ಸಿಂಧು ಈ ವರ್ಷ ರಿಯೋ ಒಲಿಂಪಿಕ್ಸ್​ನಲ್ಲಿ ಮಹಿಳಾ ಸಿಂಗಲ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.

ಚೀನಾ(ನ.20): ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು, ಚೀನಾ ಓಪನರ್ ಸೂಪರ್ ಸಿರೀಸ್ ಗೆದ್ದುಕೊಂಡಿದ್ದಾರೆ.

ಈ ಮೂಲಕ ಮೊದಲ ಬಾರಿಗೆ ಸೂಪರ್ ಸಿರೀಸ್​ ಗೆದ್ದ ಸಾಧನೆಯನ್ನ ಭಾರತದ ಆಟಗಾರ್ತಿ ಮಾಡಿದರು. 

ಫೈನಲ್​ನಲ್ಲಿ ಚೀನಾದ ಸುನ್​ ಯು ವಿರುದ್ಧ 21-11, 17-21, 21-11 ಗೇಮ್​ಗಳಿಂದ ಜಯ ಸಾಧಿಸಿದರು.

ಮೊದಲ ಗೇಮ್ ಗೆದ್ದ ನಂತರ ಸಿಂಧು, ಸೆಕೆಂಡ್ ಗೇಮ್​ನಲ್ಲಿ ಹೋರಾಟಕಾರಿ ಸೋಲು ಅನುಭವಿಸಿದರು. ಆದರೆ 3ನೇ ಗೇಮ್ ಅನ್ನ ಸುಲಭವಾಗಿಯೇ ಗೆದ್ದುಕೊಂಡರು.

ಸಿಂಧು ಈ ವರ್ಷ ರಿಯೋ ಒಲಿಂಪಿಕ್ಸ್​ನಲ್ಲಿ ಮಹಿಳಾ ಸಿಂಗಲ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.