ಎರಡು ಕಾಲಿಲ್ಲವಾದ್ರೂ ಈಜು ವಿಭಾಗದಲ್ಲಿ ಪ್ಯಾರಾ ಏಷ್ಯನ್ ಗೇಮ್ಸ್‌ಗೆ ಆಯ್ಕೆಯಾದ ಕನ್ನಡಿಗ!

ದೇಹದ ಎಲ್ಲಾ ಅಂಗಾಂಗಗಳು ಸರಿಯಿದ್ರೂ ಸಾಧನೆ ಮಾಡಲು ವ್ಯವಸ್ಥೆಯಲ್ಲಿನ ಲೋಪದೋಷವನ್ನು ಎತ್ತಿಹಿಡಿಯೋ ಅದೆಷ್ಟೋ ಜನರ ಮಧ್ಯೆ ಅಪಘಾತವೊಂದರಲ್ಲಿ ಎರಡು ಕಾಲುಗಳನ್ನು ಕಳೆದುಕೊಂಡ ಯುವಕನೊಬ್ಬ ಇದೀಗ ಸಾಧನೆಯ ಶಿಖರವನ್ನೇರಿದ್ದಾನೆ.

a special abled youth from ballari selected for the 4th asian para games gvd

ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಬಳ್ಳಾರಿ

ಬಳ್ಳಾರಿ (ಅ.20): ‌ದೇಹದ ಎಲ್ಲಾ ಅಂಗಾಂಗಗಳು ಸರಿಯಿದ್ರೂ ಸಾಧನೆ ಮಾಡಲು ವ್ಯವಸ್ಥೆಯಲ್ಲಿನ ಲೋಪದೋಷವನ್ನು ಎತ್ತಿಹಿಡಿಯೋ ಅದೆಷ್ಟೋ ಜನರ ಮಧ್ಯೆ ಅಪಘಾತವೊಂದರಲ್ಲಿ ಎರಡು ಕಾಲುಗಳನ್ನು ಕಳೆದುಕೊಂಡ ಯುವಕನೊಬ್ಬ ಇದೀಗ ಸಾಧನೆಯ ಶಿಖರವನ್ನೇರಿದ್ದಾನೆ. 17 ವರ್ಷದ ಈ ಈಜುಪಟು ಇದೇ ತಿಂಗಳ 22 ರಿಂದ 28ರವರೆಗೆ ಚೀನಾದ ಹಾಂಗ್‌ನಲ್ಲಿ ನಡೆಯಲಿರುವ ಪ್ಯಾರಾ ಏಷ್ಯನ್ ಗೇಮ್ಸ್  ಆಯ್ಕೆಯಾಗೋ ಮೂಲಕ ಅಂಗವಿಕಲತೆ ಎನ್ನುವುದು ದೇಹಕ್ಕೆ ಹೊರತು ಸಾಧನೆಗಲ್ಲ ಎನ್ನುವದನ್ನು ಸಾಬೀತು ಮಾಡಿದ್ದಾನೆ.

ಸಾಧನೆಗೆ ಅಂಗವಿಕಲತೆ ಅಡ್ಡಿಯಲ್ಲ ಅನ್ನೋದು ಸಾಬೀತು: ಅಪಘಾತದಲ್ಲಿ ಎರಡು ಕಾಲನ್ನು ಕಳೆದುಕೊಂಡರು ಧೃತಿಗೇಡದೇ ಸಾಧಿಸಿ ತೋರಿಸಿದ್ದಾರೆ ಗೋಪಿಚಂದ್..ಅಪ್ಪಟ ಗ್ರಾಮೀಣ ಪ್ರತಿಭೆಯ ಸಾಧನೆಗೆ ಒಲಿದು ಬರುತ್ತದೆಯೇ ಏಷ್ಯಾನ್ ಗೇಮ್ಸ್ ನಲ್ಲಿ ಚಿನ್ನದ ಪದಕ..?  ಈ ಸಾಧಕನ ಹಿಂದೆ ಇದ್ದಾಳೆ ಮಹಿಳಾ ಕೋಚ್.  ಹೌದು, ಹೀಗೆ ಎರಡು ಕಾಲು ಇಲ್ಲದೇ ಇದ್ರೂ ಈಜುಕೊಳದಲ್ಲಿ ಬಿಟ್ಟುಬಿಡದೇ ಸ್ವಿಮ್ಮಿಂಗ್ ಮಾಡ್ತಿರೋ ಇವರ ಹೆಸರು ಗೋಪಿಚಂದ್ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕು ದರೋಜಿ ಗ್ರಾಮದವರು. ಎರಡನೇ ತರಗತಿ ಓದುತ್ತಿದ್ದಾಗ ರಸ್ತೆ ಅಪಘಾತದಲ್ಲಿ  ಗೋಪಿಚಂದ್ ತನ್ನ ಎರಡು ಕಾಲುಗಳನ್ನು ಕಳೆದುಕೊಂಡನು. 

ಹಾಸನ ಲೋಕಸಭಾ ಅಭ್ಯರ್ಥಿಯಾಗಿ ದೇವೇಗೌಡರು ನಿಲ್ಲಲಿ: ಶಾಸಕ ಎ.ಮಂಜು

ಆದ್ರೇ ತನಗೆ ಕಾಲಿಲ್ಲ ಎಂದು ಧೃತಿಗೆಡದೆ, ಗೋಪಿಚಂದ್ ಸುಮ್ಮನೆ ಕೂಡದೆ ಸಾಧನೆಯ ಒಂದೊಂದೇ ಮೆಟ್ಟಿಲು ಹತ್ತಿ, ಇಂದು ಅಂತಾರಾಷ್ಟ್ರೀಯ ಈಜುಪಟುವಾಗಿ ಹೊರಹೊಮ್ಮಿದ್ದಾರೆ. ಈಜಿನಲ್ಲಿ ಆಸಕ್ತಿ ಹೊಂದಿದ್ದ ಗೋಪಿಚಂದ್ ಅವರಿಗೆ ಬಳ್ಳಾರಿಯ ಕೋಚ್ ರಜಿನಿ ಲಕ್ಕಾ ನಿರಂತರ ಈಜನ್ನು ಕಲಿಸುವ ಮೂಲಕ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಅಲ್ಲದೇ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಪದಕ ಗೆಲ್ಲುವಂತೆ ಮಾಡಿದ್ದಾರೆ. ಇಷ್ಟೇ ಅಲ್ಲದೇ ಗೋಪಿ ಅರ್ಜುನ ಪ್ರಶಸ್ತಿಯನ್ನು ಪಡೆದಿದ್ದು, ಇದೇ ಮೊದಲ ಬಾರಿಗೆ ಏಷ್ಯಾನ್ ಗೇಮ್ಸ್ ಗೆ ಆಯ್ಕೆಯಾದ ಮೊದಲ ಕನ್ನಡಿಗೆ ಎನ್ನುವ ಖ್ಯಾತಿಯನ್ನು ಪಡೆದಿದ್ದಾರೆ. 

ರಾಷ್ಟ್ರೀಯ ಅಂತರಾಷ್ಟ್ರೀಯ ಆಯ್ತು ಇದೀಗ ಏಷ್ಯಾನ್ ಗೇಮ್ಸ್ ಪದಕದ ಸರದಿ: ಬಳ್ಳಾರಿ ಮೂಲದ ರಜಿನಿ ಅಂಗವಿಕಲ ಮಕ್ಕಳಿಗೆ ಈಜು ಕಲಿಸೋ ವಿಶೇಷ ತರಬೇತುದಾರರು ರಜಿನಿಯವರ ಹತ್ತು ವರ್ಷದ ಶ್ರಮದಿಂದಲೇ ಗೋಪಿಚಂದ ರಾಷ್ಟ್ರ, ಅಂತರರಾಷ್ಟ್ರ ಮಟ್ಟದ ಈಜು ಸ್ಪರ್ಧೆಯಲ್ಲಿ 23 ಚಿನ್ನ ಹಾಗೂ 8 ಬೆಳ್ಳಿ ಸೇರಿದಂತೆ ಅನೇಕ ಪದಕಗಳನ್ನು‌ ತಮ್ಮದಾಗಿಸಿಕೊಂಡಿದ್ದಾರೆ. ಇದಲ್ಲದೇ ತಂದೆ ರಾಜಶೇಖರ್ ಹಾಗೂ ತಾಯಿ ವಸಂತ ಅವರ ಪ್ರೋತ್ಸಾಹ ಮತ್ತು ಇದೀಗ ಹೆಚ್ಚಿನ ತರಬೇತಿ ನೀಡ್ತಿರೋ ಬೆಂಗಳೂರಿನ ಶರತ್ ಗಾಯಕ್ವಾಡ ಅವರ ನಿರಂತರ ತರಬೇತಿಯಿಂದ ಇಂದು ಗೋಪಿಚಂದ ಪ್ಯಾರ ಏಷ್ಯಾನ್ ಗೇಮ್ಸ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.  ಹೆಮ್ಮೆಯ ವಿಷಯವಾಗಿದೆ ಎನ್ನುತ್ತಾರೆ ತರಬೇತಿ ನೀಡಿದ ರಜಿನಿ ಲಕ್ಕಾ . 

ಉಪ್ಪು ತಿಂದವ ನೀರು ಕುಡಿಬೇಕು: ಡಿಕೆಶಿಗೆ ಟಕ್ಕರ್ ಕೊಟ್ಟ ಸಿ.ಟಿ.ರವಿ

ಎರಡು ಕಾಲುಗಳಿಲ್ಲದೇ ಇದ್ರೂ ಈಜಿನಲ್ಲಿ ಇವರೇ ನಂಬರ್ ಒನ್: ನಿರಂತರ ಪರಿಶ್ರಮದಿಂದ ಗೋಪಿಚಂದ ಏಷ್ಯಾನ್ ಗೇಮ್ಸ್ ತಲುಪಿದ್ದು, ಅಲ್ಲಿಯೂ ಚಿನ್ನ ಗೆಲ್ಲುವ ಮೂಲಕ ಕರ್ನಾಟಕದ ಕೀರ್ತಿ ಬಾನೆತ್ತರಕ್ಕೆರಿಸುವಂತೆ ಮಾಡಲಿ ಎನ್ನುವದೇ ರಾಜ್ಯದ ಜನರ ಆಶಯವಾಗಿದೆ.

Latest Videos
Follow Us:
Download App:
  • android
  • ios