ಇದೇ ವೇಳೆ ಬ್ಯಾಡ್ಮಿಂಟನ್ ಕೋಚ್'ಗಳಾದ ವಿಮಲ್ ಕುಮಾರ್ ಹಾಗೂ ಪುಲ್ಲೇಲಾ ಗೋಪಿಚಂದ್ ಅವರನ್ನೂ ಕ್ರೀಡಾ ಇಲಾಖೆ ಸನ್ಮಾನಿಸಿದೆ.

ನವದೆಹಲಿ(ಆ.31): ಭಾರತದ ಬ್ಯಾಡ್ಮಿಂಟನ್ ತಾರೆಗಳಾದ ಸೈನಾ ನೆಹ್ವಾಲ್, ಪಿ.ವಿ.ಸಿಂಧು ಹಾಗೂ ಕೆ.ಶ್ರೀಕಾಂತ್ ಅವರನ್ನು ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯಲ್ ಸನ್ಮಾನಿಸಿದರು.

ಸಚಿವರ ಇಲ್ಲಿನ ನಿವಾಸದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮೂವರನ್ನು ಗೌರವಿಸಿದರು. ಇತ್ತೀಚೆಗಷ್ಟೇ ಮುಕ್ತಾಯಗೊಂಡ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌'ಶಿಪ್‌'ನಲ್ಲಿ ಸಿಂಧು ಬೆಳ್ಳಿ, ಸೈನಾ ಕಂಚು ಗೆದ್ದಿದ್ದರು.

ಇನ್ನು ಇಂಡೋನೇಷ್ಯಾ ಹಾಗೂ ಆಸ್ಟ್ರೇಲಿಯಾ ಓಪನ್ ಚಾಂಪಿಯನ್ ಶ್ರೀಕಾಂತ್ ಕ್ವಾರ್ಟರ್ ಫೈನಲ್‌'ನಲ್ಲಿ ವಿಶ್ವ ನಂ.1 ಆಟಗಾರ ಕೋರಿಯಾದ ಸಾನ್ ವ್ಯಾನ್ ಹೋ ವಿರುದ್ಧ ಸೋತಿದ್ದರು.

ಇದೇ ವೇಳೆ ಬ್ಯಾಡ್ಮಿಂಟನ್ ಕೋಚ್'ಗಳಾದ ವಿಮಲ್ ಕುಮಾರ್ ಹಾಗೂ ಪುಲ್ಲೇಲಾ ಗೋಪಿಚಂದ್ ಅವರನ್ನೂ ಕ್ರೀಡಾ ಇಲಾಖೆ ಸನ್ಮಾನಿಸಿದೆ. ಸರ್ಕಾರದ ಬೆಂಬಲಕ್ಕೆ ಸೈನಾ, ಸಿಂಧು ಹಾಗೂ ಶ್ರೀಕಾಂತ್ ಧನ್ಯವಾದ ತಿಳಿಸಿದ್ದಾರೆ.