ಇಂಡಿಯಾ ಓಪನ್: ಕ್ವಾರ್ಟರ್‌ಗೆ ಭಾರತದ ತಾರೆಯರು!
ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತೀಯ ಆಟಗಾರರು ಭರ್ಜರಿ ಮೇಲುಗೈ ಸಾಧಿಸಿದ್ದಾರೆ. ಪ್ರಮುಖ ಬ್ಯಾಡ್ಮಿಂಟನ್ ಪಟುಗಳಾದ ಸಿಂಧು, ಕಶ್ಯಪ್, ಶ್ರೀಕಾಂತ್, ಸಾಯಿ ಪ್ರಣೀತ್ ಕ್ವಾರ್ಟರ್ ಫೈನಲ್ ಪ್ರವೇಶಿಸುವಲ್ಲಿ ಸಫಲವಾಗಿದ್ದಾರೆ.
ನವದೆಹಲಿ[ಮಾ.29]: ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತೀಯ ಆಟಗಾರರು ಪ್ರಾಬಲ್ಯ ಮೆರೆದಿದ್ದಾರೆ.
ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ತಾರಾ ಆಟಗಾರರಾದ ಕಿದಂಬಿ ಶ್ರೀಕಾಂತ್, ಬಿ.ಸಾಯಿ ಪ್ರಣೀತ್, ಪಿ.ಕಶ್ಯಪ್, ಎಚ್.ಎಸ್.ಪ್ರಣಯ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದರೆ, ಮಹಿಳಾ ಸಿಂಗಲ್ಸ್‌ನಲ್ಲಿ ಪಿ.ವಿ.ಸಿಂಧು ಅಂತಿಮ 8ರ ಸುತ್ತು ಪ್ರವೇಶಿಸಿದ್ದಾರೆ.
2ನೇ ಸುತ್ತಿನ ಪಂದ್ಯದಲ್ಲಿ ಶ್ರೀಕಾಂತ್, ಚೀನಾದ ಲು ಗುಂವಾಗ್ಝು ವಿರುದ್ಧ 21-11, 21-16 ಗೇಮ್‌ಗಳಲ್ಲಿ ಗೆದ್ದರೆ, ಕಶ್ಯಪ್ ಥಾಯ್ಲೆಂಡ್ ಎದುರಾಳಿ ವಿರುದ್ಧ 21-11, 21-13ರಲ್ಲಿ ಜಯಿಸಿದರು. ಡೆನಾರ್ಕ್’ನ ಜಾರ್ಗೆನ್‌ಸನ್ ವಿರುದ್ಧ ಪ್ರಣಯ್ 21-19, 20-22, 21-17 ಗೇಮ್‌ಗಳಲ್ಲಿ ಗೆಲುವು ಪಡೆದರೆ, ಸಾಯಿ ಪ್ರಣೀತ್ ಭಾರತದವರೇ ಆದ ಸಮೀರ್ ವರ್ಮಾ ವಿರುದ್ಧ 18-21, 21-16, 21-15ರಲ್ಲಿ ಗೆಲುವು ಸಾಧಿಸಿದರು.
ಇದೇ ವೇಳೆ ಮಹಿಳಾ ಸಿಂಗಲ್ಸ್ 2ನೇ ಸುತ್ತಿನ ಪಂದ್ಯದಲ್ಲಿ ಸಿಂಧು, ಹಾಂಕಾಂಗ್‌ನ ಡೆಂಗ್ ವಿರುದ್ಧ 21-11, 21-13 ನೇರ ಗೇಮ್‌ಗಳಲ್ಲಿ ಸುಲಭ ಪಡೆದು ಕ್ವಾರ್ಟರ್ ಫೈನಲ್‌ಗೇರಿದರು.