ಅಶ್ವಿನ್ ಪ್ರಸಕ್ತ ವರ್ಷದಲ್ಲಿ 8 ಟೆಸ್ಟ್ ಪಂದ್ಯಗಳನ್ನಾಡಿ 15.39ರ ಸರಾಸರಿಯಲ್ಲಿ 48 ವಿಕೆಟ್ ಪಡೆದದ್ದೂ ಅಲ್ಲದೇ ಬ್ಯಾಟಿಂಗ್'ನಲ್ಲಿ ಉಪಯುಕ್ತ 336 ರನ್'ಗಳಿಸಿ ತಂಡಕ್ಕೆ ನೆರವಾಗಿದ್ದಾರೆ.
ದುಬೈ(ಡಿ.22): ಭಾರತ ಅನುಭವಿ ಆಫ್'ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಐಸಿಸಿ ವರ್ಷದ ಕ್ರಿಕೆಟಿಗ ಹಾಗೂ ಐಸಿಸಿ ಟೆಸ್ಟ್ ತಂಡದ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಮೂಲಕ ಸರ್. ಗ್ಯಾರಿ ಸೋಬರ್ಸ್ ಪ್ರಶಸ್ತಿ ತನ್ನದಾಗಿಸಿಕೊಂಡ ಮೂರನೇ ಭಾರತೀಯ ಎನ್ನುವ ಕೀರ್ತಿಯೂ ಅಶ್ವಿನ್ ಪಾಲಾಗಿದೆ. ಈ ಮೊದಲು ರಾಹುಲ್ ದ್ರಾವಿಡ್(2004) ಹಾಗೂ ಸಚಿನ್ ತೆಂಡೂಲ್ಕರ್(2010) ಸರ್. ಗ್ಯಾರಿ ಸೋಬರ್ಸ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.
ಅಶ್ವಿನ್ ಪ್ರಸಕ್ತ ವರ್ಷದಲ್ಲಿ 8 ಟೆಸ್ಟ್ ಪಂದ್ಯಗಳನ್ನಾಡಿ 15.39ರ ಸರಾಸರಿಯಲ್ಲಿ 48 ವಿಕೆಟ್ ಪಡೆದದ್ದೂ ಅಲ್ಲದೇ ಬ್ಯಾಟಿಂಗ್'ನಲ್ಲಿ ಉಪಯುಕ್ತ 336 ರನ್'ಗಳಿಸಿ ತಂಡಕ್ಕೆ ನೆರವಾಗಿದ್ದಾರೆ.
ವಿಶ್ವದ ನಂಬರ್ 1 ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ತಂಡದಲ್ಲಿ ಸ್ಥಾನಪಡೆಯುವಲ್ಲಿ ವಿಫಲರಾಗಿದ್ದಾರೆ. ಆದರೆ ಐಸಿಸಿ ಏಕದಿನ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ.
2016ನೇ ಸಾಲಿನ ಐಸಿಸಿಯ ಪ್ರಮುಖ ಪ್ರಶಸ್ತಿಗಳು ಇಂತಿವೆ:
- ಐಸಿಸಿ ಸ್ಪಿರಿಟ್ ಆಫ್ ಕ್ರಿಕೆಟ್ ಪ್ರಶಸ್ತಿ: ಮಿಸ್ಬಾ ಉಲ್-ಹಕ್(ಪಾಕಿಸ್ತಾನ ತಂಡದ ನಾಯಕ)
- ವರ್ಷದ ಏಕದಿನ ಕ್ರಿಕೆಟಿಗ : ಕ್ವಿಂಟಾನ್ ಡಿ'ಕಾಕ್ (ದಕ್ಷಿಣ ಆಫ್ರಿಕಾ)
- ವರ್ಷದ ಉದಯೋನ್ಮುಖ ಕ್ರಿಕೆಟಿಗ : ಮುಸ್ತಾಫಿಜುರ್ ರೆಹಮಾನ್ (ಬಾಂಗ್ಲಾದೇಶ)
- ಟಿ20 ಮಾದರಿಯ ಶ್ರೇಷ್ಟ ಆಟಗಾರ: ಕಾರ್ಲೋಸ್ ಬ್ರಾಥ್'ವೇಟ್ (ವೆಸ್ಟ್'ಇಂಡೀಸ್)
- ಐಸಿಸಿ ಅಸೋಸಿಯೇಟ್ ಆಟಗಾರ : ಮೊಹಮ್ಮದ್ ಶಹಜಾದ್(ಆಫ್ಘಾನಿಸ್ತಾನ)
- ಐಸಿಸಿ ವರ್ಷದ ಅಂಪೈರ್ ; ಮಾರೀಸ್ ಎರಾಸ್'ಮಸ್
ಐಸಿಸಿ ಟೆಸ್ಟ್ ತಂಡ ಇಂತಿದೆ:
ಅಲಿಸ್ಟರ್ ಕುಕ್(ನಾಯಕ), ಡೇವಿಡ್ ವಾರ್ನರ್, ಕೇನ್ ವಿಲಿಯಮ್'ಸನ್, ಜೋ ರೂಟ್, ಆ್ಯಡಂ ವೋಗ್ಸ್, ಜಾನಿ ಬ್ರಿಸ್ಟೋ(ವಿಕೆಟ್ ಕೀಪರ್), ಬೆನ್ ಸ್ಟೋಕ್ಸ್, ರಂಗನಾ ಹೆರಾತ್, ರವಿಚಂದ್ರನ್ ಅಶ್ವಿನ್, ಮಿಚೆಲ್ ಸ್ಟಾರ್ಕ್, ಡೇಲ್ ಸ್ಟೇನ್, ಹಾಗೂ ಸ್ಟೀವ್ ಸ್ಮಿತ್.
ಐಸಿಸಿ ಏಕದಿನ ತಂಡ:
ವಿರಾಟ್ ಕೊಹ್ಲಿ(ನಾಯಕ), ಡೇವಿಡ್ ವಾರ್ನರ್, ಕ್ವಿಂಟಾನ್ ಡಿ'ಕಾಕ್, ರೋಹಿತ್ ಶರ್ಮಾ, ಎಬಿ ಡಿ'ವಿಲಿಯರ್ಸ್, ಜೋಸ್ ಬಟ್ಲರ್, ಮಿಚೆಲ್ ಮಾರ್ಸ್, ರವೀಂದ್ರ ಜಡೇಜಾ, ಮಿಚೆಲ್ ಸ್ಟಾರ್ಕ್, ಕಗೀಸೋ ರಬಾಡ, ಸುನೀಲ್ ನರೈನ್ ಹಾಗೂ ಇಮ್ರಾನ್ ತಾಹಿರ್.
