ಪ್ರಜ್ಞಾನಂದ ಹಾಗೂ ಕಾರ್ಲ್‌ಸನ್‌ ನಡುವಿನ ರೋಚಕ 2ನೇ ಸುತ್ತು ಡ್ರಾನಲ್ಲಿ ಅಂತ್ಯವಾಗಿದೆ.ಹೀಗಾಗಿ ಫಲಿತಾಂಶ ನಿರ್ಧಾರಕ್ಕಾಗಿ ಇಂದು ಟೈ ಬ್ರೇಕರ್‌ ಪಂದ್ಯ ನಡೆಯಲಿದೆ. ಇನ್ನು ತುಂಬಾ ಇಂಟ್ರೆಸ್ಟಿಂಗ್ ಸಂಗತಿಯೆಂದರೆ ಆರ್ ಪ್ರಜ್ಞಾನಂದ ಹಾಗೂ ಕಾರ್ಲ್‌ಸನ್ ಇದೇ ಮೊದಲ ಬಾರಿಗೆ ಚೆಸ್ ವಿಶ್ವಕಪ್ ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿದ್ದಾರೆ.

ಬಾಕು(ಅಜರ್‌ಬೈಜಾನ್‌): ಭಾರತದ ಯುವ ಚೆಸ್ ಪಟು ಆರ್ ಪ್ರಜ್ಞಾನಂದ ಚೆಸ್‌ ವಿಶ್ವಕಪ್ ಫೈನಲ್‌ನಲ್ಲಿ ವಿಶ್ವದ ನಂ.1 ಚೆಸ್ ಪಟು ಮ್ಯಾಗ್ನಸ್‌ ಕಾಲ್‌ರ್‍ಸನ್‌ ಎದುರು ಮೊದಲೆರಡು ಸುತ್ತಿನಲ್ಲಿ ಡ್ರಾ ಮಾಡಿಕೊಳ್ಳುವ ಮೂಲಕ ಪ್ರಬಲ ಪೈಪೋಟಿ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಇಂದು ನಡೆಯಲಿರುವ ಟೈ ಬ್ರೇಕರ್‌ನಲ್ಲಿ ಯಾರು ಚಾಂಪಿಯನ್ ಆಗಲಿದ್ದಾರೆ ಎನ್ನುವ ಕುತೂಹಲ ಜೋರಾಗಿದೆ. 

ಚೆಸ್‌ ವಿಶ್ವಕಪ್ ಫೈನಲ್‌ನಲ್ಲಿ ಮಂಗಳವಾರ ನಡೆದ ಮೊದಲ ಸುತ್ತಿನಲ್ಲಿ ಬಿಳಿ ಚೆಸ್ ಕಾಯಿನ್‌ಗಳೊಂದಿಗೆ ಸ್ಪರ್ಧೆಗಿಳಿದಿದ್ದ ಆರ್ ಪ್ರಜ್ಞಾನಂದ, ಪ್ರಬಲ ಪೈಪೋಟಿ ನೀಡಿದರಾದರೂ ಗೆಲುವು ದಕ್ಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸುಮಾರು 35 ನಡೆಗಳ ಬಳಿಕ ಪಂದ್ಯ ಡ್ರಾನಲ್ಲಿ ಅಂತ್ಯವಾಯಿತು. ಇನ್ನು ಬುಧವಾರ ನಡೆದ ಎರಡನೇ ಸುತ್ತಿನ ಪಂದ್ಯವೂ ಕೂಡಾ ಡ್ರಾನಲ್ಲಿ ಅಂತ್ಯವಾಯಿತು. ಸುಮಾರು 30 ನಡೆಗಳ ಬಳಿಕ ಡ್ರಾ ಎಂದು ತೀರ್ಮಾನಿಸಲಾಯಿತು.

Scroll to load tweet…

3 ಬಾರಿ ಟೈ ಬ್ರೇಕರ್‌ ಗೆದ್ದಿರೋ ಪ್ರಜ್ಞಾನಂದ!

ಪ್ರಜ್ಞಾನಂದ ಈ ಬಾರಿ ಕೂಟದಲ್ಲಿ 3 ಬಾರಿ ಟೈ ಬ್ರೇಕರ್‌ನಲ್ಲಿ ಗೆದ್ದಿದ್ದಾರೆ. ಮೊದಲು ವಿಶ್ವ ನಂ.2 ಹಿಕರು ನಕಮುರಾ ವಿರುದ್ಧ ಟೈ ಬ್ರೇಕರ್‌ ಗೆದ್ದರೆ, ಕ್ವಾರ್ಟರ್‌ನಲ್ಲಿ ಭಾರತದ ಅರ್ಜುನ್‌ ಎರಿಗೈಸಿ ವಿರುದ್ಧ ಟೈ ಬ್ರೇಕರ್‌ನ ಸಡನ್‌ ಡೆತ್‌ನಲ್ಲಿ ಜಯಗಳಿಸಿದರು. ಸೆಮೀಸ್‌ನಲ್ಲಿ ವಿಶ್ವ ನಂ.3 ಫ್ಯಾಬಿಯಾನೋ ವಿರುದ್ಧ ಕೂಡ ಟೈ ಬ್ರೇಕರ್‌ನಲ್ಲೇ ಜಯಿ​ಸಿ​ದ್ದ​ರು.

ಪ್ರಜ್ಞಾನಂದ-ಮ್ಯಾಗ್ನಸ್‌: 2ನೇ ಸುತ್ತೂ ಡ್ರಾ! ವಿಶ್ವ ನಂ.1 ಚೆಸ್ ಪಟುವಿಗೆ ಟಕ್ಕರ್ ಕೊಟ್ಟ ಭಾರತೀಯ

ಇಂದು ಟೈ ಬ್ರೇಕರ್‌!

ಪ್ರಜ್ಞಾನಂದ ಹಾಗೂ ಕಾರ್ಲ್‌ಸನ್‌ ನಡುವಿನ ರೋಚಕ 2ನೇ ಸುತ್ತು ಡ್ರಾನಲ್ಲಿ ಅಂತ್ಯವಾಗಿದೆ.ಹೀಗಾಗಿ ಫಲಿತಾಂಶ ನಿರ್ಧಾರಕ್ಕಾಗಿ ಇಂದು ಟೈ ಬ್ರೇಕರ್‌ ಪಂದ್ಯ ನಡೆಯಲಿದೆ. ಇನ್ನು ತುಂಬಾ ಇಂಟ್ರೆಸ್ಟಿಂಗ್ ಸಂಗತಿಯೆಂದರೆ ಆರ್ ಪ್ರಜ್ಞಾನಂದ ಹಾಗೂ ಕಾರ್ಲ್‌ಸನ್ ಇದೇ ಮೊದಲ ಬಾರಿಗೆ ಚೆಸ್ ವಿಶ್ವಕಪ್ ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿದ್ದಾರೆ. 18 ವರ್ಷದ ಆರ್‌ ಪ್ರಜ್ಞಾನಂದ, ಚೆಸ್ ವಿಶ್ವಕಪ್ ಫೈನಲ್‌ಗೇರಿದ ಅತಿಕಿರಿಯ ಆಟಗಾರ ಎನಿಸಿದ್ದಾರೆ. ಇನ್ನೊಂದೆಡೆ 32 ವರ್ಷದ ಕಾರ್ಲ್‌ಸನ್‌ ಕೂಡಾ ಇದೇ ಮೊದಲ ಬಾರಿಗೆ ಚೆಸ್ ವಿಶ್ವಕಪ್ ಗೆಲ್ಲಲು ತುದಿಗಾಲಿನಲ್ಲಿ ನಿಂತಿದ್ದಾರೆ.

ಚಾಂಪಿಯನ್‌ ಆಟಗಾರನಿಗೆ ಸಿಗುವ ಬಹುಮಾನ ಮೊತ್ತವೆಷ್ಟು..?:

ಚೆಸ್‌ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸುವ ಆಟಗಾರನಿಗೆ ಸುಮಾರು ₹ 90, 93,551 ಲಕ್ಷ ರುಪಾಯಿಗಳು ಜೇಬಿಗಿಳಿಸಿಕೊಳ್ಳಲಿದ್ದಾರೆ. ಇನ್ನು ರನ್ನರ್ ಅಪ್ ಸ್ಥಾನ ಪಡೆಯುವ ಚೆಸ್ ಆಟಗಾರ 66,13,444 ರುಪಾಯಿಗಳ ನಗದು ಬಹುಮಾನವನ್ನು ಪಡೆಯಲಿದ್ದಾರೆ.

Chess World Cup: ಫೈನಲ್‌ ಮೊದಲ ಸುತ್ತಿನಲ್ಲಿ ಡ್ರಾ ಸಾಧಿಸಿದ ಪ್ರಜ್ಞಾನಂದ..!

ವಿಶ್ವನಾಥನ್‌ ಸಾಲಿಗೆ ಸೇರಿದ ಪ್ರಜ್ಞಾನಂದ!

2000 ಹಾಗೂ 2002ರಲ್ಲಿ ವಿಶ್ವನಾಥನ್‌ ಆನಂದ್‌ ಚೆಸ್‌ ವಿಶ್ವಕಪ್‌ನಲ್ಲಿ ಚಾಂಪಿಯನ್‌ ಆಗಿದ್ದರು. ಆ ಬಳಿಕ ಭಾರತದಿಂದ ಯಾರೂ ಫೈನಲ್‌ಗೇರಿರಲಿಲ್ಲ. ಈಗ ಪ್ರಜ್ಞಾನಂದ ಫೈನಲ್‌ಗೆ ತಲುಪಿದ್ದು, ಈ ಸಾಧನೆ ಮಾಡಿದ ಕೇವಲ 2ನೇ ಭಾರತೀಯ ಎನಿಸಿಕೊಂಡಿದ್ದಾರೆ.