ಚೆನ್ನೈ(ಜೂ.22): 12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಮಂಕಡಿಂಗ್ ರನೌಟ್ ಭಾರಿ ವಿವಾದಕ್ಕೆ ಕಾರಣವಾಗಿತ್ತು. ನಾನ್ ಸ್ಟ್ರೈಕ್‌ನಲ್ಲಿ ರಾಜಸ್ಥಾನ ರಾಯಲ್ಸ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್‌ನ್ನು ಆರ್ ಅಶ್ವಿನ್ ಮಂಕಡಿಂಗ್  ಮೂಲಕ ರನೌಟ್ ಮಾಡಿದ್ದರು. ಈ ರನೌಟ್ ಟೂರ್ನಿಯುದ್ದಕ್ಕೂ ಚರ್ಚೆಯಾಗಿತ್ತು. ಇಷ್ಟೇ ಅಲ್ಲ ಟೀಕೆಗೆ ಗುರಿಯಾಗಿತ್ತು. ಇದೀಗ ಆರ್ ಅಶ್ವಿನ್ ಮಂಕಡಿಂಗ್ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.

ಇದನ್ನೂ ಓದಿ: ಆರ್ ಅಶ್ವಿನ್ ಮಂಕಡಿಂಗ್ ರನೌಟ್- ಟ್ವಿಟರ್‌ನಲ್ಲಿ ಶುರುವಾಯ್ತು ವಾರ್!

ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಆರ್ ಅಶ್ವಿನ್ ಮಂಕಡಿಂಗ್ ರನೌಟ್ ವಿಶ್ವಮಟ್ಟದಲ್ಲೇ ಚರ್ಚೆಯಾಗಿತ್ತು. ದಿಗ್ಗಜ ಕ್ರಿಕೆಟಿಗರು ಪರ ವಿರೋಧ ವ್ಯಕ್ತಪಡಿಸಿದ್ದರು. ಮಂಕಡಿಂಗ್ ರನೌಟ್ ಬಳಿಕ ಆರ್ ಅಶ್ವಿನ್ ನಡೆಸಿದ ಸುದ್ದಿಗೋಷ್ಠಿಯಲ್ಲಿ ರನೌಟ್ ಸಮರ್ಥಿಸಿಕೊಂಡಿದ್ದರು.  ರನೌಟ್ ಬಳಿಕ ಆರ್ ಅಶ್ವಿನ್ 15 ದಿನಗಳ ವರೆಗೆ ಸಾಮಾಜಿಕ ಜಾಲತಾಣದಿಂದ ದೂರವಿದ್ದರು ಎಂದಿದ್ದಾರೆ.

ಇದನ್ನೂ ಓದಿ: ಮಂಕಡ್ ರನೌಟ್ ಅಂದ್ರೇನು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್

ಮಂಕಡಿಂಗ್ ರನೌಟ್ ಮಾಡಿದ ಬಳಿಕ ಪತ್ನಿ ಫೋನ್ ಮೂಲಕ ಇಂದು  ಸೋಶಿಯಲ್ ಮೀಡಿಯಾ ಚೆಕ್ ಮಾಡಬೇಡಿ ಎಂದು ಸೂಚಿಸಿದ್ದಳು. ಆದರೆ ನಾನು 15 ದಿನಗಳ ಕಾಲ ಸೋಶಿಯಲ್ ಮೀಡಿಯಾ ನೋಡಲು ಹೋಗಿಲ್ಲ. ನನಗೆ ಹಲವು ಕ್ರಿಕೆಟಿಗರು ಫೋನ್ ಮೂಲಕ  ಮಾತನಾಡಿದ್ದಾರೆ. ನನ್ನ ನಿರ್ಧಾರವನ್ನು ಬೆಂಬಲಿಸಿದ್ದರು. ಮಾಜಿ ನಾಯಕ ಕಪಿಲ್ ದೇವ್ ಹಾಗೂ ಮುರಳಿ ಕಾರ್ತಿಕ್ ಮಂಕಡಿಂಗ್ ರನೌಟ್‌ಗೆ ಬೆಂಬಲ ಸೂಚಿಸಿದ್ದರು. ದಿಗ್ಗಜರು ನನ್ನನ್ನು ಸಮರ್ಥಿಕೊಂಡಾಗ ಉಳಿದವರು ಏನು ಹೇಳಿದರೂ ನಾನು ತೆಲೆಕೆಡಿಸಿಕೊಳ್ಳಲಿಲ್ಲ ಎಂದು ಅಶ್ವಿನ್ ಹೇಳಿದ್ದಾರೆ.