ಮಲೇಷ್ಯಾ ಓಪನ್‌: ಸೆಮಿಗೇರಿದ ಸಿಂಧು, ಶ್ರೀಕಾಂತ್‌

First Published 30, Jun 2018, 10:09 AM IST
PV Sindhu, Kidambi Srikanth enter Malaysia Open semifinals
Highlights

ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಹಾಲಿ ಒಲಿಂಪಿಕ್ಸ್‌ ಚಾಂಪಿಯನ್‌, ಮಾಜಿ ವಿಶ್ವ ನಂ.1 ಸ್ಪೇನ್‌ನ ಕ್ಯಾರೋಲಿನಾ ಮರಿನ್‌ ವಿರುದ್ಧ 22-20, 21-19 ಗೇಮ್‌ಗಳಲ್ಲಿ ರೋಚಕ ಗೆಲುವು ಸಾಧಿಸಿದರು.

ಕೌಲಾಲಂಪುರ(ಜೂ.30]: ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ. ಸಿಂಧು ಮತ್ತು ಕಿದಂಬಿ ಶ್ರೀಕಾಂತ್‌, ಇಲ್ಲಿ ನಡೆಯುತ್ತಿರುವ ಮಲೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. 

ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಹಾಲಿ ಒಲಿಂಪಿಕ್ಸ್‌ ಚಾಂಪಿಯನ್‌, ಮಾಜಿ ವಿಶ್ವ ನಂ.1 ಸ್ಪೇನ್‌ನ ಕ್ಯಾರೋಲಿನಾ ಮರಿನ್‌ ವಿರುದ್ಧ 22-20, 21-19 ಗೇಮ್‌ಗಳಲ್ಲಿ ರೋಚಕ ಗೆಲುವು ಸಾಧಿಸಿದರು. 52 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಜಯಭೇರಿ ಬಾರಿಸಿದ ಸಿಂಧು, ಫೈನಲ್ ಪ್ರವೇಶಿಸಲು ವಿಶ್ವ ನಂ.1 ಹಾಗೂ ಅಗ್ರಶ್ರೇಯಾಂಕಿತೆ ಚೈನೀಸ್‌ ತೈಪೆಯ ತೈ ತ್ಸು ಯಿಂಗ್‌ರನ್ನು ಎದುರಿಸಲಿದ್ದಾರೆ.

ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಕಾಮನ್‌ವೆಲ್ತ್‌ ಗೇಮ್ಸ್‌ನ ಬೆಳ್ಳಿ ವಿಜೇತ ಶ್ರೀಕಾಂತ್‌, 21-18, 21-14 ಗೇಮ್‌ಗಳಲ್ಲಿ ಫ್ರಾನ್ಸ್‌ನ ಬ್ರೈಸ್‌ ಲೆವರ್ಡೆಜ್‌ರನ್ನು ಸೋಲಿಸಿದರು. ಶ್ರೀಕಾಂತ್‌ ಎದುರಾಳಿಯನ್ನು ಬಗ್ಗುಬಡಿಯಲು ತೆಗೆದುಕೊಂಡಿದ್ದು ಕೇವಲ 39 ನಿಮಿಷಗಳು ಮಾತ್ರ. ಸೆಮಿಫೈನಲ್‌ನಲ್ಲಿ ಶ್ರೀಕಾಂತ್‌ಗೆ ಜಪಾನ್‌ನ ಕೆಂಟೊ ಮೊಮೊಟರಿಂದ ಸವಾಲು ಎದುರಾಗಲಿದೆ.

loader