Asianet Suvarna News Asianet Suvarna News

ಹಾಂಕಾಂಗ್ ಓಪನ್: ಫೈನಲ್'ನಲ್ಲಿ ಪಿವಿ ಸಿಂಧುಗೆ ವೀರೋಚಿತ ಸೋಲು

ಸದ್ಯ ವಿಶ್ವದ 10ನೇ ಶ್ರೇಯಾಂಕದಲ್ಲಿರುವ ಸಿಂಧು, ಈ ಟೂರ್ನಿಯ ಫೈನಲ್ ಹಂತಕ್ಕೇರಿದ ಸಾಧನೆಯಿಂದ ಎರಡು ಸ್ಥಾನ ಹೆಚ್ಚಿಸಿಕೊಳ್ಳಲಿದ್ದಾರೆ.

pv sindhu falters in the final of hongkong open badminton

ಹಾಂಕಾಂಗ್(ನ. 27): ಭಾರತದ ಅಗ್ರಮಾನ್ಯ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಹಾಂಕಾಂಗ್ ಓಪನ್ ಟೂರ್ನಿಯ ಫೈನಲ್'ನಲ್ಲಿ ಎಡವಿದರು. ಇಂದು ನಡೆದ ಅಂತಿಮ ಹಣಾಹಣಿಯಲ್ಲಿ ಚೈನೀಸ್ ಥೇಪೇ ದೇಶದ ಟಾಯ್ ಜು ಯಿಂಗ್ ವಿರುದ್ಧ ಸಿಂಧು 15-21, 17-21 ನೇರ ಸೆಟ್'ಗಳಿಂದ ಸೋಲನುಭವಿಸಿದರು.

ಇಂದಿನ ಫೈನಲ್'ನಲ್ಲಿ ಥೇಪೇ ಆಟಗಾರ್ತಿ ನಿಜಕ್ಕೂ ಅಸಾಮಾನ್ಯ ಆಟವಾಡಿದರು. ವಿಶ್ವದ ಮೂರನೇ ಶ್ರೇಯಾಂಕದ ಟಾಯ್ ಜು ಯಿಂಗ್ ಅವರು ಸೆಮಿಫೈನಲ್'ನಲ್ಲಿ ನಂಬರ್ ಒನ್ ಕರೋಲಿನಾ ಮಾರಿನ್ ಅವರನ್ನು ಸೋಲಿಸಿ ಫೈನಲ್'ಗೇರಿದ್ದರು. ಫೈನಲ್'ನಲ್ಲಿ ಅವರು ಸಿಂಧುಗೆ ಎಲ್ಲಿಯೂ ಅವಕಾಶವನ್ನೇ ನೀಡಲಿಲ್ಲ. ಭಾರತೀಯ ಆಟಗಾರ್ತಿ ತನ್ನದೆಲ್ಲವನ್ನೂ ಬಸಿದುಹಾಕಿದರೂ ಥೈಪೇ ಆಟಗಾರ್ತಿ ಎದುರು ದೀರ್ಘಕಾಲ ಮೇಲುಗೈ ಸಾಧಿಸಲು ಸಾಧ್ಯವಾಗಲಿಲ್ಲ.

ಪಿವಿ ಸಿಂಧು ಕಳೆದ ಬಾರಿ ನಡೆದ ಚೈನಾ ಓಪನ್ ಸೂಪರ್ ಸೀರೀಸ್ ಟೂರ್ನಿ ಗೆದ್ದಿದ್ದರು. ಆದರೆ, ಸಿಂಧುಗೆ ಸತತ ಎರಡು ಟೂರ್ನಿ ಗೆಲ್ಲುವ ಅವಕಾಶವನ್ನು ಥೈಪೆ ಆಟಗಾರ್ತಿ ನಿರಾಕರಿಸಿದರು. ಈ ಪಂದ್ಯಕ್ಕೆ ಮುನ್ನ ಟಾಯ್ ಜು ಯಿಂಗ್ ಮತ್ತು ಪಿವಿ ಸಿಂಧು 7 ಬಾರಿ ಮುಖಾಮುಖಿಯಾಗಿದ್ದರು. ಇದರಲ್ಲಿ ಥೈಪೇ ಹುಡುಗಿ 4 ಬಾರಿ ಗೆದ್ದಿದ್ದರೆ, ಸಿಂಧು 3 ಬಾರಿ ಜಯಶಾಲಿಯಾಗಿದ್ದರು. ಇದೀಗ ಈ ಸಮೀಕರಣವು 5-3 ಆದಂತಾಗಿದೆ.

ಸದ್ಯ ವಿಶ್ವದ 10ನೇ ಶ್ರೇಯಾಂಕದಲ್ಲಿರುವ ಸಿಂಧು, ಈ ಟೂರ್ನಿಯ ಫೈನಲ್ ಹಂತಕ್ಕೇರಿದ ಸಾಧನೆಯಿಂದ ಎರಡು ಸ್ಥಾನ ಹೆಚ್ಚಿಸಿಕೊಳ್ಳಲಿದ್ದಾರೆ.

Follow Us:
Download App:
  • android
  • ios