ಇದೀಗ ಮತ್ತೊಮ್ಮೆ ಸಿಂಧು ಜಪಾನ್ ಆಟಗಾರ್ತಿ ಎದುರು ಮುಖಾಮುಖಿಯಾಗುತ್ತಿದ್ದು, ವಿಶ್ವ ಚಾಂಪಿಯನ್'ಶಿಪ್ ಸೋಲಿನ ಸೇಡು ತೀರಿಸಿಕೊಳ್ಳಲು ಹೈದರಾಬಾದ್ ಆಟಗಾರ್ತಿ ಸಿದ್ದವಾಗಿದ್ದಾರೆ.
ಸಿಯೋಲ್(ಸೆ.16): ದೇಶದ ಭರವಸೆಯ ಆಟಗಾರ್ತಿ, ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ. ಸಿಂಧು ಕೊರಿಯಾ ಓಪನ್ ಸೂಪರ್ ಸೀರಿಸ್'ನಲ್ಲಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.
ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಸೆಮಿಫೈನಲ್ ಪಂದ್ಯದಲ್ಲಿ ಚೀನಾದ ಹೀ ಬಿಂಗ್'ಜಿಯೋ ವಿರುದ್ಧ 21-10, 17-21, 21-16 ಸೆಟ್'ಗಳ ಅಂತರದಲ್ಲಿ ಜಯಭೇರಿ ಬಾರಿಸುವ ಮೂಲಕ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಇನ್ನು ಸಿಂಧು ಫೈನಲ್'ನಲ್ಲಿ ವಿಶ್ವಚಾಂಪಿಯನ್ ಜಪಾನಿನ ನೊಜೋಮಿ ಓಕೊಹರ ವಿರುದ್ಧ ಕಾದಾಡಲಿದ್ದಾರೆ.
ವಿಶ್ವದ ನಂ.4ನೇ ಶ್ರೇಯಾಂಕಿತೆ ಕಳೆದ ವರ್ಷ ಚೀನಾ ಓಪನ್ ಸೂಪರ್ ಸೀರಿಸ್ ಗೆದ್ದಿದ್ದ ಸಿಂಧು, ಈ ವರ್ಷ ಇಂಡಿಯನ್ ಓಪನ್ ಸೂಪರ್ ಸೀರಿಸ್, ಸೈಯ್ಯದ್ ಮೋದಿ ಗ್ರ್ಯಾಂಡ್ ಫಿಕ್ಸ್ ಹಾಗೂ ವಿಶ್ವ ಚಾಂಪಿಯನ್'ಶಿಪ್'ನಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದರು. ಇದೀಗ ಮತ್ತೊಮ್ಮೆ ಸಿಂಧು ಜಪಾನ್ ಆಟಗಾರ್ತಿ ಎದುರು ಮುಖಾಮುಖಿಯಾಗುತ್ತಿದ್ದು, ವಿಶ್ವ ಚಾಂಪಿಯನ್'ಶಿಪ್'ನ ಸೋಲಿನ ಸೇಡು ತೀರಿಸಿಕೊಳ್ಳಲು ಹೈದರಾಬಾದ್ ಆಟಗಾರ್ತಿ ಸಿದ್ದವಾಗಿದ್ದಾರೆ.
