Chess  

(Search results - 25)
 • <h1 id="headlineitem">Online Chess Olympiad</h1>

  OTHER SPORTS31, Aug 2020, 2:38 PM

  ಚೆಸ್‌ ಒಲಿಂಪಿಯಾಡ್‌: ಭಾರತ-ರಷ್ಯಾ ಜಂಟಿ ಚಾಂಪಿಯನ್

  ಭಾನುವಾರ ನಡೆದ ಫೈನಲ್‌ನಲ್ಲಿ ಭಾರತದ ನಿಹಾಲ್‌ ಸರಿನ್‌ ಮತ್ತು ದಿವ್ಯಾ ದೇಶ್‌ಮುಖ್‌ ಅವರಿದ್ದ ತಂಡದ ವಿರುದ್ಧ ರಷ್ಯಾ ಜೋಡಿ ಗೆಲುವು ಸಾಧಿಸಿತ್ತು. ಆದರೆ ಭಾರತ ತಂಡ ಫಲಿತಾಂಶವನ್ನು ಪ್ರಶ್ನಿಸಿತ್ತು. ನಂತರ ಕೂಲಂಕಷವಾಗಿ ಪರಿಶೀಲಿಸಿ ಎರಡೂ ತಂಡಗಳನ್ನು ವಿಜೇತ ಎಂದು ಆಯೋಜಕರು ಘೋಷಿಸಿದರು. 
   

 • undefined

  OTHER SPORTS30, May 2020, 6:33 PM

  ಭಾರತಕ್ಕೆ ಮರಳಿದ ಚೆಸ್ ಮಾಸ್ಟರ್ ವಿಶ್ವನಾಥನ್ ಆನಂದ್‌ ಬೆಂಗಳೂರಿನಲ್ಲಿ ಕ್ವಾರಂಟೈನ್!

  ಕೊರೋನಾ ವೈರಸ್ ಕಾರಣ ವಿದೇಶದಲ್ಲಿ ಸಿಲುಕಿದ್ದ ಮಾಜಿ ವಿಶ್ವಚಾಂಪಿಯನ್ ವಿಶ್ವನಾಥನ್ ಆನಂದ್ 3 ತಿಂಗಳ ಬಳಿಕ ಭಾರತಕ್ಕೆ ಆಗಮಿಸಿದ್ದಾರೆ. ತವರಿಗೆ ಆಗಮಿಸಿದ ವಿಶ್ವನಾಥನ್‌ ಬೆಂಗಳೂರಿನಲ್ಲಿ ಕ್ವಾರಂಟೈನ್ ಆಗಿದ್ದಾರೆ.

 • undefined

  OTHER SPORTS28, Apr 2020, 12:00 PM

  ರಾಜ್ಯದಲ್ಲಿ ಕೊರೋನಾ ದೇಣಿಗೆಗಾಗಿ ಆನ್‌ಲೈನ್‌ ಚೆಸ್‌ ಟೂರ್ನಿ

  ಯುನೈಟೆಡ್‌ ಕರ್ನಾಟಕ ಚೆಸ್‌ ಸಂಸ್ಥೆ, ಎಂಪಿಎಲ್‌ ಹಾಗೂ ಕ್ರೀಡಾ ಇಲಾಖೆ ಸಹಕಾರದೊಂದಿಗೆ ಮೇ 2 ಹಾಗೂ 3ರಂದು ಆನ್‌ಲೈನ್‌ ಚೆಸ್‌ ಟೂರ್ನಿಯನ್ನು ಆಯೋಜಿಸಲಾಗಿದೆ. ಇದರಿಂದ ಸಂದಾಯವಾಗುವ ಹಣವನ್ನು ರಾಜ್ಯದ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಗುವುದು ಎಂದು ತಿಳಿಸಲಾಗಿದೆ.

 • ಚೆಸ್ ದಿಗ್ಗಜ ವಿಶ್ವನಾಥ್ ಆನಂದ್, ಕುಸ್ತಿ ಪಟು ಭಜರಂಗ್ ಪೂನಿಯಾ ಕೂಡ ಮೋದಿ ಭಾಗಿ

  OTHER SPORTS13, Apr 2020, 11:13 AM

  PM CARES ನಿಧಿಗೆ 4.5 ಲಕ್ಷ ರುಪಾಯಿ ದೇಣಿಗೆ ನೀಡಿದ ವಿಶ್ವನಾಥನ್ ಆನಂದ್‌

  ಪ್ರಧಾನಮಂತ್ರಿ ಪರಿಹಾರ ನಿಧಿಗೆ 4.5 ಲಕ್ಷ ದೇಣಿಗೆ ಕೊಟ್ಟಿದ್ದಾರೆ. ದೇಣಿಗೆ ನೀಡುವುದಾಗಿ ಆನಂದ್‌ ಟ್ವೀಟರ್‌ನಲ್ಲಿ ಘೋಷಿಸಿದ್ದಾರೆ. ವಿದಿತ್‌ ಗುಜರಾತಿ, ಹರಿಕೃಷ್ಣ, ಅದಿಬನ್‌, ಕೊನೆರು ಹಂಪಿ, ಹರಿಕಾ ದ್ರೋಣವಲ್ಲಿ ಹಾಗೂ ಚೆಸ್‌ ಸಂಸ್ಥೆ ಕೂಡಾ ಪ್ರಧಾನಿ ಪರಿಹಾರ ನಿಧಿಗೆ ದೇಣಿಗೆ ನೀಡಿದೆ.

 • Chahal gets some batting practice. India will be hoping that Chahal's batting is not required at the World Cup 2019

  Cricket7, Apr 2020, 12:29 PM

  ಕ್ರಿಕೆಟ್ ಬಿಟ್ಟು ಆನ್‌ಲೈನ್ ಚೆಸ್ ಆಡಲಾರಂಭಿಸಿದ ಯುಜುವೇಂದ್ರ ಚಹಲ್..!

  ಚಹಲ್‌ ಕ್ರಿಕೆಟ್‌ಗೆ ಬರುವ ಮುನ್ನ ಭಾರತದ ಚೆಸ್‌ ಆಟಗಾರನಾಗಿ ಮಿಂಚಿದ್ದರು. 12ನೇ ವಯಸ್ಸಿನಲ್ಲೇ ಚಹಲ್‌, ರಾಷ್ಟ್ರೀಯ ಚಾಂಪಿಯನ್‌ ಆಗಿದ್ದರು. ವಿಶ್ವ ಯೂತ್‌ ಚೆಸ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಕ್ರಿಕೆಟ್‌ನಲ್ಲಿ ಈ ಯಶಸ್ಸು ಸಿಗಲು, ಚೆಸ್‌ ಆಟದಲ್ಲಿ ದೊರೆತ ಕೌಶಲ್ಯ ಕಾರಣ ಎಂದು ಚಹಲ್‌ ಹೇಳಿದ್ದಾರೆ.

 • koneru hampy

  OTHER SPORTS30, Dec 2019, 9:37 AM

  ಕೊನೆರು ಹಂಪಿ ವಿಶ್ವ ಚಾಂಪಿಯನ್‌; ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳೆ

  ಇಲ್ಲಿ ನಡೆದ ಚಾಂಪಿಯನ್‌ಶಿಪ್‌ನ ಟೈ ಬ್ರೇಕರ್‌ ಪಂದ್ಯದಲ್ಲಿ ಚೀನಾದ ಲೀ ಟಿನ್‌ಜೀ ವಿರುದ್ಧ ರೋಚಕ ಗೆಲುವು ಸಾಧಿಸಿದರು. 32 ವರ್ಷದ ಭಾರತೀಯ ಆಟಗಾರ್ತಿ 12ನೇ ಹಾಗೂ ಅಂತಿಮ ಸುತ್ತಿನಲ್ಲಿ ಚೀನಾದ ಟ್ಯಾಂಗ್‌ ಝಾಂಗ್ಯಿ ವಿರುದ್ಧ ಗೆದ್ದು ಟೈ ಬ್ರೇಕರ್‌ ಸುತ್ತಿಗೆ ಪ್ರವೇಶಿಸಿದರು.

 • undefined

  Magazine22, Dec 2019, 1:28 PM

  ಅಪ್ಪನ ಸವಾಲು ಸ್ವೀಕರಿಸದೆಯೇ ವಿಶ್ವ ಚಾಂಪಿಯನ್‌ ಆದ ವಿಶ್ವನಾಥನ್ ಆನಂದ್!

  ಐದು ಬಾರಿ ವಿಶ್ವ ಚೆಸ್ ಚಾಂಪಿಯನ್ ಆದ ವಿಶ್ವನಾಥನ್ ಆನಂದ್ ಜೀವನ ಚರಿತ್ರೆ  'ಮೈಂಡ್‌ ಮಾಸ್ಟರ್‌: ವಿನ್ನಿಂಗ್‌ ಲೆಸನ್ಸ್‌ ಫ್ರಮ್‌ ಎ ಚಾಂಪಿಯನ್ಸ್‌ ಲೈಫ್‌; ಇತ್ತೀಚಿಗೆ ಬಿಡುಗಡೆಯಾಗಿದೆ. ವಿಶ್ವನಾಥನ್ ಆನಂದ್ ಚಾಂಪಿಯನ್ ಆಗಿ ಬೆಳೆದ ಹಿಂದಿನ ಕಥೆಯನ್ನು ಇಲ್ಲಿ ಹೇಳಲಾಗಿದೆ. ಬಯೋಪಿಕ್‌ನ ಆಯ್ದ ಭಾಗವೊಂದು ಇಲ್ಲಿದೆ. 
   

 • undefined
  Video Icon

  OTHER SPORTS22, Oct 2019, 6:17 PM

  ಮಾಜಿ ಚಾಂಪಿಯನ್’ಗೆ ಶಾಕ್ ಕೊಟ್ಟ ಭಾರತದ 13 ವರ್ಷದ ಸಾಧ್ವಾನಿ

  ರೌನಕ್ ಸಾಧ್ವಾನಿ 40 ವರ್ಷದ ರಷ್ಯಾದ ಅಲೆಕ್ಸಾಂಡರ್ ಮೊಟ್ಯಾಲವ್ ಅವರಿಗೆ ಆಘಾತಕಾರಿ ಸೋಲುಣಿಸಿದ್ದಾರೆ. ರೌನಕ್’ಗೆ ಈಗ 13 ವರ್ಷ 9 ತಿಂಗಳು ಹಾಗೂ 28 ದಿನಗಳಾಗಿವೆ.

  ನಾಗ್ಪುರ ಮೂಲದ ರೌನಕ್ ಇಂಟರ್ ನ್ಯಾಷನಲ್ ಮಾಸ್ಟರ್ ಆಗಿದ್ದು, 2019ರ ಏರೋಫ್ಲೋಟ್ ಓಪನ್’ನಲ್ಲಿ ಮೊದಲ ಗ್ರ್ಯಾಂಡ್ ಮಾಸ್ಟರ್ ಅರ್ಹತೆಗಿಟ್ಟಿಸಿಕೊಂಡಿದ್ದರು. ಇನ್ನು 2019ರ ಫೋರ್ಟಿಸಿಕೊ ಓಪನ್’ನಲ್ಲಿ ಎರಡನೇ ಎರಡನೇ ಗ್ರ್ಯಾಂಡ್’ಸ್ಲಾಂ ಪರೀಕ್ಷೆಯಲ್ಲೂ ಯಶಸ್ವಿಯಾಗಿದ್ದರು.  
   

 • chess

  SPORTS18, Sep 2019, 2:22 PM

  ಚೆಸ್‌ನಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿ ಗೆದ್ದ ಕನ್ನಡತಿ ಇಶಾ

  2017ರ ಶಾರ್ಜಾ ಮಾಸ್ಟ​ರ್ಸ್’ನಲ್ಲಿ ಮೊದಲ ನಾರ್ಮ್ ಸಾಧಿ​ಸಿದ್ದ ಇಶಾ, 2018ರ ವಿಶ್ವ ಕಿರಿ​ಯರ ಚಾಂಪಿ​ಯನ್‌ಶಿಪ್‌ನಲ್ಲಿ 2ನೇ ನಾರ್ಮ್ ಗಳಿ​ಸಿ​ದ್ದರು. ಇದೀ​ಗ ಹಂಗೇ​ರಿ​ಯಲ್ಲಿ ಮಹಿಳಾ ಅಂತಾ​ರಾ​ಷ್ಟ್ರೀಯ ಮಾಸ್ಟರ್‌ ಪಟ್ಟಕ್ಕೇರಲು ಅಗ​ತ್ಯ​ವಿ​ರುವ 3ನೇ ನಾರ್ಮ್ ಗಳಿಸಿ, ರಾಜ್ಯಕ್ಕೆ ಕೀರ್ತಿ ತಂದಿ​ದ್ದಾರೆ.

 • undefined

  SPORTS18, Mar 2019, 2:16 PM

  ಏಷ್ಯನ್‌ ಗೇಮ್ಸ್‌ಗೆ ಚೆಸ್‌ ವಾಪಸ್‌; ವಿಶ್ವನಾಥನ್ ಆನಂದ್ ಸಂತಸ

  2006ರ ದೋಹಾ ಹಾಗೂ 2010ರ ಗುವಾಂಗ್ಝು ಏಷ್ಯಾಡ್‌ನಲ್ಲಿ ಚೆಸ್‌ ಇತ್ತು. 2006ರಲ್ಲಿ ಭಾರತ 2 ಚಿನ್ನ ಜಯಿಸಿದರೆ, 2010ರಲ್ಲಿ 2 ಕಂಚಿನ ಪದಕ ಗಳಿಸಿತ್ತು. 2014 ಹಾಗೂ 2018ರ ಏಷ್ಯನ್‌ ಗೇಮ್ಸ್‌ಗಳಲ್ಲಿ ಚೆಸ್‌ ಸ್ಪರ್ಧೆ ನಡೆದಿರಲಿಲ್ಲ. 

 • D Gukesh

  Sports News21, Jan 2019, 12:01 PM

  2 ವರ್ಷ ಶಾಲೆಗೇ ಹೋಗದವ ಗ್ರ್ಯಾಂಡ್‌ಮಾಸ್ಟರ್‌!

  ‘ಆನಂದ್‌ ಸರ್‌ರನ್ನು 6-7 ಬಾರಿ ಭೇಟಿಯಾಗಿದ್ದೇನೆ. ಪ್ರತಿ ಬಾರಿ ಸಿಕ್ಕಾಗಲೂ ನನ್ನನ್ನು ಹುರಿದುಂಬಿಸುತ್ತಾರೆ. ಒಂದು ದಿನ ಅವರೊಂದಿಗೆ ಚೆಸ್‌ ಆಡುವ ಆಸೆಯಿದೆ’ ಎಂದು ಗುಕೇಶ್‌ ಹೇಳುತ್ತಾನೆ.

 • Kishan Gangolli

  SPORTS13, Oct 2018, 9:04 AM

  ಪ್ಯಾರಾ ಏಷ್ಯಾಡ್‌: ಚೆಸ್‌ನಲ್ಲಿ ಚಿನ್ನ ಗೆದ್ದ ರಾಜ್ಯದ ಕಿಶನ್‌!

  ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಚೆಸ್, ಜಾವೆಲಿನ್ ಥ್ರೋ, ಬ್ಯಾಡ್ಮಿಂಟನ್ ಸೇರಿದಂತೆ ಪ್ರಮುಖ ವಿಭಾಗದಲ್ಲಿ ಭಾರತ ಪದಕ ಗೆದ್ದುಕೊಂಡಿದೆ.  ನಿನ್ನೆ ಭಾರತಕ್ಕೆ 4 ಚಿನ್ನ ಸೇರಿ ಒಟ್ಟು 9 ಪದಕ ಒಲಿದು ಬಂದಿದೆ. ಪ್ಯಾರಾ ಏಷ್ಯನ್ ಕ್ರೀಡಾಕೂಟದ ಹೈಲೈಟ್ಸ್ ಇಲ್ಲಿದೆ.

 • R Praggnanandhaa

  SPORTS25, Jun 2018, 11:33 AM

  ಪ್ರಜ್ಞಾನಂದ ವಿಶ್ವದ 2ನೇ ಕಿರಿಯ ಗ್ರ್ಯಾಂಡ್ ಮಾಸ್ಟರ್

   12 ವರ್ಷದ ಚೆಸ್ ಆಟಗಾರ ಪ್ರಜ್ಞಾನಂದ ಭಾರತದ ಅತಿ ಕಿರಿಯ ಹಾಗೂ ವಿಶ್ವದ 2ನೇ ಅತಿಕಿರಿಯ ಗ್ರ್ಯಾಂಡ್‌ಮಾಸ್ಟರ್ ಆಗಿದ್ದಾರೆ.

 • Yashaswi

  4, Jun 2018, 5:54 PM

  ಎಲ್ಲವೂ ಸರಿಯಾಗಿಯೇ ಇರುವವರಿಗೆ ಈ 'ಯಶಸ್ವಿ' ಸ್ಫೂರ್ತಿ!

  ಎಲ್ಲವೂ ಸರಿ ಇದ್ದು, ಏನೂ ಇಲ್ಲವೆಂದು ಕೈ ಕಟ್ಟಿ ಕುಳಿತುಕೊಳ್ಳುವವರಿಗೆ ಈ ಯಶಸ್ವಿ ಸ್ಫೂರ್ತಿ. ವಾಕ್, ಶ್ರವಣ ದೋಷ ಇರುವ ಈ ಬಾಲಕಿ ಇದೀಗ ಇಂಗ್ಲೆಂಡ್‌ನಲ್ಲಿ ನಡೆಯುವ ಅಂತಾರಾಷ್ಟ್ರೀಯ ಚೆನ್ ಟೂರ್ನಮೆಂಟ್‌ನಲ್ಲಿ ಭಾಗವಹಿಸುತ್ತಿದ್ದಾಳೆ. ಅಷ್ಟೇ ಅಲ್ಲ ಪೇಂಟಿಂಗ್, ನೃತ್ಯದಲ್ಲಿಯೂ ತನ್ನ ಪ್ರತಿಭೆಯನ್ನು ಜಗಜ್ಜಾಹೀರುಗೊಳಿಸಿದ್ದಾಳೆ.