22 ವರ್ಷದ ಈ ಸಾಧಕಿಗೆ 2015ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ನವದೆಹಲಿ(ಸೆ.25): ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಭಾರತದ ಖ್ಯಾತ ಬ್ಯಾಟ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಅವರಿಗೆ ದೇಶದ ಗೌರವಾನ್ವಿತ ಪದ್ಮಭೂಷಣ ಪ್ರಶಸ್ತಿಗೆ ಕೇಂದ್ರ ಕ್ರೀಡ ಇಲಾಖೆ ನಾಮನಿರ್ದೇಶನ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿಶ್ವದ ನಂ.2ನೇ ಆಟಗಾರ್ತಿ ಸಿಂಧು ಅವರು 2016ರ ರಿಯೋ ಒಲಿಂಪಿಕ್ಸ್'ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಈ ಬಾರಿ ಕ್ರಿಕೆಟರ್ ಎಂ.ಎಸ್.ಧೋನಿ ನಂತರ ಪದ್ಮಭೂಷಣ ಪ್ರಶಸ್ತಿ ನಾಮನಿರ್ದೇಶ ಆಯ್ಕೆಯಾದ 2ನೇ ಕ್ರೀಡಪಟು ಇವರಾಗಿದ್ದಾರೆ. ಸಿಂಧು ಇತ್ತೀಚಿಗಷ್ಟೆ ಕೊರಿಯನ್ ಓಪನ್ ಸೂಪರ್ ಸೀರಿಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. 22 ವರ್ಷದ ಈ ಸಾಧಕಿಗೆ 2015ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.