ಯಾವ ರಾಜ್ಯದಿಂದ ಎಷ್ಟೆಷ್ಟು ಆಟಗಾರರು..? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಎರಡು ದಿನಗಳ ಬಹುನಿರೀಕ್ಷಿತ ಐಪಿಎಲ್ ಆಟಗಾರ ಹರಾಜು ಪ್ರಕ್ರಿಯೆಗೆ ಕೊನೆಗೂ ತೆರೆಬಿದ್ದಿದೆ. ಐಪಿಎಲ್ 11 ಆವೃತ್ತಿಯ ಹರಾಜಿನಲ್ಲಿ 580 ಆಟಗಾರರು ಹರಾಜಿನಲ್ಲಿ ಭಾಗವಹಿಸಿದ್ದರು. ಇದರಲ್ಲಿ 361 ಆಟಗಾರರು ಭಾರತೀಯ ಆಟಗಾರರಾಗಿದ್ದರು.

ಐಪಿಎಲ್'ನಲ್ಲಿ ಈ ಬಾರಿ ಐಪಿಎಲ್ ಹರಾಜಿನಲ್ಲಿ ಖರೀದಿಯಾದ ಆಟಗಾರರ ಪಟ್ಟಿಯಲ್ಲಿ ಪಂಜಾಬ್(12) ಮೊದಲ ಸ್ಥಾನ ಪಡೆದರೆ, ಕರ್ನಾಟಕ ಹಾಗೂ ಡೆಲ್ಲಿ(10) ಜಂಟಿ ಎರಡನೇ ಸ್ಥಾನದೊಂದಿಗೆ ಪ್ರಾಬಲ್ಯ ಮೆರೆದಿದೆ. ಕರ್ನಾಟಕದ ಮನೀಶ್ ಪಾಂಡೆ(SRH), ಕೆ.ಎಲ್ ರಾಹುಲ್(KXIP) 11 ಕೋಟಿಗೆ ಹರಾಜಾದರೆ, ಸ್ಪಿನ್ನರ್ ಕೆ. ಗೌತಮ್(RR)ಗೆ 6.20 ಕೋಟಿ ಸಿಕ್ಕಿದೆ. ರಾಬಿನ್ ಉತ್ತಪ್ಪ, ಕರುಣ್ ನಾಯರ್, ವಿನಯ್ ಕುಮಾರ್, ಮಯಾಂಕ್ ಅಗರ್'ವಾಲ್ ಕೂಡ ಉತ್ತಮ ಬೆಲೆಗೆ ವಿವಿಧ ಪ್ರಾಂಚೈಸಿಗಳು ಖರೀದಿಸಿದ್ದಾರೆ. ಇನ್ನು ತವರಿನ ತಂಡ ಆರ್'ಸಿಬಿ ಪವನ್ ದೇಶ್'ಪಾಂಡೆ, ಅನಿರುದ್ಧ್ ಅಶೋಕ್ ಜೋಶಿಯನ್ನು ತಲಾ 20 ಲಕ್ಷಕ್ಕೆ ಖರೀದಿಸಿದೆ.

ಯಾವ ರಾಜ್ಯದಿಂದ ಎಷ್ಟೆಷ್ಟು ಆಟಗಾರರು..? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

Scroll to load tweet…

ಹರಾಜಿನಲ್ಲಿ ಒಟ್ಟು 169 ಆಟಗಾರರನ್ನು ಪ್ರಾಂಚೈಸಿಗಳು ಖರೀದಿಸಿದ್ದಾರೆ. ಇದರಲ್ಲಿ 113 ಆಟಗಾರರು ಭಾರತೀಯ ಆಟಗಾರರಾದರೆ, 56 ಮಂದಿ ವಿದೇಶಿ ಕ್ರಿಕೆಟಿಗರು. ಇನ್ನು 91 ಮಂದಿ ಅಂತರಾಷ್ಟ್ರೀಯ ಪಂದ್ಯಗಳನ್ನಾಡಿದ್ದರೆ, 78 ಆಟಗಾರರು ಅಂತರಾಷ್ಟ್ರೀಯ ಪಂದ್ಯವನ್ನಾಡಿಲ್ಲ.