ಎರಡು ಬಾರಿಯ ಒಲಿಂಪಿಕ್ಸ್‌ ಪದಕ ವಿಜೇತೆ ಪಿ ವಿ ಸಿಂಧು, ಇದೀಗ ಒಂದು ವಾರದ ಕ್ಯಾಂಪ್‌ಗಾಗಿ ಬೆಂಗಳೂರಿನಲ್ಲಿರುವ ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಗೆ ಸೇರಿದ್ದಾರೆ. ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿನ ಕೋಚ್‌ಗಳು ಸಿಂಧು ಯಾವ ಕ್ಷೇತ್ರದಲ್ಲಿ ಸುಧಾರಣೆ ಆಗಬೇಕು ಎನ್ನುವುದನ್ನು ಗಮನಿಸುತ್ತಿದ್ದಾರೆ ಎಂದು ವಿಮಲ್ ಕುಮಾರ್ ಹೇಳಿದ್ದಾರೆ. 

ನವದೆಹಲಿ(ಸೆ.12): ಸತತ ವೈಫಲ್ಯಗಳನ್ನು ಕಾಣುತ್ತಿರುವ ದಿಗ್ಗಜ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ.ಸಿಂಧು ಮುಂಬರುವ ಏಷ್ಯನ್‌ ಗೇಮ್ಸ್‌ನಲ್ಲಿ ಪದಕ ಗೆಲ್ಲುವ ಭರವಸೆ ಇಲ್ಲ ಎಂದು ಭಾರತದ ಮಾಜಿ ಕೋಚ್‌ ವಿಮಲ್‌ ಕುಮಾರ್‌ ಅಭಿಪ್ರಾಯಿಸಿದ್ದಾರೆ. 

‘ಸಿಂಧು ಆತ್ಮವಿಶ್ವಾಸದ ಕೊರತೆ ಎದುರಿಸುತ್ತಿದ್ದಾರೆ. ಅವರು ಮತ್ತೆ ಗೆಲುವಿನ ಹಳಿಗೆ ಮರಳಲು ಹೆಚ್ಚಿನ ಪರಿಶ್ರಮದ ಅಗತ್ಯವಿದೆ. ಏಷ್ಯನ್‌ ಗೇಮ್ಸ್‌ನಲ್ಲಿ ಅವರಿಂದ ಪದಕ ನಿರೀಕ್ಷೆ ಇಟ್ಟುಕೊಳ್ಳುವುದು ಸೂಕ್ತವಲ್ಲ’ ಎಂದು ವಿಮಲ್‌ ಹೇಳಿದ್ದಾರೆ.

ಎರಡು ಬಾರಿಯ ಒಲಿಂಪಿಕ್ಸ್‌ ಪದಕ ವಿಜೇತೆ ಪಿ ವಿ ಸಿಂಧು, ಇದೀಗ ಒಂದು ವಾರದ ಕ್ಯಾಂಪ್‌ಗಾಗಿ ಬೆಂಗಳೂರಿನಲ್ಲಿರುವ ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಗೆ ಸೇರಿದ್ದಾರೆ. ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿನ ಕೋಚ್‌ಗಳು ಸಿಂಧು ಯಾವ ಕ್ಷೇತ್ರದಲ್ಲಿ ಸುಧಾರಣೆ ಆಗಬೇಕು ಎನ್ನುವುದನ್ನು ಗಮನಿಸುತ್ತಿದ್ದಾರೆ ಎಂದು ವಿಮಲ್ ಕುಮಾರ್ ಹೇಳಿದ್ದಾರೆ. 

ಈ ಪಾಕಿಸ್ತಾನ ವೇಗಿ ಪತ್ನಿ ಬ್ಯೂಟಿಫುಲ್ ಮಾಡೆಲ್‌..! ಪಾಕ್‌ ಕ್ರಿಕೆಟಿಗನ ಮನಗೆದ್ದ ಗೊಂಬೆಯಂತ ಟಿಕ್‌ಟಾಕ್‌ ಚೆಲುವೆ

0.01 ಸೆಕೆಂಡಲ್ಲಿ ವಿದ್ಯಾ ಕೈತಪ್ಪಿದ ಉಷಾ ದಾಖಲೆ ಮುರಿಯುವ ಅವಕಾಶ!

ಚಂಡೀಗಢ: ಏಷ್ಯಾಡ್‌ನಲ್ಲಿ ಸ್ಪರ್ಧಿಸಲಿರುವ ತಮಿಳುನಾಡಿನ ವಿದ್ಯಾ ರಾಮರಾಜ್‌, ಮಹಿಳೆಯರ 400 ಮೀ. ಹರ್ಡಲ್ಸ್‌ನಲ್ಲಿ ದಿಗ್ಗಜೆ ಪಿ.ಟಿ. ಉಷಾ ಅವರ ಹೆಸರಲ್ಲಿರುವ ರಾಷ್ಟ್ರೀಯ ದಾಖಲೆಯನ್ನು ಮುರಿಯುವ ಅವಕಾಶದಿಂದ ವಂಚಿತರಾಗಿದ್ದಾರೆ. ಇಲ್ಲಿ ಸೋಮವಾರ ನಡೆದ ಇಂಡಿಯನ್‌ ಗ್ರ್ಯಾನ್‌ ಪ್ರಿ ಅಥ್ಲೆಟಿಕ್ಸ್‌ ಕೂಟದಲ್ಲಿ ವಿದ್ಯಾ 55.43 ಸೆಕೆಂಡ್‌ಗಳಲ್ಲಿ ಸ್ಪರ್ಧೆ ಪೂರ್ತಿಗೊಳಿಸಿದರು. 1984ರ ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ನಲ್ಲಿ ಉಷಾ 55.42 ಸೆಕೆಂಡ್‌ಗಳಲ್ಲಿ ಓಟ ಮುಗಿಸಿ ರಾಷ್ಟ್ರೀಯ ದಾಖಲೆ ಬರೆದಿದ್ದರು. ಆ ದಾಖಲೆ ಇನ್ನೂ ಹಾಗೇ ಉಳಿದುಕೊಂಡಿದೆ.

ಗ್ರ್ಯಾನ್‌ ಪ್ರಿ ಅಥ್ಲೆಟಿಕ್ಸ್‌: ರಾಜ್ಯದ ಯಶಸ್‌ಗೆ ಚಿನ್ನ

ಚಂಡೀಗಢ: ಇಂಡಿಯನ್‌ ಗ್ರ್ಯಾನ್‌ ಪ್ರಿ-5 ಅಥ್ಲೆಟಿಕ್ಸ್‌ ಕೂಟದ ಪುರುಷರ 400 ಮೀ. ಹರ್ಡಲ್ಸ್ ಸ್ಪರ್ಧೆಯಲ್ಲಿ ಕರ್ನಾಟಕದ ಯಶಸ್‌ ಪಿ. ಮೊದಲ ಸ್ಥಾನ ಪಡೆದಿದ್ದಾರೆ. 49.69 ಸೆಕೆಂಡ್‌ಗಳಲ್ಲಿ ಅವರು ಓಟ ಪೂರ್ತಿಗೊಳಿಸಿದರು. ಮಹಿಳೆಯರ 400 ಮೀ. ಹರ್ಡಲ್ಸ್‌ನಲ್ಲಿ ಸಿಂಚಲ್‌ ಕಾವೇರಮ್ಮ, ಮಹಿಳೆಯರ ಹೈಜಂಪ್‌ನಲ್ಲಿ ಅಭಿನಯ ಶೆಟ್ಟಿ ಬೆಳ್ಳಿ ಪದಕ ಪಡೆದರು.

US Open 2023: 24ನೇ ಗ್ರ್ಯಾನ್‌ ಸ್ಲಾಂ ಗೆದ್ದ ಸರ್ಬಿಯಾದ ಟೆನಿಸ್ ದೊರೆ ನೋವಾಕ್ ಜೋಕೋವಿಚ್

ಏಷ್ಯಾಡ್‌ ಕ್ರಿಕೆಟ್‌: ಭಾರತ ತಂಡಕ್ಕೆ ಲಕ್ಷ್ಮಣ್‌ ಕೋಚ್‌

ನವದೆಹಲಿ: ಚೀನಾದ ಹ್ಯಾಂಗ್ಝೂನಲ್ಲಿ ಸೆ.23ರಿಂದ ಅ.8ರ ವರೆಗೆ ನಡೆಯಲಿರುವ ಏಷ್ಯನ್‌ ಗೇಮ್ಸ್‌ನ ಕ್ರಿಕೆಟ್‌ ಟೂರ್ನಿಗೆ ಭಾರತ ತಂಡಕ್ಕೆ ಮಾಜಿ ಕ್ರಿಕೆಟಿಗ ವಿವಿಎಸ್‌ ಲಕ್ಷ್ಮಣ್‌ ಮುಖ್ಯ ಕೋಚ್‌ ಆಗಿ ನೇಮಕಗೊಂಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅ.5ರಿಂದ ಏಕದಿನ ವಿಶ್ವಕಪ್‌ ಆರಂಭವಾಗಲಿರುವ ಕಾರಣ ತಂಡದ ಪ್ರಮುಖ ಕೋಚ್‌ ರಾಹುಲ್‌ ದ್ರಾವಿಡ್‌, ವಿಶ್ವಕಪ್‌ ಆಡಲಿರುವ ಭಾರತ ತಂಡದ ಜೊತೆ ಇರಲಿದ್ದಾರೆ. ಹೀಗಾಗಿ ಎನ್‌ಸಿಎ ಮುಖ್ಯಸ್ಥ ಲಕ್ಷ್ಮಣ್ ಅವರಿಗೆ ಈ ಜವಾಬ್ದಾರಿ ನೀಡಲಾಗಿದೆ ಎಂದು ವರದಿಯಾಗಿದೆ. ಬೌಲಿಂಗ್ ಕೋಚ್ ಆಗಿ ಸಾಯಿರಾಜ್ ಬಹುತುಲೆ ಮತ್ತು ಫೀಲ್ಡಿಂಗ್ ಕೋಚ್ ಆಗಿ ಮುನೀಶ್ ಬಾಲಿ ಕೂಡ ಭಾರತ ತಂಡದೊಂದಿಗೆ ಇರಲಿದ್ದಾರೆ ಎಂದು ತಿಳಿದುಬಂದಿದೆ.