ನವದೆಹಲಿ(ಮೇ.20): ಟೀಂ ಇಂಡಿಯಾದಲ್ಲಿ ಪೈಪೋಟಿ ಹೆಚ್ಚಾಗಿದೆ. ಹೀಗಾಗಿ ಒಂದು ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದರೆ ಮತ್ತೊಂದು ಅವಕಾಶ ಸಿಗುವುದು ಕಷ್ಟ. ಅದರಲ್ಲೂ ನಿಗದಿತ ಓವರ್ ಹಾಗೂ ಟೆಸ್ಟ್ ಕ್ರಿಕೆಟ್‌ಗೆ ಭಾರತ ಕೂಡ  ಬಹುತೇಕ ಬೇರೆ ಬೇರೆ ತಂಡವನ್ನೇ ರಚಿಸಿದೆ. ಹೀಗಾಗಿ ಸ್ಟಾರ್ ಸ್ಪಿನ್ನರ್ ಆರ್ ಅಶ್ವಿನ್‌ ಇದೀಗ ಏಕದಿನ ಹಾಗೂ ಟಿ20 ತಂಡದಲ್ಲಿ ಸ್ಥಾನ ಪಡದಿಲ್ಲ.

ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್‍‌ಗೆ ಯುವರಾಜ್ ಶೀಘ್ರದಲ್ಲೇ ನಿವೃತ್ತಿ?

ಹಿರಿಯ ಆಫ್‌ ಸ್ಪಿನ್ನರ್‌ ಆರ್‌.ಅಶ್ವಿನ್‌, ಜುಲೈನಲ್ಲಿ ವಿಂಡೀಸ್‌ ಪ್ರವಾಸಕ್ಕೂ ಮುನ್ನ ಇಂಗ್ಲೆಂಡ್‌ ಕೌಂಟಿಯಲ್ಲಿ ಆಡಲಿದ್ದು ನಾಟಿಂಗ್‌ಹ್ಯಾಮ್‌ಶೈರ್‌ ತಂಡವನ್ನು ಪ್ರತಿನಿಧಿಸಲಿದ್ದಾರೆ. 6 ಮೊದಲ ಡಿವಿಜನ್‌ ಪಂದ್ಯಗಳನ್ನು ಅವರು ಆಡಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. 

ಇದನ್ನೂ ಓದಿ: ವಿಶ್ವಕಪ್ : ಮೇ 22ರಂದು ಇಂಗ್ಲೆಂಡ್‌ಗೆ ಭಾರತ ತಂಡ ಪ್ರಯಾಣ

2017ರ ಋುತುವಿನಲ್ಲಿ ಅಶ್ವಿನ್‌, ವೋಸೆಸ್ಟರ್‌ಶೈರ್‌ ತಂಡವನ್ನು ಪ್ರತಿನಿಧಿಸಿದ್ದರು. ‘ಅಶ್ವಿನ್‌ ಕೌಂಟಿಯಲ್ಲಿ ಆಡಲು ಬಿಸಿಸಿಐ ಆಡಳಿತ ಸಮಿತಿ ಅನುಮತಿ ನೀಡಿದೆ. ನಾಟಿಂಗ್‌ಹ್ಯಾಮ್‌ಶೈರ್‌ ತಂಡದ ಸಿಇಒ ಸಹಿ ಬಾಕಿ ಇದೆ’ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.