ಇಂದು ಬಿಡುಗಡೆಯಾದ ಬಿಡಬ್ಲ್ಯೂಎಫ್ ಶ್ರೇಯಾಂಕ ಪಟ್ಟಿಯಲ್ಲಿ ಸೈನಾ ಎರಡು ಸ್ಥಾನ ಮೇಲೇರಿದ್ದಾರೆ. ಪ್ರಸ್ತುತ ಸೈನಾ 8ನೇ ಸ್ಥಾನದಲ್ಲಿದ್ದಾರೆ.

ನವದೆಹಲಿ(ಏ.20): ಎರಡು ವಾರಗಳ ಹಿಂದಷ್ಟೇ ಇಂಡಿಯಾ ಓಪನ್ ಸೂಪರ್ ಸಿರೀಸ್ ಪ್ರಶಸ್ತಿ ಗೆದ್ದು ವೃತ್ತಿಜೀವನದ ಶ್ರೇಷ್ಠ 2ನೇ ಸ್ಥಾನಕ್ಕೆ ಏರಿದ್ದ ರಿಯೊ ಒಲಿಂಪಿಕ್ಸ್‌'ನ ರಜತ ಪದಕ ವಿಜೇತೆ ಭಾರತದ ಶಟ್ಲರ್ ಪಿ.ವಿ. ಸಿಂಧು, ವಿಶ್ವ ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ 3ನೇ ಶ್ರೇಯಾಂಕಕ್ಕೆ ಕುಸಿದಿದ್ದಾರೆ.

ಸಿಂಗಾಪುರ ಓಪನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌'ನ ಕ್ವಾರ್ಟರ್‌'ಫೈನಲ್‌'ನಲ್ಲಿ ಸ್ಪೇನ್‌'ನ ಕರೋಲಿನಾ ಮರಿನ್ ಎದುರು ಸೋತಿದ್ದ ಸಿಂಧು ಸ್ಥಾನ ಮತ್ತೆ ಶ್ರೇಯಾಂಕದಲ್ಲಿ ಏರಿಳಿತಗಳಾಗಿದ್ದವು.

ಇಂದು ಬಿಡುಗಡೆಯಾದ ಬಿಡಬ್ಲ್ಯೂಎಫ್ ಶ್ರೇಯಾಂಕ ಪಟ್ಟಿಯಲ್ಲಿ ಸೈನಾ ಎರಡು ಸ್ಥಾನ ಮೇಲೇರಿದ್ದಾರೆ. ಪ್ರಸ್ತುತ ಸೈನಾ 8ನೇ ಸ್ಥಾನದಲ್ಲಿದ್ದಾರೆ.

ಇನ್ನು, ಇತ್ತೀಚೆಗಷ್ಟೇ ಚೊಚ್ಚಲ ಬಾರಿಗೆ ಸಿಂಗಾಪುರ ಓಪನ್ ಸೂಪರ್ ಸೀರೀಸ್ ಪ್ರಶಸ್ತಿ ಗೆದ್ದ ಯುವ ಆಟಗಾರ ಬಿ. ಸಾಯಿ ಪ್ರಣೀತ್ 8 ಸ್ಥಾನ ಜಿಗಿತ ಕಂಡು ವಿಶ್ವದ 22ನೇ ಶ್ರೇಯಾಂಕಕ್ಕೆ ಲಗ್ಗೆಯಿಟ್ಟಿದ್ದಾರೆ.