ಮುಂಬೈ(ಜೂ.24): ಟೀಂ ಇಂಡಿಯಾಗೆ ಆಯ್ಕೆಯಾಗೋ ಆಟಗಾರರು ಯೋ-ಯೋ ಫಿಟ್ನೆಸ್ ಪರೀಕ್ಷೆ ಪಾಸ್ ಆಗಲೇಬೇಕು. ಈಗಾಗಲೇ ಯೋ-ಯೋ ಟೆಸ್ಟ್‌ನಲ್ಲಿ ಫೈಲ್ ಆದ ಅಂಬಾಟಿ ರಾಯುಡು ಹಾಗೂ ಸಂಜು ಸಾಮ್ಸನ್ ತಂಡದಿಂದಲೇ ಹೊರಬಿದ್ದಿದ್ದಾರೆ. ಇದೀಗ ಯೋ-ಯೋ ಟೆಸ್ಟ್ ಏಷ್ಟು ಸೂಕ್ತ ಅನ್ನೋ ಪ್ರಶ್ನೆ ಎದ್ದಿದೆ.

ಆಟಗಾರರಿಗೆ ಯೋ-ಯೋ ಟೆಸ್ಟ್ ಖಡ್ಡಾಯಗೊಳಿಸಿರೋದನ್ನ ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅನಿರುದ್ ಚೌಧರಿ ಪ್ರಶ್ನಿಸಿದ್ದಾರೆ. ಸುಪ್ರೀಂ ಕೋರ್ಟ್ ನೇಮಿಸಿದ ಬಿಸಿಸಿಐ ಮುಖ್ಯಸ್ಥ ವಿನೋದ್ ರೈಗೆ ಪತ್ರ ಬರೆದಿರುವ  ಚೌಧರಿ ಯಾವ ಆಧಾರದಲ್ಲಿ ಯೋ-ಯೋ ಟೆಸ್ಟ್ ಖಡ್ಡಾಯಗೊಳಿಸಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ಬಿಸಿಸಿಐ ಸಿಓಎ ವಿನೋದ್ ರೈ ಹಾಗೂ ಅಮಿತಾಬ್ ಚೌಧರಿ ಹಗ್ಗಜಗ್ಗಾಟ ಸದ್ಯಕ್ಕೆ ಮುಗಿಯೋ ಲಕ್ಷಣಗಳು ಕಾಣಿಸುತ್ತಿಲ್ಲ. ಟೀಂ ಇಂಡಿಯಾ ಆಟಗಾರರ ಆಯ್ಕೆ ಯಾವ ಮಾನದಂಡದಲ್ಲಿ ನಡೆಯುತ್ತಿದೆ. ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಮಣ್ ಯೋ-ಯೋ ಟೆಸ್ಟ್ ಪಾಸ್ ಮಾಡಿ ಆಡಿದ್ದಾರ? ಹೀಗೆ ಹತ್ತು ಹಲವು ಪ್ರಶ್ನೆಗಳನ್ನ ಅಮಿತಾಬ್ ಚೌಧರಿ ಕೇಳಿದ್ದಾರೆ.

ಬಿಸಿಸಿಐ ಕಾರ್ಯದರ್ಶಿ ಹಾಗೂ ಸಿಓಎ ಜಟಾಪಟಿಯಿಂದ ಯೋ-ಯೋ ಟೆಸ್ಟ್ ರದ್ದಾಗುತ್ತಾ? ಇಂತಹ ಪ್ರಶ್ನೆ ಇದೀಗ ಕ್ರಿಕಟ್ ವಲಯದಲ್ಲಿ ಹರಿದಾಡುತ್ತಿದೆ. ಆದರೆ ಯೋ-ಯೋ ಟೆಸ್ಟ್ ಖಡ್ಡಾಯ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಅನ್ನೋದು ಬಿಸಿಸಿಐ ಮಾತು. 

ಏನಿದು ಯೋ-ಯೋ ಟೆಸ್ಟ್: ಆಟಗಾರರ ದೈಹಿಕ ಕ್ಷಮತೆ ಅಳೆಯಲು ಯೋ-ಯೋ ಟೆಸ್ಟ್ ನಡೆಯಲಾಗುತ್ತೆ. ಕಳೆದ ವರ್ಷ ಬಿಸಿಸಿಐ ಎಲ್ಲಾ ಕ್ರಿಕೆಟಿಗರಿಗೆ ಯೋ-ಯೋ ಟೆಸ್ಟ್ ಕಡ್ಡಾಯಗೊಳಿಸಿದೆ. ಕೋಚ್ ಅನಿಲ್ ಕುಂಬ್ಳೆ ಅವಧಿಯಲ್ಲಿ ಯೋ -ಯೋ ಫಿಟ್ನೆಸ್ ಟೆಸ್ಟ್‌ನ್ನ ಟೀಮ್ಇಂಡಿಯಾದಲ್ಲಿ ಜಾರಿಗೊಳಿಸಲಾಯಿತು. ಇದು ಸಂಪೂರ್ಣವಾಗಿ ಆಟಗಾರರ ಫಿಟ್ನೆಸ್ ಕುರಿತ ಪರೀಕ್ಷೆಯಾಗಿರುತ್ತೆ.