ಇತ್ತೀಚೆಗೆ ಭಾರತ ವಿರುದ್ಧ ಮುಕ್ತಾಯಗೊಂಡ 3 ಟೆಸ್ಟ್'ಗಳ ‘ಫ್ರೀಡಂ ಕಪ್’ ಸರಣಿಯನ್ನು 2-1 ಅಂತರದಿಂದ ತನ್ನದಾಗಿಸಿಕೊಂಡ ದ. ಆಫ್ರಿಕಾ ಟ್ರೋಫಿಯೊಂದಿಗೆ ಫೋಟೋಗೆ ಪೋಸ್ ನೀಡಿತ್ತು.

ಜೊಹಾನ್ಸ್'ಬರ್ಗ್(ಜ.30): ವರ್ಣಭೇದ ನೀತಿ ವಿರೋಧಿಸಿ ಸಮಾನತೆಗಾಗಿ ನೆಲ್ಸನ್ ಮಂಡೇಲಾ ಸೇರಿದಂತೆ ಹಲವರು ಹೋರಾಟ ನಡೆಸಿದ್ದು, ಇದೀಗ ಇತಿಹಾಸ. ಇಷ್ಟು ವರ್ಷಗಳಾದರೂ ದ.ಆಫ್ರಿಕಾದಲ್ಲಿ ಸಮಾನತೆ ಇರುವುದರ ಬಗ್ಗೆಯೇ ಸಣ್ಣ ಅನುಮಾನವೊಂದನ್ನು ಆಫ್ರಿಕಾ ಕ್ರಿಕೆಟ್ ತಂಡದ ವರ್ತನೆ ಕಾರಣವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇತ್ತೀಚೆಗೆ ಭಾರತ ವಿರುದ್ಧ ಮುಕ್ತಾಯಗೊಂಡ 3 ಟೆಸ್ಟ್'ಗಳ ‘ಫ್ರೀಡಂ ಕಪ್’ ಸರಣಿಯನ್ನು 2-1 ಅಂತರದಿಂದ ತನ್ನದಾಗಿಸಿಕೊಂಡ ದ. ಆಫ್ರಿಕಾ ಟ್ರೋಫಿಯೊಂದಿಗೆ ಫೋಟೋಗೆ ಪೋಸ್ ನೀಡಿತ್ತು. ಈ ವೇಳೆ ತಂಡದಲ್ಲಿರುವ ಕಪ್ಪು ವರ್ಣದ ಆಟಗಾರರು ಒಂದೆಡೆ, ಬಿಳಿಯ ಆಟಗಾರರು ಮತ್ತೊಂದು ಸಾಲಿನಲ್ಲಿ ನಿಂತಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಫ್ರಿಕಾದಲ್ಲಿ ವರ್ಣಭೇದ ನೀತಿ ಇನ್ನೂ ಜೀವಂತವಾಗಿದೆ ಎನ್ನಲಾಗುತ್ತಿದೆ.