ವಿಶಾಖಪಟ್ಟಣಂ(ಅ.04): ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸ್ಪಿನ್ ಮೋಡಿದ ಆರ್ ಅಶ್ವಿನ್ ಪ್ರಮುಖ 5 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಸೌತ್ ಆಫ್ರಿಕಾ ಮೊದಲ ಇನ್ನಿಂಗ್ಸ್‌ನಲ್ಲಿ ಆಲೌಟ್ ಭೀತಿಯಲ್ಲಿದೆ. ಮೂರನೇ ದಿನದಾಟದಲ್ಲಿ ಸ್ಪಿನ್ ಮೋಡಿ ಮಾಡಿದ ಬಳಿಕ ಅಶ್ವಿನ್ ಮಾಧ್ಯಮದ ಜತೆ ಮಾತನಾಡಿದರು. 

ಇದನ್ನೂ ಓದಿ: ವೈಜಾಗ್ ಟೆಸ್ಟ್: ಮಿಂಚಿದ ಅಶ್ವಿನ್, ಆಲೌಟ್ ಹೊಸ್ತಿಲಲ್ಲಿ ಆಫ್ರಿಕಾ

ಹರಿಗಣಳ ವಿರುದ್ದ ತಾವು ನೀಡಿದ ಪ್ರದರ್ಶನ ಹಾಗೂ ಗೇಮ್ ಪ್ಲಾನ್ ಕುರಿತು ಅಶ್ವಿನ್ ವಿವರಿಸಿದರು. ಇದೇ ವೇಳೆ ಇತ್ತೀಚೆಗೆ ಆರ್ ಅಶ್ವಿನ್ ಕ್ರಿಕೆಟ್ ಪಂದ್ಯ ನೋಡುವುದನ್ನು ಬಿಟ್ಟಿದ್ದಾರೆ. ಇದಕ್ಕೆ ಕಾರಣವೇನು ಎಂದು ಪತ್ರಕರ್ತನೊಬ್ಬ ಪ್ರಶ್ನಿಸಿದ್ದ. ಈ ಪ್ರಶ್ನೆಗೆ ನಕ್ಕ ಅಶ್ವಿನ್, ನನಗೆ ಇಬ್ಬರು ಮಕ್ಕಳಿದ್ದಾರೆ. ಅವರು ರಾತ್ರಿ ನಿದ್ದೆ ಮಾಡಲ್ಲ. ಹೀಗಾಗಿ ಪಂದ್ಯ ನೋಡೋಕೆ ಆಗುತ್ತಿಲ್ಲ ಎಂದು ಪ್ರತಿಕ್ರಿಯೆ ನೀಡಿದರು.

 

ಇದನ್ನೂ ಓದಿ: ಕೊಹ್ಲಿ ಜೊತೆಗೆ ಮುನಿಸು; ಟೀಕೆಗೆ ಆರ್ ಅಶ್ವಿನ್ ತಿರುಗೇಟು!

ಅಶ್ವಿನ್ ಉತ್ತರ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿತು. ಬಳಿಕ ಆಶ್ವಿನ್, ಪಂದ್ಯ ನೋಡುವಾಗ ನಾನು ತಂಡಲ್ಲಿ ಇರಬೇಕಿತ್ತು ಎಂದೆನಿಸುತ್ತದೆ. ಇದು ಪ್ರತಿಯೊಬ್ಬ ಕ್ರೀಡಾಪಟುವಿಗೆ ಅನಿಸುವುದು ಸಹಜ. ಇತ್ತೀಚೆಗೆ ನಾನು ಪುಸ್ತಕ ಓದುತ್ತೇನೆ. ಕೆಲ ಪುರಾತತ್ವ ಸೇರಿದಂತೆ ಇತರ ಕೆಲಸ ಮಾಡುತ್ತೇನೆ ಎಂದು ಅಶ್ವಿನ್ ಹೇಳಿದ್ದಾರೆ.