Asianet Suvarna News Asianet Suvarna News

ಚೆಸ್‌: ವಿಶ್ವನಾಥನ್ ಆನಂದ್‌ರನ್ನು ಹಿಂದಿಕ್ಕಿದ ಪ್ರಜ್ಞಾನಂದ ಈಗ ಭಾರತದ ನಂ.1

18ರ ಪ್ರಜ್ಞಾನಂದ ಟೂರ್ನಿಯ 4ನೇ ಸುತ್ತಿನಲ್ಲಿ ಲಿರೆನ್‌ ವಿರುದ್ಧ ಜಯಗಳಿಸಿದರು. ಈ ಮೂಲಕ ದಿಗ್ಗಜ ಚೆಸ್‌ ಪಟು ವಿಶ್ವನಾಥನ್‌ ಆನಂದ್‌ರನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದರು. ಸದ್ಯ ಪ್ರಜ್ಞಾನಂದ 2748.3, ವಿಶ್ವನಾಥನ್‌ 2748 ಅಂಕ ಹೊಂದಿದ್ದಾರೆ.

R Praggnanandhaa Becomes India No 1 Mens Chess Player kvn
Author
First Published Jan 18, 2024, 11:13 AM IST

ಆಮ್‌ಸ್ಟೆರ್ಡಾಮ್‌(ನೆದರ್‌ಲೆಂಡ್ಸ್): ಭಾರತದ ಯುವ ಚೆಸ್‌ ತಾರೆ ಆರ್‌.ಪ್ರಜ್ಞಾನಂದ ತಮ್ಮ ಅಭೂತಪೂರ್ವ ಪ್ರದರ್ಶನ ಮುಂದುವರಿಸಿದ್ದು, ಮಂಗಳವಾರ ರಾತ್ರಿ ಹಾಲಿ ವಿಶ್ವ ಚಾಂಪಿಯನ್‌, ಚೀನಾದ ಡಿಂಗ್‌ ಲಿರೆನ್‌ರನ್ನು ಟಾಟಾ ಸ್ಟೀಲ್‌ ಚೆಸ್‌ ಮಾಸ್ಟರ್ಸ್‌ ಟೂರ್ನಿಯಲ್ಲಿ ಮಣಿಸುವ ಮೂಲಕ ಫಿಡೆ ಲೈವ್‌ ರ್‍ಯಾಂಕಿಂಗ್‌ನಲ್ಲಿ ಭಾರತದ ನಂ.1 ಆಗಿ ಹೊರಹೊಮ್ಮಿದ್ದಾರೆ.

18ರ ಪ್ರಜ್ಞಾನಂದ ಟೂರ್ನಿಯ 4ನೇ ಸುತ್ತಿನಲ್ಲಿ ಲಿರೆನ್‌ ವಿರುದ್ಧ ಜಯಗಳಿಸಿದರು. ಈ ಮೂಲಕ ದಿಗ್ಗಜ ಚೆಸ್‌ ಪಟು ವಿಶ್ವನಾಥನ್‌ ಆನಂದ್‌ರನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದರು. ಸದ್ಯ ಪ್ರಜ್ಞಾನಂದ 2748.3, ವಿಶ್ವನಾಥನ್‌ 2748 ಅಂಕ ಹೊಂದಿದ್ದಾರೆ. ಅಲ್ಲದೆ ಕ್ಲಾಸಿಕಲ್‌ ವಿಭಾಗದಲ್ಲಿ ಹಾಲಿ ವಿಶ್ವ ಚಾಂಪಿಯನ್‌ನ್ನು ಮಣಿಸಿದ 2ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಮೊದಲು ವಿಶ್ವನಾಥನ್‌ ಕೂಡಾ ಈ ಸಾಧನೆ ಮಾಡಿದ್ದರು. ಸದ್ಯ ಟೂರ್ನಿಯಲ್ಲಿ ಪ್ರಜ್ಞಾನಂದ 2.5 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದ್ದಾರೆ. ಒಟ್ಟು 13 ಸುತ್ತಿನ ಪಂದ್ಯಗಳು ನಡೆಯಲಿವೆ.

ಮಹಿಳಾ ಹಾಕಿ: ಸೆಮೀಸಲ್ಲಿ ಇಂದು ಭಾರತ vs ಜರ್ಮನಿ

ಬೆಂಗ್ಳೂರು ಗ್ರ್ಯಾಂಡ್‌ಮಾಸ್ಟರ್ಸ್‌ ಚೆಸ್ ಟೂರ್ನಿ ಇಂದು ಆರಂಭ

ಬೆಂಗಳೂರು: ಚೊಚ್ಚಲ ಆವೃತ್ತಿಯ ಬೆಂಗಳೂರು ಅಂತಾರಾಷ್ಟ್ರೀಯ ಗ್ರ್ಯಾಂಡ್‌ಮಾಸ್ಟರ್ಸ್ ಚೆಸ್ ಟೂರ್ನಿಗೆ ಕ್ಷಣಗಣನೆ ಆರಂಭಗೊಂಡಿದ್ದು, ಗುರುವಾರ ಟೂರ್ನಿಗೆ ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಚಾಲನೆ ಸಿಗಲಿದೆ.

ಬೆಂಗಳೂರು ಜಿಲ್ಲಾ ಚೆಸ್‌ ಸಂಸ್ಥೆ(ಬಿಯುಡಿಸಿಎ)ಯು ಆಯೋಜಿಸುತ್ತಿರುವ ಟೂರ್ನಿಯು ಜ.26ರ ವರೆಗೆ ನಡೆಯಲಿದೆ. ಭಾರತ ಸೇರಿ 20 ದೇಶಗಳ 2000+ ಆಟಗಾರರು ಪಾಲ್ಗೊಳ್ಳಲಿದ್ದಾರೆ. 40 ಗ್ರ್ಯಾಂಡ್‌ಮಾಸ್ಟರ್‌ಗಳೂ ಸ್ಪರ್ಧಿಸಲಿದ್ದಾರೆ. ಮೂರು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದೆ. ಟೂರ್ನಿಯು 50 ಲಕ್ಷ ರು. ಬಹುಮಾನ ಮೊತ್ತ ಹೊಂದಿದೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.

ವಿಶ್ವನಾಥನ್‌ ಭಾಗಿ

ಟೂರ್ನಿಯ ಉದ್ಘಾಟನಾ ಸಮಾರಂಭ ಗುರುವಾರ ಬೆಳಗ್ಗೆ ನೆರವೇರಲಿದೆ. ದಿಗ್ಗಜ ಚೆಸ್‌ ಪಟು ವಿಶ್ವನಾಥನ್ ಆನಂದ್‌ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಕ್ರೀಡಾ ಸಚಿವ ಬಿ.ನಾಗೇಂದ್ರ, ಕರ್ನಾಟಕ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ಡಾ.ಕೆ.ಗೋವಿಂದರಾಜು ಸೇರಿದಂತೆ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.

Ayodhya Ram Mandir: ಪಾಕಿಸ್ತಾನದಲ್ಲಿ ಕೇಸರಿ ಧ್ವಜ ಹಿಡಿದು, ಮಾಜಿ ಕ್ರಿಕೆಟಿಗನ ಜೈ ಶ್ರೀರಾಮ್ ಘೋಷಣೆ!

ಪ್ರೊ ಕಬಡ್ಡಿ: ಜೈಪುರ, ಗುಜರಾತ್‌ಗೆ ಗೆಲುವು

ಜೈಪುರ: 10ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಬುಧವಾರ ಜೈಪುರ ಹಾಗೂ ಗುಜರಾತ್‌ ಜೈಂಟ್ಸ್ ತಂಡಗಳು ಜಯಭೇರಿ ಬಾರಿಸಿವೆ. ಗುಜರಾತ್‌ ತಂಡ ದಬಾಂಗ್ ಡೆಲ್ಲಿ ವಿರುದ್ಧ 31-26 ಅಂಕಗಳಿಂದ ಜಯಗಳಿಸಿತು. ತಂಡ 13ರಲ್ಲಿ 8ನೇ ಪಂದ್ಯ ಗೆದ್ದರೆ, ಡೆಲ್ಲಿಗಿದು 4ನೇ ಸೋಲು. ಆಶು ಮಲಿಕ್‌ 13 ಅಂಕ ಗಳಿಸಿದರೂ ತಂಡಕ್ಕೆ ಗೆಲುವು ಲಭಿಸಲಿಲ್ಲ. ಸೋಲಿನ ಹೊರತಾಗಿಯೂ ಡೆಲ್ಲಿ 3ನೇ ಸ್ಥಾನದಲ್ಲಿದ್ದು, ಗುಜರಾತ್‌ 4ನೇ ಸ್ಥಾನದಲ್ಲಿದೆ.

ಮತ್ತೊಂದು ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್‌ ವಿರುದ್ಧ ಜೈಪುರ 37-27 ಅಂಕಗಳಿಂದ ಗೆಲುವು ಸಾಧಿಸಿತು. ಜೈಪುರ 14 ಪಂದ್ಯಗಳಲ್ಲಿ 10ನೇ ಜಯಗಳಿಸಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಹರ್ಯಾಣ 13 ಪಂದ್ಯಗಳಲ್ಲಿ 5ನೇ ಸೋಲು ಕಂಡಿತು.

Follow Us:
Download App:
  • android
  • ios