದಿದ್ದು, ಶನಿವಾರ ನಡೆಯಲಿರುವ ಮಹಿಳಾ ಸಿಂಗಲ್ಸ್‌ ಫೈನಲ್‌ನಲ್ಲಿ ಅಮೆರಿಕದ ಡೇನಿಯಲ್‌ ಕಾಲಿನ್ಸ್‌ ವಿರುದ್ಧ ಸೆಣಸಲಿದ್ದಾರೆ. ಫ್ರೆಂಚ್‌ ಓಪನ್‌, ವಿಂಬಲ್ಡನ್‌ ಟೂರ್ನಿಗಳನ್ನು ತಲಾ ಒಮ್ಮೆ ಗೆದ್ದಿರುವ ಬಾರ್ಟಿ, 3ನೇ ಗ್ರ್ಯಾನ್‌ ಸ್ಲಾಂ ಗೆಲುವಿನ ಮೇಲೆ ಕಣ್ಣಿಟ್ಟಿದ್ದಾರೆ. ಇನ್ನು ಕಾಲಿನ್ಸ್‌ ಇದೇ ಮೊದಲ ಬಾರಿಗೆ ಗ್ರ್ಯಾನ್‌ ಸ್ಲಾಂ ಫೈನಲ್‌ಗೇರಿದ್ದು, ಚೊಚ್ಚಲ ಪ್ರಶಸ್ತಿ ಗೆಲ್ಲುವ ತವಕದಲ್ಲಿದ್ದಾರೆ.
ಪಂದ್ಯ ಆರಂಭ: ಮಧ್ಯಾಹ್ನ 2ಕ್ಕೆ

Latest Videos
Follow Us:
Download App:
  • android
  • ios