ರಿಯೊ ಒಲಿಂಪಿಕ್ ತಾರೆ 2017ರಲ್ಲಿ ಒಟ್ಟು 6 ಬಾರಿ ಫೈನಲ್ ಪ್ರವೇಶಿಸಿದ್ದು, ಕೊರಿಯಾ ಓಪನ್, ಇಂಡಿಯಾ ಓಪನ್ ಹಾಗೂ ಸೈಯ್ಯದ್ ಮೋದಿ ಇಂಟರ್'ನ್ಯಾಷನಲ್ ಚಾಂಪಿಯನ್'ಶಿಪ್'ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಇನ್ನು ವಿಶ್ವ ಚಾಂಪಿಯನ್ಸ್'ಶಿಪ್ ಫೈನಲ್, ಹಾಂಗ್ ಕಾಂಗ್ ಓಪನ್ ಹಾಗೂ ದುಬೈ ವರ್ಷಾಂತ್ಯದ ಟೂರ್ನಿಯಲ್ಲಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.

ನವದೆಹಲಿ(ಡಿ.29): ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು ಮುಂದಿನ ವರ್ಷ ವಿಶ್ವ ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರುವ ಗುರಿ ಹೊಂದಿರುವುದಾಗಿ ಹೇಳಿದ್ದಾರೆ.

ಆದರೆ ಶ್ರೇಯಾಂಕಕ್ಕಾಗಿ ನಿದ್ದೆಗೆಡುವುದಿಲ್ಲ, ಬಿಡುವಿಲ್ಲದ ವೇಳಾಪಟ್ಟಿಯ ನಡುವೆ ಅಗತ್ಯ ವಿಶ್ರಾಂತಿ ಪಡೆಯುವುದಾಗಿ ಅವರು ಹೇಳಿದ್ದಾರೆ. ಕಳೆದ ಎರಡೂವರೆ ತಿಂಗಳಲ್ಲಿ ಸಿಂಧು 2ನೇ ಸ್ಥಾನಕ್ಕೇರುವ ಮೂಲಕ ತಮ್ಮ ವೃತ್ತಿಬದುಕಿನ ಶ್ರೇಷ್ಠ ಶ್ರೇಯಾಂಕ ಸಾಧಿಸಿದ್ದರು.

‘ಮುಂದಿನ ಋತುವಿನಲ್ಲಿ ಅಗ್ರಸ್ಥಾನಕ್ಕೇರುವ ಗುರಿ ಹೊಂದಿದ್ದೇನೆ. ಸದ್ಯ ನಾನು 3ನೇ ಸ್ಥಾನದಲ್ಲಿದ್ದೇನೆ. ಪಂದ್ಯಾವಳಿಗಳಲ್ಲಿ ಉತ್ತಮ ಪ್ರದರ್ಶನ ತೋರಿದರೆ ಸಹಜವಾಗಿಯೇ ಶ್ರೇಯಾಂಕದಲ್ಲಿ ಏರಿಕೆ ಕಾಣಲಿದ್ದೇನೆ. 2017 ನನ್ನ ಪಾಲಿಗೆ ಅತ್ಯುತ್ತಮವಾಗಿತ್ತು, ಇದೇ ಲಯ ಕಾಯ್ದುಕೊಳ್ಳುವ ವಿಶ್ವಾಸವಿದೆ’ ಎಂದು ಸಿಂಧು ಹೇಳಿದ್ದಾರೆ.